ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಯೊಟಾ ಕಿರ್ಲೋಸ್ಕರ್ ಮಾರಾಟ ಶೇ 9ರಷ್ಟು ಏರಿಕೆ

Last Updated 1 ಏಪ್ರಿಲ್ 2023, 7:33 IST
ಅಕ್ಷರ ಗಾತ್ರ

ನವದೆಹಲಿ: 2023ರ ಮಾರ್ಚ್‌ಗೆ ಅಂತ್ಯವಾದ ಹಣಕಾಸು ವರ್ಷದಲ್ಲಿ ವಾಹನಗಳ ಮಾರಾಟ ಶೇ 9 ರಷ್ಟು ಹೆಚ್ಚಳವಾಗಿದ್ದು, 18,670 ವಾಹನಗಳನ್ನು ಮಾರಾಟ ಮಾಡಿದ್ದೇವೆ ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ ಹೇಳಿದೆ.

2022ರ ಮಾರ್ಚ್‌ಗೆ ಅಂತ್ಯವಾದ ವರ್ಷದಲ್ಲಿ 17,131 ವಾಹನಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿತ್ತು ಎಂದು ಕಿರ್ಲೋಸ್ಕರ್‌ ಮಾಹಿತಿ ನೀಡಿದೆ.

2022–23ನೇ ಸಾಲಿನಲ್ಲಿ ಸಗಟು ಮಾರಾಟದಲ್ಲಿ ಶೇ 41 ರಷ್ಟು ಏರಿಕೆ ಕಂಡಿದ್ದು, 1,74,015 ವಾಹನಗಳನ್ನು ಮಾರಾಟ ಮಾಡಲಾಗಿದೆ. ಹಿಂದಿನ ವರ್ಷ 1,23,770 ವಾಹನಗಳು ಬಿಕರಿಯಾಗಿದ್ದವು.

ಸಕಾರಾತ್ಮಕ ಬೆಳವಣಿಗೆಯೊಂದಿಗೆ ಈ ಹಣಕಾಸು ವರ್ಷವನ್ನು ಮುಗಿಸಲು ನಾವು ಸಂತುಷ್ಟರಾಗಿದ್ದೇವೆ. 2024–25ರ ಅವಧಿಯಲ್ಲೂ ಇದೇ ಬೆಳವಣಿಗೆ ಇರಲಿದೆ ಎಂದು ನಾವು ಆಶಿಸುತ್ತೇವೆ ಎಂದು ಕಿರ್ಲೋಸ್ಕರ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT