ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕ್ಟ್ರಿಕ್‌ ಕಾರುಗಳ ಜಮಾನ; ಟೆಸ್ಲಾಗೆ ಪೈಪೋಟಿ ನೀಡಲು ಪೋರ್ಷ್‌ ಸಜ್ಜು

Last Updated 20 ನವೆಂಬರ್ 2019, 10:29 IST
ಅಕ್ಷರ ಗಾತ್ರ

ಲಾಸ್‌ ಏಂಜಲೀಸ್‌:2025ರ ವೇಳೆಗೆ ಒಟ್ಟು ಉತ್ಪಾದನೆಯಲ್ಲಿ ಅರ್ಧಕ್ಕಿಂತ ಹೆಚ್ಚು ವಿದ್ಯುತ್‌ ಚಾಲಿತ ಕಾರುಗಳು ಇರಲಿವೆ ಎಂದುಜರ್ಮನಿಯ ಐಷಾರಾಮಿ ಸ್ಪೋರ್ಟ್ಸ್‌ ಕಾರು ತಯಾರಿಕಾ ಬ್ರ್ಯಾಂಡ್‌ ಪೋರ್ಷ್‌ನ ಉತ್ತರ ಅಮೆರಿಕ ಮುಖ್ಯಸ್ಥ ಮಂಗಳವಾರ ಹೇಳಿದ್ದಾರೆ.

ಪೋರ್ಷ್‌ನ ಎಲೆಕ್ಟ್ರಿಕ್‌ ಕಾರುಟೇಕಾನ್
ಪೋರ್ಷ್‌ನ ಎಲೆಕ್ಟ್ರಿಕ್‌ ಕಾರುಟೇಕಾನ್

'ಎಲೆಕ್ಟ್ರಿಕ್‌ ಕಾರುಗಳೇ ಭವಿಷ್ಯ' ಎಂದಿರುವ ಪೋರ್ಷ್‌ನ ಕೌಸ್‌ ಜೆಲ್ಮರ್, ಬ್ಯಾಟರಿ ಶಕ್ತಿಯಿಂದ ಚಲಿಸುವ ವಾಹನಗಳ ತಯಾರಿಕೆ ಬಗ್ಗೆ ಕಂಪನಿಯು ಅತೀವ ಕಾಳಜಿ ಹೊಂದಿದೆ ಎಂದಿದ್ದಾರೆ. ಪ್ರಸ್ತುತ ಅಮೆರಿಕದಲ್ಲಿ ಟೆಸ್ಲಾ ಕಂಪನಿ ವಿದ್ಯುತ್‌ ಚಾಲಿತ ವಾಹನ ತಯಾರಿಕೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿದೆ.

'ವರ್ಷದ ಒಟ್ಟು ಕಾರು ತಯಾರಿಕೆಯಲ್ಲಿ ಶೇ 50ಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಪ್ಲಗ್‌ ಇನ್ ಹೈಬ್ರೀಡ್‌ ತಂತ್ರಜ್ಞಾನ ಒಳಗೊಂಡ ಅಥವಾ ಪೂರ್ಣ ಬ್ಯಾಟರಿ ಶಕ್ತಿ ಬಳಸುವ ಕಾರುಗಳನ್ನು ಪೋರ್ಷ್‌ 2025ರ ವೇಳೆಗೆ ಸಾಧಿಸಲಿದೆ' ಎಂದು ಘೋಷಿಸಿದ್ದಾರೆ.

ಪೋಕ್ಸ್‌ವ್ಯಾಗನ್‌ ಸಮೂಹದ ಪೋರ್ಷ್‌, ವಿದ್ಯುತ್‌ ಚಾಲಿತ ಕಾರು 'ಟೇಕಾನ್'ನ್ನು ಸೆಪ್ಟೆಂಬರ್‌ನಲ್ಲಿ ನಡೆದ ಫ್ರಾಂಕ್‌ಫರ್ಟ್‌ ಇಂಟರ್‌ನ್ಯಾಷನಲ್‌ ಆಟೊ ಶೋನಲ್ಲಿ ಪ್ರದರ್ಶಿಸಲಾಗಿತ್ತು.

ಸಂಪೂರ್ಣ ವಿದ್ಯುತ್‌ ಚಾಲಿತ ಸ್ಫೋರ್ಟ್ಸ್‌ ಕಾರು ಟೇಕಾನ್, ಶೂನ್ಯದಿಂದ ಗಂಟೆಗೆ 60 ಮೈಲಿ ವೇಗವನ್ನು 3 ಸೆಕೆಂಡ್‌ಗಿಂತಲೂ ಕಡಿಮೆ ಅವಧಿಯಲ್ಲಿ ಮುಟ್ಟುತ್ತದೆ. ಐಷಾರಾಮಿ ಎಲೆಕ್ಟ್ರಿಕ್‌ ಕಾರು ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸಿರುವ ಟೆಸ್ಲಾಗೆ ಪೈಪೋಟಿ ನೀಡಲು ಪೋರ್ಷ್‌ ಸಿದ್ಧತೆ ನಡೆಸಿದೆ. ಪೋರ್ಷ್ ಪಾಲಿಗೆಅಮೆರಿಕ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿದ್ದು, ಕಳೆದ ವರ್ಷ 57,000 ಕಾರುಗಳನ್ನು ಮಾರಾಟ ಮಾಡಿದೆ.

ಟೆಸ್ಲಾ ವೈ(Y) ಮಾದರಿಯ ಕಾರುಗಳಿಗೆ ನೇರ ಪೈಪೋಟಿಯಾಗಿ ಪೋರ್ಷ್‌ 'ಮಕಾನ್‌' ಎಸ್‌ಯುವಿ ಸಜ್ಜುಗೊಳಿಸುತ್ತಿದ್ದು, 2021ಕ್ಕೆ ಮಕಾನ್‌ ಕಾರುಗಳ ಮಾರಾಟ ಮಾಡಲು ಯೋಜನೆ ರೂಪಿಸಿದೆ. ಚೀನಾದ ಶಾಂಘೈನಲ್ಲಿ ಕಳೆದ ತಿಂಗಳು ಟೆಸ್ಲಾ 'ಗಿಗಾಫ್ಯಾಕ್ಟರಿ' ತೆರೆದು ಕಾರು ಉತ್ಪಾದನೆ ಆರಂಭಿಸಿದೆ. ಈ ಮೂಲಕ ಟೆಸ್ಲಾ ಚೀನಾದಲ್ಲಿ ಪೋರ್ಷ್‌ಗೆ ನೇರ ಸ್ಪರ್ಧಿಯಾಗಿ ನಿಲ್ಲುವ ಪ್ರಯತ್ನ ನಡೆಸಿದೆ.

ಟೆಸ್ಲಾ ವೈ(Y) ಮಾದರಿ ಕಾರು
ಟೆಸ್ಲಾ ವೈ(Y) ಮಾದರಿ ಕಾರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT