ಬುಧವಾರ, ಏಪ್ರಿಲ್ 14, 2021
31 °C

ಬೊಲೆರೊ ಮೇಲೆ ಮನೆ ಮಾಡಿಕೊಡುವಿರಾ?: ಆನಂದ್ ಮಹೀಂದ್ರಾ ಪ್ರಶ‌್ನೆ

ಡೆಕ್ಕನ್ ಹೆರಾಲ್ಡ್ Updated:

ಅಕ್ಷರ ಗಾತ್ರ : | |

Credit: Reuters/Instagram Photo/@the.billboards.collective

ಬೆಂಗಳೂರು: ಮಹೀಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಈ ಬಾರಿ ಅವರು ಟ್ವೀಟ್ ಒಂದನ್ನು ಮಾಡುವ ಜತೆಗೇ, ಅನ್ವೇಷಕನೊಬ್ಬನಿಗೆ ತಮ್ಮೊಂದಿಗೆ ಕೆಲಸ ಮಾಡುವ ಆಫರ್ ನೀಡಿದ್ದಾರೆ.

ಚೆನ್ನೈ ಮೂಲದ ವಾಸ್ತುಶಿಲ್ಪಿ ಅರುಣ್ ಪ್ರಭು ಎನ್ ಜಿ ಎಂಬವರು ಅಟೊ ರಿಕ್ಷಾ ಒಂದನ್ನು ಪರಿವರ್ತಿಸಿ, ಪುಟ್ಟ ಮನೆಯನ್ನಾಗಿ ರಚಿಸಿದ್ದಾರೆ. ಅದಕ್ಕೆ SOLO.01 ಎಂದು ಹೆಸರು ಇರಿಸಿದ್ದಾರೆ. ಈ ಬಗ್ಗೆ ಟ್ವಿಟರ್ ಬಳಕೆದಾರರೊಬ್ಬರು ಆನಂದ್ ಮಹೀಂದ್ರಾ ಅವರ ಗಮನ ಸೆಳೆದಿದ್ದರು.

ಅದಕ್ಕೆ ಪ್ರತಿಕ್ರಿಯೆ ನೀಡಿರುವ ಆನಂದ್ ಮಹೀಂದ್ರಾ, ಅರುಣ್ ಅವರು ಕಡಿಮೆ ಸ್ಥಳಾವಕಾಶದಲ್ಲಿಯೇ ಅತ್ಯಂತ ಹೆಚ್ಚಿನದನ್ನು ತಯಾರಿಸಿ ತೋರಿಸಿದ್ದಾರೆ. ಅವರು ಇನ್ನಷ್ಟು ಹೆಚ್ಚಿನದನ್ನು ರಚಿಸಬೇಕಿದೆ, ಬೊಲೆರೊ ಪಿಕಪ್ ವಾಹನದಲ್ಲಿ ಹೆಚ್ಚಿನ ಸ್ಥಳ ಇರುವಂತಹ ಇಂತಹ ರಚನೆಯನ್ನು ಅರುಣ್ ತಯಾರಿಸುವರೇ? ನಮಗೆ ಅವರನ್ನು ಸಂಪರ್ಕಿಸಲು ಸಹಕರಿಸಿ ಎಂದು ಟ್ವೀಟ್ ಮಾಡಿದ್ದಾರೆ.

 

ಅರುಣ್ ನಿರ್ಮಿಸಿರುವ ಅಟೊ ಮನೆಯಲ್ಲಿ ಪುಟ್ಟ ಅಡುಗೆಕೋಣೆ, ಬೆಡ್ ರೂಮ್, ಶೌಚಗೃಹ, ತಾರಸಿ ವ್ಯವಸ್ಥೆಯಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು