ನವದೆಹಲಿ: ವಿದ್ಯುತ್ ಚಾಲಿತ ಕಾರುಗಳು, ಬಸ್ಸುಗಳು ಮತ್ತು ಟ್ರಕ್ಕುಗಳಿಗೆ ‘ಎವಿಎಎಸ್’ ಸೌಲಭ್ಯ ಅಳವಡಿಸುವುದನ್ನು ಕಡ್ಡಾಯ ಮಾಡಬೇಕು ಎಂಬ ಪ್ರಸ್ತಾವನೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸಿದ್ಧಪಡಿಸಿದೆ.

2027ರ ಅಕ್ಟೋಬರ್ 1ರಿಂದ ಈ ವ್ಯವಸ್ಥೆಯು ಜಾರಿಗೆ ಬರಬೇಕು ಎಂದು ಪ್ರಸ್ತಾವದಲ್ಲಿ ಹೇಳಲಾಗಿದೆ. ರಸ್ತೆ ಸುರಕ್ಷತೆಯನ್ನು ಗಮನದಲ್ಲಿ ಇರಿಸಿಕೊಂಡು ಈ ಪ್ರಸ್ತಾವ ಸಿದ್ಧಪಡಿಸಲಾಗಿದೆ.

2026ರ ಅಕ್ಟೋಬರ್ 1ರ ನಂತರ ತಯಾರಾಗುವ ಕೆಲವು ವಿದ್ಯುತ್ ಚಾಲಿತ ಪ್ರಯಾಣಿಕ ವಾಹನಗಳು ಹಾಗೂ ಸರಕು ಸಾಗಣೆ ವಾಹನಗಳು ಕೂಡ ಎವಿಎಎಸ್ ಸೌಲಭ್ಯ ಹೊಂದಿರಬೇಕು ಎಂದು ಸಚಿವಾಲಯ ಹೊರಡಿಸಿರುವ ಕರಡು ಅಧಿಸೂಚನೆಯಲ್ಲಿ ಹೇಳಲಾಗಿದೆ. ಎವಿಎಎಸ್ ಸೌಲಭ್ಯ ಇರುವ ಇ.ವಿ.ಗಳು ಪಾದಚಾರಿಗಳನ್ನು ಎಚ್ಚರಿಸುವ ರೀತಿಯಲ್ಲಿ ಕೃತಕವಾಗಿ ಶಬ್ದ ಮಾಡುತ್ತವೆ. ಇದರಿಂದಾಗಿ ಪಾದಚಾರಿಗಳಿಗೆ ವಾಹನವೊಂದು ಬರುತ್ತಿದೆ ಎಂಬುದು ಅರಿವಿಗೆ ಬರುತ್ತದೆ.

‘ಹೊಸ ಮಾದರಿಯ ವಾಹನಗಳಾದರೆ 2026ರ ಅಕ್ಟೋಬರ್ 1ರಿಂದ ಹಾಗೂ ಹಾಲಿ ಇರುವ ಮಾದರಿಗಳಾದರೆ 2027ರ ಅಕ್ಟೋಬರ್ 1ರಿಂದ ಎವಿಎಎಸ್ ವ್ಯವಸ್ಥೆಯನ್ನು ಹೊಂದಿರಬೇಕು’ ಎಂದು ಕರಡು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಅಮೆರಿಕ, ಜಪಾನ್, ಐರೋಪ್ಯ ಒಕ್ಕೂಟದ ಕೆಲವು ದೇಶಗಳು ಹೈಬ್ರಿಡ್ ವಾಹನಗಳಲ್ಲಿ ಎವಿಎಎಸ್ ಸೌಲಭ್ಯ ಇರುವುದು ಕಡ್ಡಾಯ ಎಂಬ ನಿಯಮವನ್ನು ಈಗಾಗಲೇ ಜಾರಿಗೆ ತಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.