ಟಿವಿಎಸ್ ಮೋಟರ್ ಕಂಪನಿಯು ಅಪಾಚೆ ಬೈಕ್ನ ಹೊಸ ಆವೃತ್ತಿ ಅಪಾಚೆ ಆರ್ಟಿಆರ್ 200 4ವಿ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಇದರ ಎಕ್ಸ್ ಷೋರೂಂ ಬೆಲೆ ₹ 1.31 ಲಕ್ಷ ಇದೆ.

‘ನಮ್ಮ ಗ್ರಾಹಕರು ಮತ್ತು ರೇಸಿಂಗ್ ಪ್ರಿಯರಿಗೆ ಆಧುನಿಕ ತಂತ್ರಜ್ಞಾನಹೊಂದಿರುವ ಬೈಕ್ಗಳನ್ನು ನೀಡುವ ನಮ್ಮ ಬದ್ಧತೆಗೆ ಅಪಾಚೆ ಸರಣಿಯು ಪೂರೈಸುತ್ತಾ ಬಂದಿದೆ’ ಎಂದು ಟಿವಿಎಸ್ ಮೋಟರ್ ಕಂಪನಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಮೇಘಶ್ಯಾಮ್ ಡಿಘೋಲೆ ತಿಳಿಸಿದ್ದಾರೆ.

ಈ ವಿಭಾಗದಲ್ಲಿಯೇ ಹೊಸತಾದ ವೈಶಿಷ್ಟ್ಯಗಳು ಹಾಗೂ ತಂತ್ರಜ್ಞಾನಗಳನ್ನು ಇದು ಒಳಗೊಂಡಿದೆ ಎಂದೂ ಅವರು ಹೇಳಿದ್ದಾರೆ.

ಈ ಬೈಕ್ನ ತೂಕ ಸುಮಾರು ಒಂದು ಕೆ.ಜಿ.ಅಷ್ಟು ಕಡಿಮೆ ಮಾಡಲಾಗಿದೆ. ಬ್ರೇಕ್ ಸಿಸ್ಟಮ್ನ ಬದಲಾವಣೆಯು ಅತ್ಯುತ್ತಮ ಹಾಗೂ ಕ್ಷಿಪ್ರವಾಗಿ ಅಳವಡಿಸಬಹುದಾದ ಸಾಮರ್ಥ್ಯವನ್ನು ನೀಡಲಿದೆ ಎಂದೂ ತಿಳಿಸಿದ್ದಾರೆ.

200 ಸಿಸಿ ಬೈಕ್, ಸ್ಪೋರ್ಟ್ಸ್, ಅರ್ಬನ್ ಮತ್ತು ರೈನ್ ಹೀಗೆ ಮೂರು ರೀತಿಯ ರೈಡಿಂಗ್ ಆಯ್ಕೆಗಳಲ್ಲಿ ಲಭ್ಯವಿದೆ.

ಅರ್ಬನ್ ಮೋಡ್: ಅರ್ಬನ್ ಮೋಡ್ನಲ್ಲಿ ಎಂಜಿನ್ನ ಸಾಮರ್ಥ್ಯವನ್ನು ಗರಿಷ್ಠ ಮಿತಿಯಲ್ಲಿ ಲಭ್ಯವಾಗುವಂತೆ ಹೊಂದಿಸಲಾಗಿದೆ. ಎಬಿಎಸ್ ತ್ವರಿತಗತಿಯಲ್ಲಿ ಸ್ಪಂದಿಸುವಂತೆ ಈ ಮೋಡ್ ಅನ್ನು ರೂಪಿಸಲಾಗಿದೆ.

ರೇನ್ ಮೋಡ್: ತೇವದ ರಸ್ತೆಯ ಸ್ಥಿತಿಯಲ್ಲಿಯೂ ವಾಹನದ ಮೇಲೆ ನಿಯಂತ್ರಣವನ್ನು ಹೊಂದುವುದು ಇದರಿಂದ ಸಾಧ್ಯವಾಗಲಿದೆ.

ಸ್ಪೋರ್ಟ್ ಮೋಡ್: ಮುಖ್ಯವಾಗಿ ಹೆದ್ದಾರಿಗಳಲ್ಲಿ ತಕ್ಷಣದಲ್ಲಿ ವಾಹನದ ಮೇಲೆ ನಿಯಂತ್ರಣ ಹೊಂದಲು ಸಹಕಾರಿಯಾಗಿದೆ. ಎಬಿಎಸ್ ಅನ್ನು ಈ ಮೋಡ್ನಲ್ಲಿ ಕನಿಷ್ಠ ಹಸ್ತಕ್ಷೇಪಕ್ಕೆ ಒಳಗಾಗುವಂತೆ ಹಾಗೂ ಅಧಿಕ ವೇಗದಲ್ಲಿ ಸ್ಪಂದಿಸುವಂತೆ ಹೊಂದಿಕೆ ಮಾಡಲಾಗಿದೆ.

ಈ ಹೊಸ ಅಪಾಚೆ ಡ್ಯುಯಲ್ ಚಾನಲ್ ಎಬಿಎಸ್, ಹೊಂದಿಸಬಹುದಾದ ಸಸ್ಪೆನ್ಷನ್ ಮತ್ತು ಸುಧಾರಿತ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.