ತಲೆಕೆಳಗಾದ ಮಾರುಕಟ್ಟೆ ನಿರೀಕ್ಷೆ

ಶುಕ್ರವಾರ, ಏಪ್ರಿಲ್ 19, 2019
22 °C
2018–19ರಲ್ಲಿ ಪ್ರಯಾಣಿಕ ವಾಹನ ಮಾರಾಟ ಶೇ 2.7ರಷ್ಟು ಪ್ರಗತಿ

ತಲೆಕೆಳಗಾದ ಮಾರುಕಟ್ಟೆ ನಿರೀಕ್ಷೆ

Published:
Updated:

ನಗದು ಕೊರತೆ, ವಾಹನಗಳ ಬೆಲೆ ಏರಿಕೆ ಮತ್ತು ಚುನಾವಣೆಯ ಅನಿಶ್ಚಿತತೆಯು 2018–19ನೇ ಹಣಕಾಸು ವರ್ಷದ ಪ್ರಯಾಣಿಕ ವಾಹನ ಮಾರಾಟಕ್ಕೆ ಭಾರಿ ಹಿನ್ನಡೆಯುಂಟುಮಾಡಿದೆ.

2017–18ನೇ ಹಣಕಾಸು ವರ್ಷದಲ್ಲಿ 32.88 ಲಕ್ಷ ವಾಹನಗಳು ಮಾರಾಟವಾಗಿದ್ದವು. ಹೀಗಾಗಿ ಈ ಬಾರಿ ಶೇ 8 ರಿಂದ ಶೇ 10ರಷ್ಟು ಪ್ರಗತಿ ಕಾಣುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ದೇಶಿ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಶೇ 6ರಷ್ಟು ಪ್ರಗತಿ ಕಾಣಲಿದೆ ಎಂದು ಭಾರತೀಯ ವಾಹನ ತಯಾರಿಕಾ ಒಕ್ಕೂಟ (ಎಸ್‌ಐಎಂ) ಹೇಳಿತ್ತು. ಆದರೆ, ಅಂತಿಮವಾಗಿ ಸಾಧ್ಯವಾಗಿದ್ದು, ಶೇ 2.7ರಷ್ಟು ಅಲ್ಪ ಪ್ರಗತಿ ಮಾತ್ರ. ‘ಉತ್ಪನ್ನಗಳ ಬೆಲೆ ಏರಿಕೆ ವಾಹನ ಉದ್ಯಮಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತು. ಇದರಿಂದಾಗಿ ಕಂಪನಿಗಳು ವಾಹನಗಳ ಬೆಲೆಯಲ್ಲಿ ಏರಿಕೆ ಮಾಡುವಂತಾಯಿತು. ಇದು ಬೇಡಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿತು’ ಎಂದು ಒಕ್ಕೂಟದ ಅಧ್ಯಕ್ಷ ರಾಜನ್‌ ವಧೇರಾ ತಿಳಿಸಿದ್ದಾರೆ.

‘ಪ್ರಸಕ್ತ ಹಣಕಾಸು ವರ್ಷದಲ್ಲಿ (2019–20) ಲೋಕಸಭಾ ಚುನಾವಣೆ, ಬಿಎಸ್‌–6 ಮಾನದಂಡ ಉದ್ಯಮಕ್ಕೆ ಸವಾಲಾಗಿದೆ. ಹೀಗಾಗಿ ಪ್ರಯಾಣಿಕ ವಾಹನ ಮಾರಾಟದ ಪ್ರಗತಿ ಶೇ 3 ರಿಂದ ಶೇ 5ರಷ್ಟಿರುವ ಅಂದಾಜು ಮಾಡಲಾಗಿದೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !