ಶನಿವಾರ, ಸೆಪ್ಟೆಂಬರ್ 25, 2021
30 °C

ರಿವೋಲ್ಟ್‌ ಎಲೆಕ್ಟ್ರಿಕ್ ಬೈಕ್‌ಗಳಿಗೆ ವರ್ಚುವಲ್‌ ಕೀಲಿಯಾಗಲಿದೆ ಸ್ಮಾರ್ಟ್‌ಫೋನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಸ್ಮಾರ್ಟ್‌ಫೋನ್‌ಗಳನ್ನು ವರ್ಚುವಲ್ ಕೀಲಿಗಳನ್ನಾಗಿ ಬಳಸಿಕೊಂಡು ರಿವೋಲ್ಟ್‌ ಎಲೆಕ್ಟ್ರಿಕ್ ಬೈಕ್‌ಗಳನ್ನು ಲಾಕ್ ಮತ್ತು ಅನ್‌ಲಾಕ್ ಮಾಡಬಹುದು ಎಂದು ಕಂಪನಿಯು ಸೋಮವಾರ ಘೋಷಿಸಿದೆ.

MyRevolt App ಮೂಲಕ ಬೈಕ್‌ಗಳನ್ನು ಸ್ವಿಚ್‌ ಆಫ್‌ ಅಥವಾ ಸ್ವಿಚ್‌ ಆನ್‌ ಮಾಡಬಹುದು ಎಂದು ರಿವೋಲ್ಟ್‌ ಎಲೆಕ್ಟ್ರಿಕ್ ಬೈಕ್‌ಗಳ ತಯಾರಕರು ಮಾಹಿತಿ ನೀಡಿದ್ದಾರೆ.

ಈ ವೈಶಿಷ್ಟ್ಯವು ಸೆಪ್ಟೆಂಬರ್ 2021 ರಿಂದ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್‌ಗಳಿಗೆ ಲಭ್ಯವಿರುತ್ತದೆ.

ರಿವೋಲ್ಟ್‌ ಎಲೆಕ್ಟ್ರಿಕ್ ಬೈಕ್‌ಗಳು ಕೃತಕ ಬುದ್ಧಿಮತ್ತೆ ಮತ್ತು ಸುಧಾರಿತ ಕ್ಲೌಡ್ ಆಧಾರಿತ ಸಾಫ್ಟ್‌ವೇರ್ ವ್ಯವಸ್ಥೆಗಳನ್ನು ಹೊಂದಿವೆ ಎಂದು ಹೇಳಲಾಗಿದೆ.

'ರಿವೋಲ್ಟ್‌ ಎಲೆಕ್ಟ್ರಿಕ್‌ ಬೈಕ್‌ಗಳನ್ನು ಬಳಸುವ ಸವಾರರಿಗೆ ಈಗ ಪ್ರತ್ಯೇಕ ಕೀಲಿಯ ಅಗತ್ಯವಿಲ್ಲ. ತಮ್ಮ ಮೊಬೈಲ್‌ ಮೂಲಕ ಬೈಕನ್ನು ಆನ್‌ ಮಾಡಬಹುದು' ಎಂದು ರಿವೋಲ್ಟ್ ಮೋಟಾರ್ಸ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರ್ಮಾ ತಿಳಿಸಿದ್ದಾರೆ.

ಆರಂಭಿಕವಾಗಿ ನವದೆಹಲಿ ಹಾಗೂ ಪುಣೆಯಲ್ಲಿ ಮಾತ್ರ ಬಿಡುಗಡೆಗೊಂಡಿರುವ ರಿವೋಲ್ಟ್‌ ಬೈಕ್‌, ವಿಶಿಷ್ಟ ಲಕ್ಷಣಗಳ ಮೂಲಕ ಗಮನ ಸೆಳೆದಿದೆ. ಇದು ನೋಡಲು ಆಧುನಿಕ ಸ್ಪೋರ್ಟ್ಸ್‌ ಬೈಕ್‌ಗಳ ಮಾದರಿಯ ವಿನ್ಯಾಸ ಹೊಂದಿದೆ. ವಿದ್ಯುಚ್ಛಾಲಿತ ಸ್ಕೂಟರ್‌ ಆದರೂ ಸಾಂಪ್ರದಾಯಿಕ ಪೆಟ್ರೋಲ್‌ ಎಂಜಿನ್‌ ಉಳ್ಳ ಬೈಕ್‌ಗಳಂತೆ ಶಬ್ದ ಹೊರಡಿಸುವ ಅನುಕರಣೆ ತಂತ್ರಜ್ಞಾನವನ್ನು ಹೊಂದಿರುವುದು ಈ ಬೈಕಿನ ವಿಶೇಷ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು