ಸೋಮವಾರ, ಏಪ್ರಿಲ್ 12, 2021
26 °C

ದ್ವಿಚಕ್ರ ವಾಹನ ಲೀಸಿಂಗ್‌: ಹೆಚ್ಚಿದ ಒಲವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದ್ವಿಚಕ್ರ ವಾಹನ ಖರೀದಿಸಲು ಅಗತ್ಯವಾದ ಹಣ ಹೊಂದಿಸಲು ಗ್ರಾಹಕರು ತಮ್ಮ ವಾಹನವನ್ನು ಹಣಕಾಸು ಸಂಸ್ಥೆಗಳಿಗೆ ಗುತ್ತಿಗೆ ನೀಡುವುದನ್ನು (vehicle leasing) ಆಯ್ಕೆ ಮಾಡುವ ಪ್ರವೃತ್ತಿಯಲ್ಲಿ ಗಮನಾರ್ಹ ಹೆಚ್ಚಳ ( ಶೇ 330) ಕಂಡು ಬಂದಿದೆ ಎಂದು ಪರ್ಯಾಯ ಹಣಕಾಸಿನ ನವೋದ್ಯಮವಾಗಿರುವ ಒಟಿಒ ಕ್ಯಾಪಿಟಲ್‌ನ (OTO Capital) ವರದಿಯಲ್ಲಿ ತಿಳಿಸಲಾಗಿದೆ.

‘ಲಾಕ್‌ಡೌನ್ ನಂತರದ ದಿನಗಳಲ್ಲಿ ಸಮೂಹ ಸಾರಿಗೆ ಬದಲು ಸ್ವಂತದ ದ್ವಿಚಕ್ರ ವಾಹನ ಖರೀದಿಯಲ್ಲಿ ಹೆಚ್ಚಳ ಕಂಡುಬಂದಿದ್ದು, ಬೈಕ್ ಖರೀದಿಸುವವರಲ್ಲಿನ ಅನೇಕರು ‘ಒಟಿಒ‘ದಂತಹ ಅಗ್ಗದ ಮತ್ತು ಅನುಕೂಲಕರ ಆಯ್ಕೆಗಳನ್ನು ಒಳಗೊಂಡಿರುವ ಪರ್ಯಾಯ ಹಣಕಾಸು ಸೌಲಭ್ಯಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ’ ಎಂದು ಒಟಿಒ ಕ್ಯಾಪಿಟಲ್‌ನ ಸಹ ಸ್ಥಾಪಕ ಸುಮಿತ್ ಛಾಜೆದ್ ಅವರು ಹೇಳುತ್ತಾರೆ. ‘ದ್ವಿಚಕ್ರ ವಾಹನ ಖರೀದಿಸಲು ಬರುವ ಗ್ರಾಹಕರು ಪರ್ಯಾಯ ಹಣಕಾಸು ಆಯ್ಕೆಗಾಗಿ ವಾಹನ ಲೀಸಿಂಗ್ ನೀಡುವುದರ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ’ ಎಂದು ವಿಎಫ್‌ಎಂ ಹೋಂಡಾದ ವ್ಯವಸ್ಥಾಪಕ ನಿರ್ದೇಶಕ ಮನ್‌ದೀಪ್ ಚಾಂದ್ ಅವರು ಹೇಳುತ್ತಾರೆ.

ಬೆಂಗಳೂರಿನಲ್ಲಿ ವಾಹನ ಖರೀದಿಗೆ ಪರ್ಯಾಯ ಹಣಕಾಸು ಸೌಲಭ್ಯವಾಗಿರುವ ವಾಹನಗಳನ್ನು ಗುತ್ತಿಗೆ ನೀಡುವ ಹಣಕಾಸು ಸೌಲಭ್ಯ ಒದಗಿಸಲು 30 ಹೊಸ ವಾಹನ ಡೀಲರ್‌ಗಳು ಒಟಿಒ ಕ್ಯಾಪಿಟಲ್ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದರಿಂದ ಈ ಸೌಲಭ್ಯ ಒದಗಿಸುವ ಡೀಲರ್‌ಗಳ ಸಂಖ್ಯೆ 90ಕ್ಕೆ ಏರಿದೆ. ತಮ್ಮಲ್ಲಿಗೆ ಬರುವ ಗ್ರಾಹಕರಿಗೆ ‘ಒಟಿಒ‘ದ ಈ ಹೆಚ್ಚು ಅನುಕೂಲಕರವಾದ ವಾಹನ ಮಾಲೀಕತ್ವದ ಸೌಲಭ್ಯ ಒದಗಿಸಲು ಸಂಪೂರ್ಣ ಆನ್‌ಲೈನ್ ಮಾದರಿಯಲ್ಲಿನ ಈ ಯಶಸ್ವಿ ಸೌಲಭ್ಯಕ್ಕೆ ಡೀಲರ್‌ಗಳಿಂದ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ. 2021ರಲ್ಲಿ ಬೆಂಗಳೂರಿನಲ್ಲಿ 10 ಸಾವಿರ ಗ್ರಾಹಕರಿಗೆ ಒಟಿಒದ ಅನುಕೂಲಕರ ಮಾಲೀಕತ್ವ ಯೋಜನೆ ಒದಗಿಸಲು ಒಟಿಒ ಗುರಿ ಹಾಕಿಕೊಂಡಿದೆ.

ವಾಹನ ಉದ್ದಿಮೆಯಲ್ಲಿ ಚೇತರಿಕೆಯ ಲಕ್ಷಣಗಳು ಕಂಡು ಬರುತ್ತಿರುವುದರಿಂದ ವಾಹನ ಖರೀದಿಗೆ ಬ್ಯಾಂಕ್ ಸಾಲದ ಬದಲು ವಾಹನ ಗುತ್ತಿಗೆ ನೀಡುವ ಆಯ್ಕೆಗೆ ಗ್ರಾಹಕರಲ್ಲಿ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ. ಕಳೆದ 3 ತಿಂಗಳಲ್ಲಿ 700ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಲೀಸ್‌ಗೆ ನೀಡಲಾಗಿದೆ. ಸ್ವಯಂ ಉದ್ಯೋಗಿಗಳಲ್ಲಿ ವಾಹನವನ್ನು ಲೀಸ್‌ಗೆ ನೀಡುವ ಪ್ರವೃತ್ತಿಯಲ್ಲಿ ಹೆಚ್ಚಳ ಕಂಡುಬಂದಿರುವ ಮಾಹಿತಿಯು ಒಟಿಒ ವರದಿಯಲ್ಲಿದೆ.

ಗ್ರಾಹಕರು ದ್ವಿಚಕ್ರ ವಾಹನ ಖರೀದಿಸಲು ಅಗ್ಗದ ಹಣಕಾಸು ಮಾದರಿಗಳತ್ತ ಒಲವು ತೋರಿಸುತ್ತಿದ್ದಾರೆ ಎಂದು ವಾಹನ ಮಾರಾಟಗಾರರು ಹೇಳುತ್ತಾರೆ. ಒಟಿಒ ಸದ್ಯಕ್ಕೆ ಬೆಂಗಳೂರಿನಲ್ಲಿ 160ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳಲ್ಲಿ ಲಭ್ಯ ಇದೆ. 2020ರಲ್ಲಿ ಇದು 2,000ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ₹ 17 ಕೋಟಿಗಳಷ್ಟು ಹಣಕಾಸು ಸೌಲಭ್ಯ ಕಲ್ಪಿಸಿದೆ. ಪ್ರತಿ ತಿಂಗಳೂ 500ಕ್ಕೂ ಹೆಚ್ಚು ಗ್ರಾಹಕರು ಸೇರ್ಪಡೆಯಾಗುತ್ತಿದ್ದಾರೆ. ಈ ವರ್ಷ 10ಪಟ್ಟು ಬೆಳವಣಿಗೆ ಸಾಧಿಸುವ ಯೋಜನೆ ಹಾಕಿಕೊಂಡಿದೆ.

ಒಟಿಒ ಲೀಸಿಂಗ್ ಮಾದರಿಯು, ಗ್ರಾಹಕರಿಗೆ ಲಭ್ಯ ಇರುವ ಅತ್ಯಂತ ಅಗ್ಗದ ಮತ್ತು ಅನುಕೂಲಕರ ಸೌಲಭ್ಯವಾಗಿದೆ. ಸಾಂಪ್ರದಾಯಿಕ ಬ್ಯಾಂಕ್ ಸಾಲದ ಸಮಾನ ಮಾಸಿಕ ಕಂತುಗಳಿಗೆ (ಇಎಂಐ) ಹೋಲಿಸಿದರೆ, ಒಟಿಒ ಮಾಸಿಕ ಕಂತುಗಳಲ್ಲಿ (ಒಎಂಐ) ಗ್ರಾಹಕರು ಶೇ 30ರವರೆಗೆ ಹಣ ಉಳಿಸಬಹುದು. ಖರೀದಿದಾರರು ವಾಹನದ ಮಾಲೀಕತ್ವದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದು, 12 ತಿಂಗಳುಗಳಿಂದ 3 ವರ್ಷಗಳವರೆಗೆ ವಾಹನವನ್ನು ಲೀಸ್‌ಗೆ ನೀಡಬಹುದು. ಲೀಸಿಂಗ್ ಅವಧಿಯ ಕೊನೆಯಲ್ಲಿ ಗ್ರಾಹಕರು ಒಟಿಒದಿಂದ ವಾಹನವನ್ನು ಮರು ಖರೀದಿಸಬಹುದು ಅಥವಾ ತಮ್ಮ ಆಯ್ಕೆಯ ಹೊಸ ವಾಹನ ಖರೀದಿಸಬಹುದು. ಒಟಿಒ ಕ್ಯಾಪಿಟಲ್‌ನ ದ್ವಿಚಕ್ರ ವಾಹನದ ಅನುಕೂಲಕರ ಮಾಲೀಕತ್ವ ಯೋಜನೆ ಬಗ್ಗೆ ಪಡೆಯಲು https://otocapital.in  ಅಂತರ್ಜಾಲ ತಾಣದಲ್ಲಿ ಹೆಚ್ಚಿನ ಮಾಹಿತಿ ಲಭ್ಯ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು