ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕ ವಾಹನ ಸಗಟು ಮಾರಾಟ ಶೇ 92ರಷ್ಟು ಹೆಚ್ಚಳ

Last Updated 13 ಅಕ್ಟೋಬರ್ 2022, 15:51 IST
ಅಕ್ಷರ ಗಾತ್ರ

ನವದೆಹಲಿ: ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಕಳೆದ ವರ್ಷದ ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಶೇಕಡ 92ರಷ್ಟು ಹೆಚ್ಚಾಗಿದೆ.

ಭಾರತೀಯ ವಾಹನ ತಯಾರಕರ ಒಕ್ಕೂಟದ (ಎಸ್‌ಐಎಎಂ) ಪ್ರಕಾರ, 2021ರ ಸೆಪ್ಟೆಂಬರ್‌ನಲ್ಲಿ 1.60 ಲಕ್ಷ ವಾಹನಗಳು ಮಾರಾಟ ಆಗಿದ್ದವು. 2022ರ ಸೆಪ್ಟೆಂಬರ್‌ನಲ್ಲಿ ಒದು 3.07 ಲಕ್ಷಕ್ಕೆ ಏರಿಕೆ ಆಗಿದೆ.

ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ 38ರಷ್ಟು ಹೆಚ್ಚಾಗಿದ್ದು, 10.26 ಲಕ್ಷಕ್ಕೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 7.41 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟ ಆಗಿದ್ದವು.

ಸೆಮಿಕಂಡಕ್ಟರ್‌ ಪೂರೈಕೆ ಸುಧಾರಿಸಿರುವುದರಿಂದ ವಾಹನಗಳ ತಯಾರಿಕೆ ಶೇ 88ರಷ್ಟು ಹೆಚ್ಚಾಗಿ 3.72 ಲಕ್ಷಕ್ಕೆ ತಲುಪಿದೆ. ಹಬ್ಬದ ಋತುವಿನ ಬೇಡಿಕೆಯು ಮಾರಾಟದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.

ಮಾರಾಟ ಆಗಿರುವ ಒಟ್ಟಾರೆ ಪ್ರಯಾಣಿಕ ವಾಹನಗಳಲ್ಲಿ ಯುಟಿಲಿಟಿ ವಾಹನಗಳ ಪಾಲು ಅರ್ಧಕ್ಕಿಂತಲೂ ಹೆಚ್ಚಿಗೆ ಇದೆ. ಆದರೆ,ಎಂಟ್ರಿ ಲೆವೆಲ್‌ ಕಾರು ಮತ್ತು ಸೆಡಾನ್‌ ಬೇಡಿಕೆ ಕಂಡುಕೊಳ್ಳಲು ಹೆಣಗಾಡುತ್ತಿವೆ’ ಎಂದು ಒಕ್ಕೂಟದ ಅಧ್ಯಕ್ಷ ವಿನೋದ್‌ ಅಗರ್ವಾಲ್‌ ಹೇಳಿದ್ದಾರೆ.

‘ಸಿಎನ್‌ಜಜಿ ದರ ಏರಿಕೆ, ರೆಪೊ ದರ ಹೆಚ್ಚಳ ಹಾಗೂ ರಷ್ಯಾ–ಉಕ್ರೇನ್‌ ಸಂಘರ್ಷವು ಮುಂಬರುವ ತಿಂಗಳುಗಳಲ್ಲಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಆತಂಕ ಇದೆ’ ಎಂದು ಅವರು ತಿಳಿಸಿದ್ದಾರೆ.

‘ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆ ಸುಧಾರಿಸದೇ ಇರುವುದರಿಂದ ಎಂಟ್ರಿ ಲೆವೆಲ್‌ನ ದ್ವಿಚಕ್ರ ಮತ್ತು ಪ್ರಯಾಣಿಕ ವಾಹನಗಳ ಮಾರಾಟದ ಬಗ್ಗೆ ಆತಂಕ ಇದೆ’ ಎಂದು ಒಕ್ಕೂಟದ ಪ್ರಧಾನ ನಿರ್ದೇಶಕ ರಾಜೇಶ್‌ ಮೆನನ್‌ ತಿಳಿಸಿದ್ದಾರೆ.

ವಾಹನ ಮಾರಾಟದ ವಿವರ

ವಾಹನ;2021 ಸೆಪ್ಟೆಂಬರ್‌;2022 ಸೆಪ್ಟೆಂಬರ್‌;ಏರಿಕೆ (%)

ಪ್ರಯಾಣಿಕ ಕಾರು;64,235;1,42,727;122.20

ದ್ವಿಚಕ್ರ;15,37,604;17,35,199;12.85

ತ್ರಿಚಕ್ರ;29,191;50,626

ಪ್ರಯಾಣಿಕ ವಾಹಹನಗಳ ಒಟ್ಟು ಮಾರಾಟ;1,60,212;3,07,389;91.86

ಬಿಎಂಡಬ್ಲ್ಯು, ಮರ್ಸಿಡಿಸ್‌, ಟಾಟಾ ಮೋಟರ್ಸ್‌ ಮತ್ತು ವೋಲ್ವೊ ಆಟೊ ಕಂಪನಿಗಳ ಅಂಕಿ–ಅಂಶ ಲಭ್ಯವಾಗಿಲ್ಲ

ಮಾಹಿತಿ: ಎಸ್‌ಐಎಎಂ

ಮುಖ್ಯಾಂಶಗಳು

ಹಬ್ಬದ ಋತುವಿನ ಬೇಡಿಕೆ

ಸುಧಾರಿಸಿದ ಚಿಪ್‌ ಪೂರೈಕೆ; ತಯಾರಿಕೆ ಹೆಚ್ಚಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT