ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಹ್ಯಾರಿಯರ್‌ನ ಸಂಭ್ರಮ

Last Updated 17 ಜುಲೈ 2019, 19:30 IST
ಅಕ್ಷರ ಗಾತ್ರ

ವಾಹನ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಟಾಟಾ ಮೋಟರ್ಸ್, ಜನವರಿಯಲ್ಲಿ ಬಿಡುಗಡೆ ಮಾಡಿದ ಟಾಟಾ ಹ್ಯಾರಿಯರ್ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ ಅನ್ನು (ಎಸ್‌ಯುವಿ) ಇದುವರೆಗೆ 10 ಸಾವಿರ ಗ್ರಾಹಕರು ಖರೀದಿಸಿದ್ದಾರೆ. ಈ ಸಂಭ್ರಮದ ಅಂಗವಾಗಿ ಸಂಸ್ಥೆಯು, ಹ್ಯಾರಿಯರ್‌ನಲ್ಲಿ ಡ್ಯುಯಲ್ ಟೋನ್ ಕಲರ್ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಿದೆ.

ಹ್ಯಾರಿಯರ್ ಎಕ್ಸ್‌ಜೆಡ್‌ ಮಾದರಿಯು ಎರಡು ಬಣ್ಣಗಳಲ್ಲಿ ಸಿಗಲಿದೆ. ಇದಲ್ಲದೇ ಮೇಲ್ಭಾಗದ ಕಪ್ಪು ಬಣ್ಣ ಎಸ್‌ಯುವಿಗೆ ಮತ್ತಷ್ಟು ಮೆರುಗು ನೀಡಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಂಸ್ಥೆಯ ಮಾರಾಟ ಮತ್ತು ಗ್ರಾಹಕ ವಿಭಾಗದ ಉಪಾಧ್ಯಕ್ಷ ಸಿಬೇಂದ್ರ ಬರ್ಮನ್‌, ‘ಹ್ಯಾರಿಯರ್ ಎಸ್‌ಯುವಿಯನ್ನು 2018ರ ಆಟೊ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದಾಗಿನಿಂದಲೂ ಬಳಕೆದಾರರ ನಿರೀಕ್ಷೆಗಳು ಹೆಚ್ಚುತ್ತಲೇ ಹೋದವು. ಇದನ್ನು ಮಾರುಕಟ್ಟೆಗೆ ತಂದ ಮೇಲೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಯಿತು. ಹೀಗಾಗಿ ಡ್ಯುಯಲ್ ಟೋನ್ ಕಲರ್‌ನೊಂದಿಗೆ ಮತ್ತಷ್ಟು ಮೆರುಗು ನೀಡಿದ್ದೇವೆ’ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

‘ಇದೇ ಸ್ಫೂರ್ತಿಯೊಂದಿಗೆ ಸಂಸ್ಥೆಯ ವಾಹನಗಳನ್ನು ಮತ್ತಷ್ಟು ಆಕರ್ಷಕವಾಗಿ ಮತ್ತು ಉತ್ತಮ ಗುಣಮಟ್ಟದಲ್ಲಿ ಮಾರುಕಟ್ಟೆಗೆ ತರುತ್ತೇವೆ’ ಎಂದು ಹೇಳುತ್ತಾರೆ.

ವಿಲಾಸಿ ವಾಹನಗಳ ತಯಾರಿಕಾ ಕಂಪನಿ ಲ್ಯಾಂಡ್‌ರೋವರ್‌ನ ಡಿ8 ಪ್ಲಾಟ್‌ಫಾರ್ಮ್‌ನಲ್ಲಿ ಹ್ಯಾರಿಯರ್‌ ಅನ್ನು ತಯಾರಿಸಲಾಗಿದ್ದು, ಕ್ರಯೊಟಕ್ 2.0 ಡೀಸೆಲ್ ಎಂಜಿನ್ ಹೊಂದಿದೆ.ವಾಹನದ ಆರಂಭಿಕ ಬೆಲೆ ₹12.99 ಲಕ್ಷ ಇದೆ. ಚಾಲಕರಿಗೆ ಆರಾಮದಾಯಕ ಚಾಲನಾ ಅನುಭವ ನೀಡುವ ಉದ್ದೇಶದಿಂದ, ಈ ಎಸ್‌ಯುವಿಯನ್ನು ವಿಲಾಸಿ ವಾಹನ ತಯಾರಿಕಾ ಸಂಸ್ಥೆ ಲ್ಯಾಂಡ್‌ ರೋವರ್‌ ಡಿ8 ಫ್ಲಾಟ್‌ಫಾರಂನ ವಿನ್ಯಾಸ ಪ್ರತಿಬಿಂಬಿಸುವಂತೆ ಒಮೆಗಾ ಆರ್ಕಿಟೆಕ್ಚರ್‌ ತಂತ್ರಜ್ಞಾನ ಅಳವಡಿಸಿ ತಯಾರಿಸಲಾಗಿದೆ.

ಐದು ಆಸನಗಳ ಈ ವಾಹನ ಎಕ್ಸ್‌ಇ, ಮಿಡ್‌–ಸ್ಪೆಕ್‌ ಎಕ್ಸ್‌ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್‌ ಮಾದರಿಗಳಲ್ಲಿ ಲಭ್ಯವಿದೆ.

ವೈಶಿಷ್ಟ್ಯ:2 ಲೀಟರ್ ಸಾಮರ್ಥ್ಯದಕ್ರೈಯೊಟೆಕ್‌ ಟರ್ಬೊಚಾರ್ಜಡ್‌ ಎಂಜಿನ್‌,4 ಸಿಲಿಂಡರ್‌ಗಳನ್ನು ಹೊಂದಿದೆ. 6 ಸ್ಪೀಡ್‌ ಮ್ಯಾನುವಲ್ ಗೇರ್ ಬಾಕ್ಸ್‌,ಮುಂಬದಿ ಮತ್ತು ಹಿಂಬದಿ ಗಾಲಿಗಳಿಗೆ ಡಿಸ್ಕ್‌, ಡ್ರಮ್‌ ಬ್ರೇಕ್‌ಗಳಿವೆ.50 ಲೀಟರ್ ಇಂಧನ ಹಿಡಿಸುವ ಟ್ಯಾಂಕ್‌ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT