ಸೋಮವಾರ, ಜುಲೈ 4, 2022
22 °C

ಟೊಯೋಟ ವಾಹನಗಳ ಬೆಲೆ ಏಪ್ರಿಲ್‌ 1ರಿಂದ ಶೇ 4ರವರೆಗೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಟೊಯೋಟ ಕಿರ್ಲೋಸ್ಕರ್‌ ಮೋಟರ್ ಕಂಪನಿಯು ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ ತನ್ನೆಲ್ಲಾ ಮಾದರಿಗಳ ಬೆಲೆಯನ್ನು ಶೇ 4ರವರೆಗೆ ಹೆಚ್ಚಿಸುವುದಾಗಿ ಶನಿವಾರ ತಿಳಿಸಿದೆ.

ಕಚ್ಚಾ ಸಾಮಗ್ರಿಗಳು ಸೇರಿದಂತೆ ತಯಾರಿಕಾ ವೆಚ್ಚದಲ್ಲಿ ಏರಿಕೆ ಆಗಿರುವುದರಿಂದ ವಾಹನಗಳ ಬೆಲೆ ಹೆಚ್ಚಳದ ನಿರ್ಧಾರಕ್ಕೆ ಬರಲಾಗಿದೆ. ಗ್ರಾಹಕರ ಮೇಲೆ ಹೆಚ್ಚುತ್ತಿರುವ ವೆಚ್ಚವನ್ನು ಕಡಿಮೆ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳನ್ನೂ ನಡೆಸಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಬಿಎಂಡಬ್ಲ್ಯು, ಔಡಿ ಮತ್ತು ಮರ್ಸಿಡಿಸ್‌ ಬೆಂಜ್‌ ಕಂಪನಿಗಳು ಸಹ ಏಪ್ರಿಲ್‌ 1 ರಿಂದ ಬೆಲೆ ಏರಿಕೆ ಮಾಡುವುದಾಗಿ ಈಗಾಗಲೇ ಘೋಷಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು