ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಷಿಕೋತ್ಸವದ ಸಂಭ್ರಮಕ್ಕೆ ಆಲ್ಟ್ರೋಜ್‌ ಐ-ಟರ್ಬೊ ಅನಾವರಣ

Last Updated 13 ಜನವರಿ 2021, 19:30 IST
ಅಕ್ಷರ ಗಾತ್ರ

ಟಾಟಾ ಮೋಟರ್ಸ್‌ ಕಂಪನಿಯು ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಆಗಿರುವ ಆಲ್ಟ್ರೋಜ್‌ನ ಮೊದಲ ವಾರ್ಷಿಕೋತ್ಸವದ ಸಂಭ್ರಮದ ಅಂಗವಾಗಿ ಆಲ್ಟ್ರೋಜ್‌ ಐ–ಟರ್ಬೊ ಅನ್ನು ಬುಧವಾರ ಅನಾವರಣ ಮಾಡಿದೆ.

ಇದೇ ತಿಂಗಳ 22ರಂದು ಬಿಡುಗಡೆ ಮಾಡಲಿದ್ದು, ಅದೇ ದಿನದಿಂದ ಮಾರಾಟವೂ ಆರಂಭವಾಗಲಿದೆ. ಬೆಲೆಯನ್ನೂ ಅಂದೇ ಪ್ರಕಟಿಸುವುದಾಗಿ ಕಂಪನಿ ತಿಳಿಸಿದೆ. ₹ 11 ಸಾವಿರ ಪಾವತಿಸಿ ಮುಂಗಡ ಬುಕಿಂಗ್‌ ಮಾಡಬಹುದಾಗಿದೆ.

ಎಕ್ಸ್‌ಇ, ಎಕ್ಸ್‌ಎಂ, ಎಕ್ಸ್‌ಎಂ ಪ್ಲಸ್‌, ಎಕ್ಸ್‌ಟಿ, ಎಕ್ಸ್‌ಜೆಡ್‌ ಮತ್ತು ಎಕ್ಸ್‌ಜೆಡ್‌ ಪ್ಲಸ್‌ ಹೀಗೆ ಒಟ್ಟಾರೆ ಆರು ಆವೃತ್ತಿಗಳಲ್ಲಿ ಲಭ್ಯವಿದೆ. 5 ಬಣ್ಣಗಳಲ್ಲಿ ಲಭ್ಯವಿದ್ದು, ಹಾರ್ಬರ್‌ ಬ್ಲೂ ಹೊಸದಾಗಿ ಸೇರ್ಪಡೆಯಾಗಿದೆ.

ಆಲ್ಟ್ರೋಜ್ ಐ–ಟರ್ಬೊ 1.2 ಲೀಟರ್‌ ಪೆಟ್ರೋಲ್‌ ಎಂಜಿನ್‌ ಹೊಂದಿದೆ. 110ಎಚ್‌ಪಿ ಮತ್ತು 140ಎನ್‌ಎಂ ಟಾರ್ಕ್‌ ಹಾಗೂ 5 ಸ್ಪೀಡ್‌ ಮ್ಯಾನುಯಲ್‌ ಗಿಯರ್‌ಬಾಕ್ಸ್‌ ಒಳಗೊಂಡಿದೆ. ಎಕ್ಸ್‌ಪ್ರೆಸ್‌ ಕೂಲ್‌ ಸೌಲಭ್ಯ ಹೊಂದಿದ್ದು, ಶೇ 70ರಷ್ಟು ವೇಗವಾಗಿ ಕೂಲಿಂಗ್‌ ಆಗಲಿದೆ. ಪ್ರತಿ ಗಂಟೆಗೆ 100 ಕಿ.ಮೀ ವೇಗ ತಲುಪಲು 11.9 ಸೆಕೆಂಡ್‌ ತೆಗೆದುಕೊಳ್ಳಲಿದೆ ಎಂದು ಕಂಪನಿ ತಿಳಿಸಿದೆ.

ಟಾಟಾ ಮೋಟರ್ಸ್‌ನ ಕನೆಕ್ಟೆಡ್ ಕಾರ್‌ ತಂತ್ರಜ್ಞಾನದಲ್ಲಿ iR ಸೌಲಭ್ಯ ಅಲ್ಲದೇ 27 ಹೊಸ ವೈಶಿಷ್ಟ್ಯಗಳು ಹಾಗೂ ಹಿಂದಿ, ಇಂಗ್ಲಿಷ್‌ ಮತ್ತು ಹಿಂಗ್ಲಿಷ್‌ ಭಾಷೆಗಳಲ್ಲಿ ವಾಯ್ಸ್‌ ಕಮಾಂಡ್‌ ಗುರುತಿಸುವ ವ್ಯವಸ್ಥೆಯನ್ನೂ ಒಳಗೊಂಡಿದೆ.

iRA ಆ್ಯಪ್‌ (ಇಂಟೆಲಿಜೆಂಟ್‌ ರಿಯಲ್‌ ಟೈಮ್‌ ಅಸಿಸ್ಟ್‌): iRA ಆ್ಯಪ್‌ನಲ್ಲಿ5 ಹಂತದ ಸಂಪರ್ಕ (ರಿಮೋಟ್‌ ಕಮಾಂಡ್‌, ವೆಹಿಕಲ್‌ ಸೆಕ್ಯುರಿಟಿ, ಲೊಕೇಷನ್‌ ಬೇಸ್ಡ್‌ ಸರ್ವೀಸಸ್‌, ಗೇಮಿಫಿಕೇಷನ್‌ ಹಾಗೂ ಲೈವ ವೆಹಿಕಲ್‌ ಡಯಾಗ್ನಸಿಸ್‌) ಹೊಂದಿದ್ದು, ಒಟ್ಟಾರೆ 27 ವೈಶಿಷ್ಟ್ಯಗಳಿಂದ ಕೂಡಿದೆ. ಆಲ್ಟ್ರೋಜ್‌ಗೆ ನ್ಯೂ ಹಾರ್ಬರ್‌ ಬ್ಲೂ ಕಲರ್‌ ಸೇರ್ಪಡೆಯಾಗಿದೆ. ಆಲ್ಟ್ರೋಜ್‌ನ ಎಕ್ಸ್‌ಎಂಪ್ಲಸ್‌ ಹಾಗೂ ಅದಕ್ಕಿಂತ ಮೇಲ್ಮಟ್ಟದ ಎಲ್ಲಾ ಆವೃತ್ತಿಗಳಲ್ಲಿ ಈ ಬಣ್ಣದ ಆಯ್ಕೆ ನೀಡಲಾಗಿದೆ. ಇಂಧನ ಟ್ಯಾಕ್‌ ಸಾಮರ್ಥ್ಯ 37 ಲೀಟರ್‌ ಇದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ 45 ಸಾವಿರ ಆಲ್ಟ್ರೋಜ್‌ ಮಾರಾಟ ಮಾಡಿದ್ದೇವೆ. ಬೇಡಿಕೆ ಉತ್ತಮವಾಗಿಯೇ ಇದೆ. ಐ–ರ್ಬೊ ಮಾದರಿಯು ಮಾರಾಟವನ್ನು ಇನ್ನಷ್ಟು ಹೆಚ್ಚಿಸುವ ವಿಶ್ವಾಸವಿದೆ’ ಎಂದು ಟಾಟಾ ಮೋಟರ್ಸ್‌ನ ಪ್ರಯಾಣಿಕ ವಾಹನ ವಿಭಾಗದ ಮುಖ್ಯಸ್ಥ ವಿವೇಕ್‌ ಶ್ರೀವತ್ಸ ಅವರು ವರ್ಚುವಲ್‌ ಸಭೆಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT