ಗುರುವಾರ , ಅಕ್ಟೋಬರ್ 24, 2019
21 °C

ಮಾರುತಿ ಸುಜುಕಿ: ಸೆಪ್ಟೆಂಬರ್‌ನಲ್ಲಿ ಶೇ 17.48ರಷ್ಟು ತಯಾರಿಕೆ ಕಡಿತ

Published:
Updated:

ನವದೆಹಲಿ: ವಾಹನ ಮಾರಾಟ ಕುಸಿತದ ಬಿಕ್ಕಟ್ಟು ಎದುರಿಸುತ್ತಿರುವ ಮಾರುತಿ ಸುಜುಕಿ ಇಂಡಿಯಾ ಕಂಪನಿ ಸತತ 8ನೇ ತಿಂಗಳಿನಲ್ಲಿಯೂ ತಯಾರಿಕೆಯಲ್ಲಿ ಇಳಿಕೆ ಮಾಡಿದೆ. ಸೆಪ್ಟೆಂಬರ್‌ನಲ್ಲಿ ಶೇ 17.48ರಷ್ಟು ತಯಾರಿಕೆಯನ್ನು ತಗ್ಗಿಸಿರುವುದಾಗಿ ತಿಳಿಸಿದೆ.

ಕಂಪನಿಯು ಸೆಪ್ಟೆಂಬರ್‌ನಲ್ಲಿ 1,32,199 ವಾಹನಗಳನ್ನು ತಯಾರಿಸಿದೆ. 2018ರ ಸೆಪ್ಟೆಂಬರ್‌ನಲ್ಲಿ 1,60,219 ವಾಹನಗಳನ್ನು ತಯಾರಿಸಿತ್ತು. 2019ರ ಆಗಸ್ಟ್‌ನಲ್ಲಿ ಶೇ 33.99ರಷ್ಟು ತಯಾರಿಕೆ ತಗ್ಗಿಸಲಾಗಿತ್ತು.

ಇದನ್ನೂ ಓದಿ: ಮಾರುತಿ ತಯಾರಿಕೆ ಕಡಿತ7ನೇ ತಿಂಗಳೂ ಮುಂದುವರಿಕೆ

ಟಾಟಾ ಮೋಟರ್ಸ್‌ ಕಂಪನಿಯು ಸೆಪ್ಟೆಂಬರ್‌ನಲ್ಲಿ ತಯಾರಿಕೆ 18,855 ರಿಂದ 6,976ಕ್ಕೆ ಶೇ 63ರಷ್ಟು ಕಡಿಮೆ ಮಾಡಿದೆ. ವಾಹನ ಉದ್ಯಮವು ಚೇತರಿಸಿಕೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ. ಪ್ರಮುಖ ಕಂಪನಿಗಳ ಸೆಪ್ಟೆಂಬರ್‌ ತಿಂಗಳ ದೇಶಿ ಪ್ರಯಾಣಿಕ ವಾಹನ ಮಾರಾಟವು ಎರಡಂಕಿ ಇಳಿಕೆ ಕಂಡಿದೆ.

ನ್ಯಾನೊ ಕೇಳೋರೆ ಇಲ್ಲ: ಟಾಟಾ ಮೋಟರ್ಸ್ ಕಂಪನಿಯ ನ್ಯಾನೊ ಕಾರನ್ನು ಕೇಳುವವರೇ ಇಲ್ಲದಂತಾಗಿದೆ. 2019ರಲ್ಲಿ ಇದುವರೆಗೆ ಕೇವಲ ಒಂದೇ ಒಂದು ಕಾರು ಮಾರಾಟವಾಗಿದೆ. 2019ರ ಜನವರಿಯಿಂದ–ಸೆಪ್ಟೆಂಬರ್‌ ಅವಧಿಯಲ್ಲಿ ಒಂದೇ ಒಂದು ಕಾರನ್ನೂ ತಯಾರಿಸಿಲ್ಲ. ಹೀಗಿದ್ದರೂ ಕಂಪನಿ ಅಧಿಕೃತವಾಗಿ ತಯಾರಿಕೆ ಸ್ಥಗಿತಗೊಳಿಸುವ ಘೋಷಣೆ ಮಾಡಿಲ್ಲ.

ಇದನ್ನೂ ಓದಿ: ಕುಸಿದ ಬೇಡಿಕೆ: ಮಾರುತಿ ಕಾರ್‌ ತಯಾರಿಕೆಗೆ ಕಡಿವಾಣ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)