ಮಂಗಳವಾರ, ಸೆಪ್ಟೆಂಬರ್ 29, 2020
23 °C

ಟಾಟಾ ಮೊಟರ್ಸ್:‌ ಮಾರಾಟ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಟಾಟಾ ಮೋಟರ್ಸ್‌ ಕಂಪನಿಯ ಆಗಸ್ಟ್‌ ತಿಂಗಳ ಒಟ್ಟಾರೆ ಮಾರಾಟ ಶೇಕಡ 13.38ರಷ್ಟು ಹೆಚ್ಚಾಗಿದೆ.

ಹಿಂದಿನ ವರ್ಷ ಆಗಸ್ಟ್‌ನಲ್ಲಿ 32,166 ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಈ ಬಾರಿ 36,472 ವಾಹನಗಳು ಮಾರಾಟವಾಗಿವೆ ಎಂದು ಕಂಪನಿ ತಿಳಿಸಿದೆ.

ದೇಶಿ ಮಾರಾಟ ಶೇ 21.6ರಷ್ಟು ಹೆಚ್ಚಾಗಿದ್ದು, ಒಟ್ಟು 35,420 ವಾಹನಗಳು ಮಾರಾಟವಾಗಿವೆ ಎಂದು ಹೇಳಿದೆ.

ಪ್ರಯಾಣಿಕ ವಾಹನ ಮಾರಾಟ 7,316ರಿಂದ 18,583ಕ್ಕೆ ಏರಿದ್ದು, ಎರಡು ಪಟ್ಟಿಗಿಂತ ಹೆಚ್ಚಾದಂತಾಗಿದೆ. ಆದರೆ, ವಾಣಿಜ್ಯ ವಾಹನ ಮಾರಾಟ ಶೇ 28ರಷ್ಟು ಇಳಿಕೆಯಾಗಿದೆ ಎಂದು ಅದು ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು