ಬೆಂಗಳೂರು: ಟಾಟಾ ಮೋಟರ್ಸ್ ಕಂಪನಿಯು ‘ಟಿಗಾರ್ ಇವಿ’ಯನ್ನು ಬುಧವಾರ ಅನಾವರಣ ಮಾಡಿದೆ. ವಿದ್ಯುತ್ ಚಾಲಿತ ವೈಯಕ್ತಿಕ ವಾಹನ ವಿಭಾಗದಲ್ಲಿ ‘ನೆಕ್ಸಾನ್ ಇವಿ’ ಬಳಿಕ ಕಂಪನಿಯು ಗ್ರಾಹಕರ ಮುಂದೆ ಇರಿಸಿರುವ ಎರಡನೇ ಮಾದರಿ ಇದಾಗಿದೆ.

ಕಂಪನಿಯು ತನ್ನ ಆಯ್ದ ವಿತರಣಾ ಕೇಂದ್ರಗಳಲ್ಲಿ ಬುಧವಾರದಿಂದ ಟಿಗಾರ್ ಇವಿ ಬುಕಿಂಗ್ ಆರಂಭಿಸಿದೆ. ₹ 21 ಸಾವಿರ ಪಾವತಿಸಿ ಈ ಕಾರು ಬುಕ್ ಮಾಡಬಹುದು. ಆಗಸ್ಟ್ 31ರಿಂದ ಗ್ರಾಹಕರಿಗೆ ವಿತರಣೆ ಶುರುವಾಗುವ ನಿರೀಕ್ಷೆ ಇದೆ.

ಟಿಗಾರ್ ಇವಿಯು ಕಂಪನಿಯ ಗರಿಷ್ಠ ವೋಲ್ಟೇಜ್ ಎಲೆಕ್ಟ್ರಿಕ್ ವ್ಯವಸ್ಥೆಯಾದ ಜಿಪ್ಟ್ರಾನ್‌ನಿಂದ ಚಾಲಿತವಾಗಿದೆ. ತಂತ್ರಜ್ಞಾನ, ಆರಾಮದಾಯಕ ಮತ್ತು ಸುರಕ್ಷತೆಯ ಆಧಾರದ ಮೇಲೆ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ವಿದ್ಯುತ್ ಚಾಲಿತ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಇಂತಹ ವಾಹನ ಖರೀದಿಸಲು ಬಯಸುವವರಿಗೆ ಬಗೆಬಗೆಯ ಆಯ್ಕೆಗಳನ್ನು ನೀಡುವುದು ಅತ್ಯವಶ್ಯಕ ಎಂದು ಟಾಟಾ ಮೋಟರ್ಸ್‌ನ ಪ್ರಯಾಣಿಕ ವಾಹನ ವಿಭಾಗದ ಉಪಾಧ್ಯಕ್ಷ ಆನಂದ್ ಕುಲಕರ್ಣಿ ಹೇಳಿದ್ದಾರೆ.

26 ಕಿಲೊವಾಟ್ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಈ ಕಾರಿನಲ್ಲಿ ಇದ್ದು, ಎಂಟು ವರ್ಷಗಳ ಬ್ಯಾಟರಿ ಮತ್ತು ಮೋಟರ್ ವಾರಂಟಿ ಇದೆ ಎಂದು ಕಂಪನಿ ತಿಳಿಸಿದೆ.

ರಿಮೋಟ್ ಕಮಾಂಡ್ಸ್ ಮತ್ತು ರಿಮೋಟ್ ಡಯಾಗ್ನಸ್ಟಿಕ್ಸ್ ಒಳಗೊಂಡು 30ಕ್ಕೂ ಅಧಿಕ ವೈಶಿಷ್ಟ್ಯಗಳು ಈ ಕಾರಿನಲ್ಲಿವೆ. ಗ್ರಾಹಕರು ಸ್ಮಾರ್ಟ್‌ಫೋನ್ ಮೂಲಕ ತಮ್ಮ ಕಾರಿನೊಂದಿಗೆ ಸಂಪರ್ಕದಲ್ಲಿ ಇರಬಹುದಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.