ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ನೆಕ್ಸಾನ್ ಇವಿ ಅನಾವರಣ

Last Updated 19 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಟಾಟಾ ಮೋಟರ್ಸ್‌ ಕಂಪನಿಯು ವಿದ್ಯುತ್‌ ಚಾಲಿತ ಎಸ್‌ಯುವಿ ‘ನೆಕ್ಸಾನ್‌ ಇವಿ’ಯನ್ನು ಗುರುವಾರ ಅನಾವರಣ ಮಾಡಿದೆ.

ವಾರದೊಳಗೆ ಬಿಡುಗಡೆ ಆಗಲಿದ್ದು, ಶುಕ್ರವಾರದಿಂದ ಬುಕಿಂಗ್‌ ಮಾಡಬಹುದುದಾಗಿದೆ.ಆನ್‌ಲೈನ್‌ ಅಥವಾ ಕ್ರೋಮಾ ಸ್ಟೋರ್‌ಗಳಲ್ಲಿ ಬುಕಿಂಗ್‌ ಮಾಡಬಹುದಾಗಿದೆ.ಬೆಲೆ ₹ 15 ಲಕ್ಷದಿಂದ ₹ 17 ಲಕ್ಷದವರೆಗೆ ಇರಲಿದೆಎಂದು ಕಂಪನಿ ತಿಳಿಸಿದೆ.

ಜಿಪ್ಟ್ರಾನ್‌ ತಂತ್ರಜ್ಞಾನದ ಮೊದಲ ವಿದ್ಯುತ್‌ ಚಾಲಿತ ವಾಹನ ಇದಾಗಿದೆ. ಒಂದು ಬಾರಿ ಚಾರ್ಜ್‌ ಮಾಡಿದರೆ 300 ಕಿ.ಮೀ ಚಾಲನಾ ಸಾಮರ್ಥ್ಯ ಹೊಂದಿದೆ.

‘ಫಾಸ್ಟ್‌ ಚಾರ್ಜಿಂಗ್‌ ಮೋಡ್‌ನಲ್ಲಿ 60 ನಿಮಿಷಗಳಲ್ಲಿ ಶೇ 80ರಷ್ಟು ಬ್ಯಾಟರಿ ಚಾರ್ಜ್‌ ಆಗಲಿದೆ. ಪೂರ್ತಿ ಚಾರ್ಜ್ ಆಗಲು 40 ನಿಮಿಷ ಬೇಕಾಗಲಿದೆ’ ಎಂದು ಟಾಟಾ ಮೋಟರ್ಸ್‌ನ ಎಲೆಕ್ಟ್ರಿಕ್‌ ಮೊಬಿಲಿಟಿ ಯುನಿಟ್‌ನ ಅಧ್ಯಕ್ಷ ಶೈಲೇಷ್‌ ಚಂದ್ರ ಮಾಹಿತಿ ನೀಡಿದ್ದಾರೆ.

ಕೆಲವು ವೈಶಿಷ್ಟ್ಯ

35 ಕನೆಕ್ಟೆಡ್‌ ಫೀಚರ್ಸ್‌

ಶುಕ್ರವಾರದಿಂದ ಬುಕಿಂಗ್‌

7 ಇಂಚಿನ ಹರ್ಮಾನ್‌ ಇನ್‌ಫೊಟೇನ್‌ಮೆಂಟ್‌ ಸಿಸ್ಟಂ

ಮೂರು ಆವೃತ್ತಿಗಳಲ್ಲಿ ಲಭ್ಯ

ಒಮ್ಮೆ ಚಾರ್ಜ್‌ ಮಾಡಿದರೆ 300 ಕಿ.ಮೀ ಚಾಲನಾ ಸಾಮರ್ಥ್ಯ

30.2 ಕಿಲೊವಾಟ್‌ ಲೀಥಿಯಂ ಐಯಾನ್‌ ಬ್ಯಾಟರಿ

8 ವರ್ಷಗಳವರೆ ಅಥವಾ 1.60 ಲಕ್ಷ ಕಿ.ಮೀವಾರಂಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT