ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ಲಕ್ಷ ವಾಹನ ತಯಾರಿಕೆ ಗುರಿ ಕಷ್ಟ: ಮಾರುತಿ

Last Updated 4 ಡಿಸೆಂಬರ್ 2022, 10:53 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 20 ಲಕ್ಷ ವಾಹನಗಳನ್ನು ತಯಾರಿಸುವ ಗುರಿಯನ್ನು ತಲುಪಲು ಕಷ್ಟವಾಗಬಹುದು ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್‌ ಶ್ರೀವಾಸ್ತವ ಹೇಳಿದ್ದಾರೆ.

‘ಸೆಮಿಕಂಡಕ್ಟರ್‌ ಲಭ್ಯತೆಯಲ್ಲಿ ಸುಧಾರಣೆ ಕಂಡುಬಂದಿದೆ. ಹೀಗಾಗಿ 2021–22ನೇ ಹಣಕಾಸು ವರ್ಷದಲ್ಲಿ 20 ಲಕ್ಷ ವಾಹನಗಳನ್ನು ತಯಾರಿಸಲಾಗುವುದು’ ಎಂದು ಕಂಪನಿಯ ಅಧ್ಯಕ್ಷ ಆರ್‌.ಸಿ. ಭಾರ್ಗವ ಅವರು ಆಗಸ್ಟ್‌ನಲ್ಲಿ ಷೇರರುದಾರರ ಸಭೆಯಲ್ಲಿ ಹೇಳಿದ್ದರು.

‘ಸದ್ಯದ ಲೆಕ್ಕಾಚಾರದ ಪ್ರಕಾರ, ವಾಹನ ತಯಾರಿಕೆಯು 20 ಲಕ್ಷಕ್ಕಿಂತಲೂ ತುಸು ಕಡಿಮೆ ಆಗಲಿದೆ. ಆದರೆ, ಈಗಾಗಲೇ ಬುಕಿಂಗ್ ಆಗಿರುವ 3.75 ಲಕ್ಷ ವಾಹನಗಳನ್ನು ಗ್ರಾಹಕರಿಗೆ ನೀಡಬೇಕಿದೆ. ಹೀಗಾಗಿ ಬುಕಿಂಗ್ ಆಗಿರುವ ವಾಹನಗಳನ್ನು ಎಷ್ಟರ ಮಟ್ಟಿಗೆ ತಯಾರಿಸಲು ಸಾಧ್ಯವಾಗಲಿದೆ ಎನ್ನುವುದರ ಮೇಲೆ ಎಲ್ಲವೂ ನಿರ್ಧಾರ ಆಗಲಿದೆ’ ಎಂದು ಶಶಾಂಕ್‌ ತಿಳಿಸಿದ್ದಾರೆ

ಈಚೆಗೆ ಬಿಡುಗಡೆ ಆಗಿರುವ ಎಸ್‌ಯುವಿ ಗ್ರ್ಯಾಂಡ್‌ ವಿಟಾರಾಕ್ಕೆ ಒಟ್ಟು 87,953 ಜನರು ಬುಕಿಂಗ್‌ ಮಾಡಿದ್ದಾರೆ. ಅದರಲ್ಲಿ 55,505 ಗ್ರಾಹಕರಿಗೆ ಇನ್ನೂ ವಾಹನ ವಿತರಣೆ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT