ನವದೆಹಲಿ:

ಆರ್ಥಿಕ ಹಿಂಜರಿತದ ತೀವ್ರತೆಯು ವಾಹನ ಉದ್ಯಮದ ಸಂಕಷ್ಟವನ್ನು ಹೆಚ್ಚಿಸುತ್ತಲೇ ಇದೆ. ಇದರಿಂದಾಗಿ ಏಪ್ರಿಲ್–ಆಗಸ್ಟ್ ಅವಧಿಯಲ್ಲಿ ಕಂಪನಿಗಳ ಪ್ರಯಾಣಿಕ ವಾಹನದ ಮಾರುಕಟ್ಟೆ ಪಾಲು ಕೂಡ ಏರಿಳಿತ ಕಂಡಿದೆ.

ಮಾರುತಿ ಸುಜುಕಿ ಇಂಡಿಯಾ, ಟಾಟಾ ಮೋಟರ್ಸ್, ಹೋಂಡಾ ಕಾರ್ಸ್, ಫೋರ್ಡ್ ಕಂಪನಿಗಳ ಮಾರುಕಟ್ಟೆಯಲ್ಲಿನ ಪಾಲು ಇಳಿಕೆಯಾಗಿದೆ. ಹುಂಡೈ, ಮಹೀಂದ್ರಾ ಮತ್ತು ಟೊಯೋಟ ಕಂಪನಿಗಳ ಪಾಲು ಹೆಚ್ಚಾಗಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟವು (ಎಸ್ಐಎಎಂ) ಮಾಹಿತಿ ನೀಡಿದೆ.

ದೇಶದ ಪ್ರಮುಖ ಕಂಪನಿ ಮಾರುತಿ ಸುಜುಕಿ ಇಂಡಿಯಾದ ಪ್ರಯಾಣಿಕರ ವಾಹನ (ಪಿವಿ) ಮಾರಾಟವು 7.57 ಲಕ್ಷದಿಂದ 5.55 ಲಕ್ಷಕ್ಕೆ ಕುಸಿದಿದೆ. ಇದರಿಂದ ಮಾರುಕಟ್ಟೆ ಪಾಲು ಶೇ 2ರಷ್ಟು ಇಳಿಕೆಯಾಗಿದೆ.

‘ಕಾರು ಮತ್ತು ವ್ಯಾನ್ ಮಾರಾಟ ಉತ್ತಮವಾಗಿದೆ. ಯುಟಿಲಿಟಿ ವಾಹನಗಳ ಮಾರಾಟದಲ್ಲಿ ಇಳಿಕೆಯಾಗಿದೆ’ ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ್ ತಿಳಿಸಿದ್ದಾರೆ.

ಗ್ರಾಹಕರು ಎಸ್ಯವಿ ವಿಭಾಗದಲ್ಲಿ ಪೆಟ್ರೋಲ್ ಮಾದರಿಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಆದರೆ, ಕಂಪನಿ ಸದ್ಯಕ್ಕೆ ಪೆಟ್ರೋಲ್ ಮಾದರಿ ತಯಾರಿಸುತ್ತಿಲ್ಲ. ಹೀಗಾಗಿ ಬಿಎಸ್–6ನಲ್ಲಿ ವಿತಾರಾ ಬ್ರೆಜಾ ಮತ್ತು ಎಸ್–ಕ್ರಾಸ್ನ ಪೆಟ್ರೋಲ್ ಮಾದರಿ ಪರಿಚಯಿಸುವ ಯೋಜನೆ ಇದೆ.

ಟಾಟಾ ಮೋಟರ್ಸ್ ಮಾರಾಟವು 98,702 ರಿಂದ 60,093ಕ್ಕೆ ಇಳಿಕೆಯಾಗಿದೆ.

ಇದನ್ನೂ ಓದಿ:ಏನಿದು ‘ಬಿಎಸ್–6?’: ವಾಹನ ಖರೀದಿಗೂ ಮುನ್ನ ನಿಮಗಿದು ತಿಳಿದಿರಲಿ

ಹುಂಡೈ ಮೋಟಾರ್ ಇಂಡಿಯಾ ಕಂಪನಿಯ ಮಾರಾಟ 2.26 ಲಕ್ಷದಿಂದ 2.03 ಲಕ್ಷಕ್ಕೆ ಇಳಿಕೆಯಾಗಿದೆ. ಹೀಗಿದ್ದರೂ ಮಾರುಕಟ್ಟೆ ಪಾಲು ಶೇ 2.77ರಷ್ಟು ಹೆಚ್ಚಾಗಿದೆ.

‘ಕಂಪನಿಯ ಪಾಲಿಗೆ 2019 ಹೊಸ ಮೈಲುಗಲ್ಲಿನ ವರ್ಷವಾಗಿದೆ. ಮೂರು ಪ್ರತ್ಯೇಕ ವಿಭಾಗದಲ್ಲಿ ಮೂರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಹೊಸ ಮಾದರಿಗಳ ಬಿಡುಗಡೆಯಿಂದಾಗಿ ಮಾರುಕಟ್ಟೆ ಪಾಲು ಹೆಚ್ಚಾಗಿದೆ’ ಎಂದು ಹುಂಡೈ ಮೋಟರ್ ಇಂಡಿಯಾದ ಮಾರಾಟ ವಿಭಾಗದ ಮುಖ್ಯಸ್ಥ ವಿಕಾಸ್ ಜೈನ್ ತಿಳಿಸಿದ್ದಾರೆ.

ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ಮಾರಾಟ 1 ಲಕ್ಷದಿಂದ 89,733 ಲಕ್ಷಕ್ಕೆ ಇಳಿಕೆಯಾಗಿದೆ. ಆದರೆ ಪಾಲು ಶೇ 1.19ರಷ್ಟು ಹೆಚ್ಚಾಗಿದೆ.

ಟೊಯೋಟ ಕಿರ್ಲೋಸ್ಕರ್ ಮೋಟರ್, ರೆನೊ ಇಂಡಿಯಾ, ಸ್ಕೋಡಾ ಆಟೊ, ಫೋಕ್ಸ್ವ್ಯಾಗನ್ ಇಂಡಿಯಾ ಕಂಪನಿಗಳ ಮಾರುಕಟ್ಟೆ ಪಾಲಿನಲ್ಲಿಯೂ ಏರಿಕೆ ಕಂಡುಬಂದಿದೆ.

ಮಾರುಕಟ್ಟೆಗೆ ಹೊಸದಾಗಿ ಪ್ರವೇಶ ಪಡೆದುಕೊಂಡಿರುವ ಕಿಯಾ ಮೋಟರ್ಸ್ ಮತ್ತು ಎಂಜಿ ಮೋಟರ್ ಇಂಡಿಯಾ ಕ್ರಮವಾಗಿ ಶೇ 0.56 ಮತ್ತು ಶೇ 0.32ರಷ್ಟು ಪಾಲು ಹೊಂದಿವೆ.

ಇದನ್ನೂ ಓದಿ:ಆರ್ಥಿಕ ಹಿಂಜರಿತ: ವಾಣಿಜ್ಯ ವಾಹನ ಮಾರಾಟ ಭಾರಿ ಕುಸಿತ

ಮಾರುಕಟ್ಟೆ ಪಾಲು (ಏಪ್ರಿಲ್–ಆಗಸ್ಟ್ ಅವಧಿ)

ಕಂಪನಿ

2018 (%)

2019(%)

ವ್ಯತ್ಯಾಸ(%)

ಮಾರುತಿ

52.16

49.83

2.33ಇಳಿಕೆ

ಟಾಟಾ

6.79

5.41

1.38ಇಳಿಕೆ

ಹೋಂಡಾ ಕಾರ್ಸ್

5.48

4.64

0.84 ಇಳಿಕೆ

ಪೋರ್ಡ್

2.81

2.7

0.11 ಇಳಿಕೆ

ನಿಸಾನ್

1.14

0.73

0.41ಇಳಿಕೆ

ಹುಂಡೈ

15.59

18.36

2.77 ಏರಿಕೆ

ಮಹೀಂದ್ರಾ

6.89

8.08

1.19ಏರಿಕೆ

ಟೊಯೋಟ

4.62

4.86

0.24 ಏರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.