ಭಾನುವಾರ, ಜನವರಿ 17, 2021
22 °C

ದ್ವಿತೀಯಾರ್ಧದಲ್ಲಿ ದ್ವಿಚಕ್ರ ವಾಹನ ರಫ್ತು ಸುಸ್ಥಿರ ಬೆಳವಣಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ದ್ವಿಚಕ್ರ ವಾಹನ ರಫ್ತು ವಹಿವಾಟು ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಸುಸ್ಥಿರ ಬೆಳವಣಿಗೆ ದಾಖಲಿಸಲಿದೆ ಎಂದು ಇಂಡಿಯಾ ರೇಟಿಂಗ್ಸ್‌ ಹೇಳಿದೆ.

ಕೋವಿಡ್‌–19 ಸಾಂಕ್ರಾಮಿಕ ಹಾಗೂ ಕಚ್ಚಾ ತೈಲ ದರ ಇಳಿಕೆಯಿಂದಾಗಿ ಮೊದಲಾರ್ಧದಲ್ಲಿ ರಫ್ತು ವಹಿವಾಟಿನ ಮೇಲೆ ಪರಿಣಾಮ ಉಂಟಾಗಿತ್ತು ಎಂದು ತಿಳಿಸಿದೆ.

ಭಾರತವು ಮುಖ್ಯವಾಗಿ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್‌ ಅಮೆರಿಕದ ದೇಶಗಳಿಗೆ ಕ್ರಮವಾಗಿ ಶೇ 37.5, ಶೇ 22.9 ಹಾಗೂ ಶೇ 21.4ರಷ್ಟು ದ್ವಿಚಕ್ರ ವಾಹನಗಳನ್ನು ರಫ್ತು ಮಾಡಿದೆ.

ದ್ವಿಚಕ್ರ ವಾಹನ ತಯಾರಕರಾದ ಬಜಾಜ್ ಆಟೊ ಮತ್ತು ಟಿವಿಎಸ್‌ ಮೋಟರ್‌ ಕಂಪನಿಗಳು ಮೊದಲಾರ್ಧದಲ್ಲಿ ತಮ್ಮ ಒಟ್ಟಾರೆ ಮಾರಾಟದಲ್ಲಿ ಕ್ರಮವಾಗಿ ಶೇ 49 ಮತ್ತು ಶೇ 26ರಷ್ಟು ರಫ್ತು ಮಾಡಿವೆ ಎಂದು ಅದು ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು