ಶನಿವಾರ, ಜುಲೈ 2, 2022
27 °C
ಸೆಮಿಕಂಡಕ್ಟರ್‌ ಕೊರತೆ, ವಾಹನಗಳ ಬೆಲೆ ಹೆಚ್ಚಳ ಪರಿಣಾಮ

ಫೆಬ್ರುವರಿಯಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟ ಶೇ 23ರಷ್ಟು ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸೆಮಿಕಂಡಕ್ಟರ್‌ ಚಿಪ್‌ ಕೊರತೆ ಮತ್ತು ವಾಹನಗಳ ಬೆಲೆ ಏರಿಕೆಯ ಕಾರಣಗಳಿಂದಾಗಿ 2021ರ ಫೆಬ್ರುವರಿಗೆ ಹೋಲಿಸಿದರೆ 2022ರ ಫೆಬ್ರುವರಿಯಲ್ಲಿ  ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಶೇಕಡ 23ರಷ್ಟು ಇಳಿಕೆ ಆಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಶುಕ್ರವಾರ ತಿಳಿಸಿದೆ.

2021ರ ಫೆಬ್ರುವರಿಯಲ್ಲಿ 17.35 ಲಕ್ಷ ವಾಹನಗಳು ಮಾರಾಟ ಆಗಿದ್ದವು. 2022ರ ಫೆಬ್ರುವರಿಯಲ್ಲಿ 13.28 ಲಕ್ಷ ವಾಹನಗಳು ಮಾರಾಟ ಆಗಿವೆ.

‘ಸೆಮಿಕಂಡಕ್ಟರ್‌ ಕೊರತೆ, ತಯಾರಿಕಾ ವೆಚ್ಚ ಹೆಚ್ಚಳ, ಸರಕುಗಳ ಬೆಲೆ ಏರಿಕೆ ಮತ್ತು ಸಾಗಣೆ ವೆಚ್ಚ ಗರಿಷ್ಠ ಮಟ್ಟದಲ್ಲಿ ಇರುವುದು... ಹೀಗೆ ಹಲವು ಕಾರಣಗಳಿಂದಾಗಿ ಮಾರಾಟದ ಮೇಲೆ ಪರಿಣಾಮ ಉಂಟಾಗಿದೆ’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಮೆನನ್‌ ಹೇಳಿದ್ದಾರೆ.

ಮಾರಾಟದ ವಿವರ (ಲಕ್ಷಗಳಲ್ಲಿ)

ಮಾದರಿ;2021 ಫೆಬ್ರುವರಿ;2022 ಫೆಬ್ರುವರಿ

ಪ್ರಯಾಣಿಕ ವಾಹನ; 2.81; 2.62

ಪ್ರಯಾಣಿಕ ಕಾರು;1.55; 1.33;

ಯುಟಿಲಿಟಿ ವಾಹನ;1.14; 1.20

ದ್ವಿಚಕ್ರ ವಾಹನ;14.26; 10.37

ತ್ರಿಚಕ್ರ; 27,656; 27,039*

(* ತ್ರಿಚಕ್ರ ವಾಹನಗಳ ಅಂಕಿ–ಅಂಶವು ಸಾವಿರದ ಲೆಕ್ಕದಲ್ಲಿ ಇದೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು