ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ ಸರ್ವಿಸ್ ಉದ್ದಿಮೆ: ಪಿಟ್‌ಸ್ಟಾಪ್ ಪ್ರಗತಿ

Last Updated 11 ಫೆಬ್ರುವರಿ 2021, 2:29 IST
ಅಕ್ಷರ ಗಾತ್ರ

ಬೆಂಗಳೂರು: ಬಹು ಬ್ರ್ಯಾಂಡ್ ಕಾರ್ ಸರ್ವಿಸ್ ಒದಗಿಸುವ ಪಿಟ್‌ಸ್ಟಾಪ್, 2020ರಲ್ಲಿ ಪ್ರತಿ ತಿಂಗಳೂ ಸರಾಸರಿ ಶೇ 40ರಷ್ಟು ಬೆಳವಣಿಗೆ ಸಾಧಿಸಿದೆ. ಕೋವಿಡ್ ಪಿಡುಗಿನಿಂದಾಗಿ ಗ್ರಾಹಕರ ಆದ್ಯತೆಗಳು ಮತ್ತು ಬಳಕೆ ವಿಧಾನಗಳು ಬದಲಾಗಿರುವ ಕಾರಣಕ್ಕೆ ಕಂಪನಿಯು ಈ ಪ್ರಮಾಣದ ಪ್ರಗತಿ ಕಂಡಿದೆ.

ಹೆಚ್ಚಿನ ಸಂಖ್ಯೆಯ ಗ್ರಾಹಕರು, ಗರಿಷ್ಠ ಮಟ್ಟದ ಸುರಕ್ಷತೆ ಮತ್ತು ಸ್ವಚ್ಛತೆ ಒಳಗೊಂಡ ಸ್ವಯಂಚಾಲಿತ ಸರ್ವಿಸ್ ಬಯಸುತ್ತಿರುವುದರಿಂದ ಪಿಟ್‌ಸ್ಟಾಪ್‌ನ ಮನೆ ಬಾಗಿಲಲ್ಲಿ ಸೇವೆಗೆ ಬೇಡಿಕೆಯು ಗಮನಾರ್ಹವಾಗಿ ಏರಿಕೆ ಕಂಡಿದೆ. ಸೇವೆಗಳ ಬೇಡಿಕೆಯಲ್ಲಿ ಬೆಂಗಳೂರಿನ ಐ.ಟಿ ಕಾರಿಡಾರ್ ಶೇ 60ರಷ್ಟು ಕೊಡುಗೆ ನೀಡಿದೆ. ಪಿಟ್‌ಸ್ಟಾಪ್, ಪ್ರತಿ ತಿಂಗಳೂ ತನ್ನ ಪಟ್ಟಿಗೆ 30ರಿಂದ 35ಗ್ಯಾರೇಜ್‌ಗಳನ್ನು ಹೊಸದಾಗಿ ಸೇರ್ಪಡೆ ಮಾಡುತ್ತಿದೆ.

ಬಹುಬ್ರ್ಯಾಂಡ್ ಸರ್ವಿಸ್ ಒದಗಿಸುತ್ತಿರುವ ಪಿಟ್‌ಸ್ಟಾಪ್, ಪಾರದರ್ಶಕತೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಿ ಗ್ರಾಹಕರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಪರಿಹರಿಸುತ್ತಿದೆ.

‘ಕಾರ್ ಸರ್ವಿಸ್ ಉದ್ದಿಮೆಯಲ್ಲಿ ಅನುಕೂಲತೆ, ಪಾರದರ್ಶಕತೆ, ಗುಣಮಟ್ಟದ ಸೇವೆ ಮತ್ತು ಕೈಗೆಟುಕುವ ಬೆಲೆಯ ಸೇವೆ ಒದಗಿಸುವ ಕಾರಣಕ್ಕೆ ಪಿಟ್‌ಸ್ಟಾಪ್ ಸ್ಥಾಪಿಸಿರುವೆ. ಪಿಟ್‌ಸ್ಟಾಪ್ ಗ್ರಾಹಕರು ತಮ್ಮ ಕಾರ್‌ನ ಸರ್ವಿಸ್ ಪಾರದರ್ಶಕ ರೀತಿಯಲ್ಲಿ ನಡೆಯುವುದನ್ನು ಮತ್ತು ಸರ್ವಿಸ್ ವಾರಂಟಿಯನ್ನು ಖಾತರಿಪಡಿಸಿಕೊಳ್ಳಬಹುದು. ಪಿಟ್‌ಸ್ಟಾಪ್, ಗುಣಮಟ್ಟಕ್ಕೆ ಬದ್ಧವಾಗಿದ್ದು, 2 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಶೇ 50ಕ್ಕೂ ಹೆಚ್ಚು ಸರ್ವಿಸ್ ಬೇಡಿಕೆಯು ಪಿಟ್‌ಸ್ಟಾಪ್‌ಗೆ ಮರಳಿ ಬರುವ ಗ್ರಾಹಕರದ್ದಾಗಿರುತ್ತದೆ’ ಎಂದು ಪಿಟ್‌ಸ್ಟಾಪ್ ಸ್ಥಾಪಕ ಮಿಹಿರ್ ಮೋಹನ್ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT