ಬುಧವಾರ, ಫೆಬ್ರವರಿ 8, 2023
18 °C

ಇಂದಿನಿಂದ ಮಾರುತಿ ಸುಜುಕಿ ಕಾರು ಮತ್ತಷ್ಟು ದುಬಾರಿ

ಏಜನ್ಸೀಸ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ‌ಕಾರು ಉತ್ಪಾದಕ ಮಾರುತಿ ಸುಜುಕಿ, ಜ. 16 ರಿಂದ ಜಾರಿಗೆ ಬರುವಂತೆ ತನ್ನ ಎಲ್ಲ ಮಾದರಿ ಕಾರುಗಳ ದರವನ್ನು ಸರಾಸರಿ ಶೇ 1.1 ರಷ್ಟು  ಹೆಚ್ಚಿಸಿದೆ.

ಮಾರುತಿ ಸುಜುಕಿ ಡಿಸೆಂಬರ್‌ನಲ್ಲಿ ಬೆಲೆ ಏರಿಕೆ ಕುರಿತು ಮಾಹಿತಿ ನೀಡಿತ್ತು. ‘ಒಟ್ಟಾರೆ ಹಣದುಬ್ಬರ ಮತ್ತು ಇತ್ತೀಚಿನ ನಿಯಂತ್ರಕ ಅಗತ್ಯತೆಗಳಿಂದ ಉತ್ಪಾದನೆ ವೆಚ್ಚ ಹೆಚ್ಚಾಗಿದೆ. ಈ ಒತ್ತಡದಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ.  2023 ರ ಜನವರಿಯಲ್ಲಿ ಈ ಏರಿಕೆ ಮಾಡಲಾಗುವುದು’ ಎಂದು ಕಂಪನಿ ತಿಳಿಸಿತ್ತು.

ಕಳೆದ ವಾರ, ನೋಯ್ಡಾದಲ್ಲಿ ನಡೆದ ಇಂಡಿಯಾ ಆಟೋ ಎಕ್ಸ್‌ಪೋದಲ್ಲಿ, ಮಾರುತಿ ಸುಜುಕಿ ಜಿಮ್ನಿ ಮತ್ತು ಫ್ರಾಂಕ್ಸ್ ಎರಡು ಹೊಸ ಮಾದರಿಗಳನ್ನು ಅನಾವರಣಗೊಳಿಸಿತು.

ಬಲೆನೊ, ಸೆಲೆರಿಯೊ, ಡಿಜೈರ್, ಇಗ್ನಿಸ್, ಸ್ವಿಫ್ಟ್ ಮತ್ತು ವ್ಯಾಗನಾರ್ ಕಾರುಗಳನ್ನು ತಯಾರಿಸುವ ಮಾರುತಿ ಸುಜುಕಿ, ಮಾದರಿಯ ಆಧಾರದ ಮೇಲೆ ಬೆಲೆ ಏರಿಕೆ ಭಿನ್ನವಾಗಿರಲಿದೆ ಎಂದಿದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು