ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಜೆಟಿಪಿ ಕಾರುಗಳ ಫೇಸ್‌ಲಿಫ್ಟ್‌ ಅವತರಣಿಕೆ ಮಾರುಕಟ್ಟೆಗೆ

Last Updated 31 ಆಗಸ್ಟ್ 2019, 16:46 IST
ಅಕ್ಷರ ಗಾತ್ರ

ಟಾಟಾ ಮೋಟರ್ಸ್‌ನ ಪರ್ಫಾಮೆನ್ಸ್ ವಿಭಾಗ ‘ಜೆಟಿ ಸಪೆಷಲ್ ವೆಹಿಕಲ್ಸ್–ಜೆಟಿಎಸ್‌ವಿ’ ಟಿಯಾಗೊ ಜೆಟಿಪಿ ಮತ್ತು ಟಿಗಾರ್ ಜೆಟಿಪಿ ಸ್ಫೋರ್ಟ್ಸ್ ಕಾರುಗಳ ಫೇಸ್‌ಲಿಫ್ಟ್‌ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

2018ರಲ್ಲಿ ಜೆಟಿಪಿ ಅವತರಣಿಕೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಸಾಮಾನ್ಯ ಟಿಯಾಗೊ ಮತ್ತು ಟಿಗಾರ್‌ಗಳಿಗಿಂತ ಇವು ಭಿನ್ನವಾಗಿದ್ದವು. 1.2 ಲೀಟರ್ ಸಾಮರ್ಥ್ಯದ ಟರ್ಬೊ ಚಾರ್ಜರ್ ಪೆಟ್ರೋಲ್ ಎಂಜಿನ್ ಅನ್ನು ಜೆಟಿಪಿ ಅವತರಣಿಕೆಗಳಲ್ಲಿ ಅಳವಡಿಸಲಾಗಿತ್ತು. ಈ ಎಂಜಿನ್ ಬರೋಬ್ಬರಿ 112 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. ಈ ಎಂಜಿನ್ ಇರುವ ಟಿಯಾಗೊ ಜೆಟಿಪಿ ಮತ್ತು ಟಿಗಾರ್ ಜೆಟಿಪಿಗಳು ನಿಂತಲ್ಲಿಂದಪ್ರತಿಗಂಟೆಗೆ 100 ಕಿ.ಮೀ. ವೇಗ ಪಡೆಯಲು ಕೇವಲ 9.8 ಸೆಕೆಂಡ್ ಸಮಯ ತೆಗೆದುಕೊಳ್ಳುತ್ತವೆ. ಮಾರುಕಟ್ಟೆಗೆ ಬಂದ ನಂತರ ಇವು ಹೆಚ್ಚು ಜನಪ್ರಿಯತೆ ಪಡೆದಿವೆ.

ಈ ಕಾರುಗಳ ಆನ್‌ರೋಡ್ ಬೆಲೆ ₹ 9 ಲಕ್ಷಕ್ಕಿಂತ ಕಡಿಮೆಯಾಗುತ್ತದೆ. ಇಷ್ಟೇ ಸಾಮರ್ಥ್ಯದ, ಬೇರೆ ಕಂಪನಿಯ ಸ್ಫೋರ್ಟ್ಸ್‌ ಕಾರುಗಳ ಆನ್‌ರೋಡ್ ಬೆಲೆ ₹ 10 ಲಕ್ಷಕ್ಕಿಂತಲೂ ಹೆಚ್ಚು.

ಇವು ಪರ್ಫಾಮೆನ್ಸ್ ಕಾರುಗಳು ಆಗಿದ್ದರೂ, ಅವುಗಳಲ್ಲಿ ಕೆಲವು ಕೊರತೆಗಳು ಇವೆ ಎಂದು ಹಲವು ಗ್ರಾಹಕರು ದೂರಿದ್ದರು. ಆ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಟಾಟಾ ಮೋಟರ್ಸ್‌ ಈಗ ಫೇಸ್‌ಲಿಫ್ಟ್‌ ಅವತರಣಿಕೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಫೇಸ್‌ಲಿಫ್ಟ್‌ ಅವತರಣಿಕೆಗಲ್ಲಿ ಆಟೊ ಕ್ಲೈಮೆಟ್ ಕಂಟ್ರೋಲ್, ಎಲೆಕ್ಟ್ರಿಕಲಿ ಫೋಲ್ಡ್‌ಏಬಲ್ ವಿಂಗ್ ಮಿರರ್, ಏಳು ಇಂಚಿನ ಪರದೆಯ ಹರ್ಮಾನ್ ಮ್ಯೂಸಿಕ್ ಸಿಸ್ಟಂ, ಶಾರ್ಕ್ ಫಿನ್ ಆಂಟೆನಾ ಇರಲಿವೆ. ಇವು ಕಾರಿನ ಚಾಲನೆಯ ಮೋಜನ್ನು ಹೆಚ್ಚಿಸುತ್ತದೆ.

ದೆಹಲಿಯಲ್ಲಿಹೊಸ ಅವತರಣಿಕೆಯ ಟಿಯಾಗೊ ಜೆಟಿಪಿ ಮತ್ತು ಟಿಗಾರ್ ಜೆಟಿಪಿಯಎಕ್ಸ್‌ ಷೋರೂಂ ಬೆಲೆ ಕ್ರಮವಾಗಿ ₹ 6.69 ಲಕ್ಷ ಮತ್ತು ₹ 7.59 ಲಕ್ಷದಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT