ಮುಂಬೈ: ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯು ಸ್ವಾತಂತ್ರ್ಯ ದಿನದಂದು ತನ್ನ ಬಹುನಿರೀಕ್ಷಿತ ಹೊಸ ಎಸ್ಯುವಿ ಥಾರ್ ಅನಾವರಣಗೊಳಿಸಿದೆ.

ತಂತ್ರಜ್ಞಾನ ಮತ್ತು ಸುರಕ್ಷತೆ,ಕಾರ್ಯಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಸಂಪೂರ್ಣವಾಗಿ ಹೊಸತನದಿಂದ ಕೂಡಿದೆ. ಈ ಎಸ್ಯುವಿಯನ್ನು ಅಕ್ಟೋಬರ್ನಲ್ಲಿ ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿದೆ.

‘ಹೊಸ ಥಾರ್ ಅನಾವರಣ ಮಾಡುವ ಮೂಲಕ ಇತಿಹಾಸವನ್ನು ಮತ್ತೊಮ್ಮೆ ಬರೆದಿದ್ದೇವೆ. ಈ ಮಾದರಿಯ ವಿನ್ಯಾಸ ಮತ್ತು ಎಂಜಿನಿಯರಿಂಗ್ ದೇಶದಲ್ಲಿಯೇ ಆಗಿದೆ. ಇದರಲ್ಲಿ ಬಳಸಿರುವ ಬಹುತೇಕ ಬಿಡಿಭಾಗಗಳು ಸ್ಥಳೀಯವಾಗಿಯೇ ತಯಾರಾಗಿವೆ’ ಎಂದು ಕಂಪನಿಯು ವ್ಯವಸ್ಥಾಪಕ ನಿರ್ದೇಶಕ ಪವನ್ ಗೋಯೆಂಕಾ ತಿಳಿಸಿದ್ದಾರೆ.

ನಾಸಿಕ್ನಲ್ಲಿ ಇರುವ ಘಟಕದಲ್ಲಿ ಇದು ತಯಾರಾಗಿದೆ ಎಂದು ಕಂಪನಿ ತಿಳಿಸಿದೆ.

ವೈಶಿಷ್ಟ್ಯ

* ಬಿಎಸ್6 ಎಂಜಿನ್: 2.0 ಲೀಟರ್ ಪೆಟ್ರೋಲ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್

* ಹೊಸ ಗಿಯರ್ ಬಾಕ್ಸ್; 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೊಮೆಟಿಕ್ ಟ್ರಾನ್ಸ್ಮಿಷನ್ ಮತ್ತು 6 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ಮಿಷನ್

* ಆಸನಗಳ ಆಯ್ಕೆ: 4 ಫ್ರಂಟ್ ಫೇಸಿಂಗ್ ಸೀಟ್ಗಳು ಮತ್ತು 2+4 ಸೈಡ್ ಫೇಸಿಂಗ್ ಸೀಟ್ಗಳು

* 17.8 ಇಂಚು ಟಚ್ಸ್ಕ್ರೀನ್ ಎನ್ಫೊಟೇನ್ಮೆಂಟ್ ಸಿಸ್ಟಂ

* ರೂಫ್ ಮೌಂಟೆಡ್ ಸ್ಪೀಕರ್

* ಡ್ಯುಯಲ್ ಏರ್ಬ್ಯಾಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.