ಶನಿವಾರ, ಜನವರಿ 18, 2020
26 °C

ಶ್ರೀಲಂಕಾದ ಎಲೆಕ್ಟ್ರಿಕ್‌ ಸೂಪರ್‌ ಕಾರು; 3.1 ಸೆಕೆಂಡ್‌ಗಳಲ್ಲಿ 100 ಕಿ.ಮೀ. ವೇಗ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಶ್ರೀಲಂಕಾದಲ್ಲಿ ತಯಾರಾಗುತ್ತಿರುವ ಐಷಾರಾಮಿ ಎಲೆಕ್ಟ್ರಿಕ್‌ ಸೂಪರ್‌ ಕಾರು 'ವೇಗ'

ಅಮೆರಿಕ ಮತ್ತು ಜರ್ಮನಿಯ ಕಾರು ತಯಾರಿಕಾ ಕಂಪನಿಗಳು ಅತ್ಯಂತ ಶಕ್ತಿಯುತ, ಐಷಾರಾಮಿ ವಿದ್ಯುತ್‌ ಚಾಲಿತ ಸೂಪರ್‌ ಕಾರ್‌ಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸುತ್ತಿರುವ ಬೆನ್ನಲೇ ದ್ವೀಪ ರಾಷ್ಟ್ರ ಶ್ರೀಲಂಕಾದಿಂದ ಹೊಸ ಕಾರು ಅನಾವರಣಕ್ಕೆ ಸಿದ್ಧತೆ ನಡೆಸಿದೆ. 

ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 240 ಕಿ.ಮೀ. ದೂರದವರೆಗೂ ತಲುಪಿಸಬಲ್ಲ 300 ಕಿ.ವ್ಯಾಟ್‌ ಬ್ಯಾಟರಿ ಒಳಗೊಂಡಿದ್ದು, 900 ಬಿಎಚ್‌ಪಿ ಸಾಮರ್ಥ್ಯ ಹೊಂದಿರುವ 'ವೇಗ' ಎಲೆಕ್ಟ್ರಿಕ್‌ ಕಾರು ಪ್ರಿಯರ ಗಮನ ಸೆಳೆಯುತ್ತಿದೆ. ಶ್ರೀಲಂಕಾದಲ್ಲಿ ನಿರ್ಮಿಸಲಾಗಿರುವ ಐಷಾರಾಮಿ ಎಲೆಕ್ಟ್ರಿಕ್‌ ಕಾರು 'ವೇಗ' ಪರೀಕ್ಷಾ ಹಂತದಲ್ಲಿದೆ.

ಶ್ರೀಲಂಕಾದ ಕೋಡ್‌ಜೆನ್‌ ಸಂಸ್ಥೆ ತನ್ನದೇ ಐಷಾರಾಮಿ ಸೂಪರ್‌ ಕಾರ್‌ ತಯಾರಿಕೆಯಲ್ಲಿ ತೊಡಗಿದ್ದು, ದಕ್ಷಿಣ ಏಷ್ಯಾ ಮಾರುಕಟ್ಟೆಯಲ್ಲಿ ಚಾಪು ಮೂಡಿಸುವ ಉತ್ಸಾಹದಲ್ಲಿದೆ. ಇದೇ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ಇಂಥದ್ದೊಂದು ಕಾರು ಸಿದ್ಧವಾಗುತ್ತಿದೆ. ಗಂಟೆಗೆ 100 ಕಿ.ಮೀ. ವೇಗವನ್ನು ಕೇವಲ 3.1 ಸೆಕೆಂಡ್‌ಗಳಲ್ಲಿ ತಲುಪುವಷ್ಟು ಶಕ್ತಿಯುವಾಗಿದೆ. 

ಪರೀಕ್ಷೆಯ ಕೊನೇ ಹಂತದಲ್ಲಿರುವ 'ವೇಗ' 2020ರ ಏಪ್ರಿಲ್‌ನಲ್ಲಿ ಜಿನೆವಾ ಮೋಟಾರ್‌ ಶೋನಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆಯಿದೆ. 

ಕಾರು ತಯಾರಿಕೆಯಲ್ಲಿ ಸಿದ್ಧಹಸ್ತರಾಗಿರುವ ಕಂಪನಿಗಳು ಈಗಷ್ಟೇ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆಯತ್ತ ಗಮನ ಹರಿಸಿವೆ. ಭವಿಷ್ಯದ ಎಲೆಕ್ಟ್ರಿಕ್‌ ಕಾರುಗಳಿಗೆ ಚೀನಾ ಬೃಹತ್‌ ಮಾರುಕಟ್ಟೆಯಾಗಿದ್ದು, ಯುರೋಪ್ ಮತ್ತು ಅಮೆರಿಕದಲ್ಲೂ ಎಲೆಕ್ಟ್ರಿಕ್‌ ವಾಹನಗಳ ಬಳಕೆ ಹೆಚ್ಚುತ್ತಿದೆ. ಭಾರತದಲ್ಲಿಯೂ ಹಲವು ಕಂಪನಿಗಳು ಎಲೆಕ್ಟ್ರಿಕ್‌ ವಾಹನ ತಯಾರಿಕೆಯಲ್ಲಿ ತೊಡಗಿವೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು