ಬುಧವಾರ, ಜನವರಿ 22, 2020
18 °C

ಬೆಂಜ್‌ನ ಪ್ರಗತಿಯಓಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಐಷಾರಾಮಿ ಕಾರು ತಯಾರಿಸುವ ಜರ್ಮನಿಯ ಮರ್ಸಿಡಿಸ್‌ ಬೆಂಜ್‌ ಕಂಪನಿಯು ಭಾರತದಲ್ಲಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ.
ವಾಹನ ತಯಾರಿಕೆ ಆರಂಭಿಸಿ ನವೆಂಬರ್‌ 27ಕ್ಕೆ 25 ವರ್ಷ ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಸ್ಥಳೀಯವಾಗಿ ತಯಾರಿಸಿರುವ ಒಟ್ಟಾರೆ 1.1 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. ಐಷಾರಾಮಿ ವಾಹನಗಳ ತಯಾರಿಕೆಯಲ್ಲಿ 130 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕಂಪನಿಯು ಭಾರತದಲ್ಲಿಯೂ ಜನರ ವಿಶ್ವಾಸ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪುಣೆಯ ಚಾಕನ್‌ ಘಟಕ ಆರಂಭವಾಗಿ 10 ವರ್ಷ ಪೂರೈಸಿರುವುದು ಸಹ ಈ ಸಂಭ್ರಮವನ್ನು ದಪ್ಪಟ್ಟುಗೊಳಿಸಿದೆ. 2009ರಲ್ಲಿ ಈ ಘಟಕ ಸ್ಥಾಪಿಸಲಾಗಿತ್ತು.

ನಮ್ಮ ಉತ್ಪನ್ನ ಮತ್ತು ಸೇವೆಗಳನ್ನು ಒಪ್ಪಿಕೊಳ್ಳುತ್ತಿರುವ ಗ್ರಾಹರಿಗೆ 25 ವರ್ಷ ಪೂರೈಸಿರುವ ಗೌರವ ಸಲ್ಲುತ್ತದೆ ಎಂದು ಕಂಪನಿಯ ಸಿಇಒ ಮಾರ್ಟಿನ್‌ ಶ್ವೆಂಕ್‌ ಹೇಳಿದ್ದಾರೆ. ಸಿಬ್ಬಂದಿ, ವಿತರಕರು, ಪಾಲುದಾರರು ಅವರ ತಂಡ ಮತ್ತು ನಮ್ಮ ಪೂರೈಕೆದಾರರ ಪರಿಶ್ರಮದಿಂದ ಇದು ಸಾಧ್ಯವಾಗಿದೆ ಎಂದೂ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು