ಹಬ್ಬಗಳ ಸಾಲು ಶುರುವಾಗಿದೆ. ಜೊತೆಗೆ ಕೋವಿಡ್ ಮಧ್ಯೆಯೂ ಕೆಲವು ವಿವಾಹ ಕಾರ್ಯಕ್ರಮಗಳು ನಡೆಯುತ್ತಿವೆ. ಹಬ್ಬವೆಂದರೆ, ಶುಭ ಕಾರ್ಯಗಳೆಂದರೆ ಸೀರೆಗಳ ವೈಭವವಿಲ್ಲದೇ ಊಹಿಸಲೂ ಸಾಧ್ಯವಿಲ್ಲ. ಸಣ್ಣಪುಟ್ಟ ವಿಶೇಷಗಳಿಗೂ ಸೀರೆ ಖರೀದಿಸಿ ವಾರ್ಡ್ರೋಬ್ ಅನ್ನು ತುಂಬಿಸುವ ಹೆಣ್ಣುಮಕ್ಕಳು ಇನ್ನು ವರಮಹಾಲಕ್ಷ್ಮಿಗೆ ಕೊಂಡುಕೊಳ್ಳದಿರುತ್ತಾರೆಯೇ? ಹಾಗೆಯೇ ಫ್ಯಾಷನ್ ಲೋಕದ ಬದಲಾವಣೆಗೆ ತಕ್ಕಂತೆ ಸೀರೆಯ ವಿನ್ಯಾಸ, ಬಟ್ಟೆಯಲ್ಲೂ ಬದಲಾವಣೆಯಾಗುತ್ತಿದ್ದು, ಹೊಸ ಫ್ಯಾಷನ್ನಿನ ಸೀರೆ ಕೊಂಡು ಸಂಭ್ರಮಿಸುವವರಿಗೇನೂ ಕೊರತೆಯಿಲ್ಲ. ಮಾರುಕಟ್ಟೆಯಲ್ಲಿ ತರಾವರಿ ಸೀರೆಗಳ ನಡುವೆ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿರುವುದೆಂದರೆ ಆರ್ಗಾಂಝಾ ಸೀರೆ.

ಆರ್ಗಾಂಝಾ ಸೀರೆ...

ಆರ್ಗಾಂಝಾ ಎನ್ನುವುದು ರೇಷ್ಮೆ ಬಟ್ಟೆಯಿಂದ ಸಾಂಪ್ರದಾಯಿಕವಾಗಿ ತಯಾರಿಸುವ, ಇತ್ತೀಚೆಗೆ ಹೆಚ್ಚು ಬೇಡಿಕೆ ಹೊಂದಿರುವ ಸೀರೆಯಾಗಿದೆ. ಕೆಲವೊಮ್ಮೆ ನೈಲಾನ್ ಅಥವಾ ಪಾಲಿಯೆಸ್ಟರ್ ಬಟ್ಟೆಯಿಂದಲೂ ಈ ಸೀರೆಯನ್ನು ತಯಾರಿಸಲಾಗುತ್ತದೆ. ಸರಳ ಹಾಗೂ ಸುಂದರವಾಗಿರುವ ಈ ಸೀರೆಯಲ್ಲಿ ನೇಯ್ಗೆಯು ಎದ್ದು ಕಾಣುವಂತೆ ಇರುತ್ತದೆ. ಡಿನ್ನರ್ ನೈಟ್, ಕಾಕ್ಟೇಲ್ ಪಾರ್ಟಿಗಳಿಗೆ ಈ ಸೀರೆ ಹೊಂದುತ್ತದೆ. ಇದನ್ನು ಉಟ್ಟರೆ ಐಷಾರಾಮಿ ನೋಟ ಸಿಗುವುದಲ್ಲದೇ ವರ್ಚಸ್ಸು ಹೆಚ್ಚುತ್ತದೆ. ತೆಳ್ಳನೆಯ ಸೀರೆಯ ಮೇಲೆ ಹೂವಿನ ಚಿತ್ತಾರವಿರುವ ಈ ಸೀರೆಯನ್ನು ಮೆಚ್ಚದೇ ಇರುವ ಹೆಣ್ಣುಮಕ್ಕಳು ಕಡಿಮೆ ಎಂದೇ ಹೇಳಬಹುದು.

ಮದುವೆ, ಪಾರ್ಟಿಯಲ್ಲಿ ರಂಗು

ಇತ್ತೀಚೆಗೆ ಮದುವೆ, ಗೃಹಪ್ರವೇಶದಂತಹ ಕಾರ್ಯಕ್ರಮಗಳಲ್ಲಿ ಹೆಣ್ಣುಮಕ್ಕಳು ಆರ್ಗಾಂಝಾ ಸೀರೆಯನ್ನು ಉಡಲು ಇಷ್ಟಪಡುತ್ತಾರೆ. ಧರಿಸಿದಾಗ ಸ್ಟೈಲಿಷ್ ಆಗಿ ಸೌಂದರ್ಯವನ್ನು ಹೆಚ್ಚಿಸುವ ಈ ಸೀರೆ ಇಂತಹ ಕಾರ್ಯಕ್ರಮಗಳಲ್ಲಿ ಎದ್ದು ಕಾಣುವಂತೆ ಮಾಡುತ್ತದೆ. ತಿಳಿ ಬಣ್ಣದ ಮೇಲೆ ಗಾಢ ಬಣ್ಣದ ಹೂವಿನ ಚಿತ್ತಾರವಿರುವ ಸೀರೆಗಳು ಮದುವೆಯಂತಹ ಕಾರ್ಯಕ್ರಮಕ್ಕೆ ಹೆಚ್ಚು ಸೂಕ್ತ ಎನ್ನಿಸುತ್ತವೆ. ಇತ್ತೀಚೆಗೆ ಹೆಣ್ಣುಮಕ್ಕಳು ಫ್ಯೂಷನ್ ಫ್ಯಾಷನ್ ಮೇಲೆ ಹೆಚ್ಚು ಒಲವು ತೋರುವ ಕಾರಣ ಇದು ಹೆಚ್ಚು ಬೇಡಿಕೆ ಪಡೆದುಕೊಂಡಿದೆ. ಭಿನ್ನ ವಿನ್ಯಾಸ ಹಾಗೂ ಹೆಚ್ಚು ವರ್ಕ್ಗಳಿರುವ ಸೆರಗು ಹೊಂದಿರುವ ಆರ್ಗಾಂಝಾ ಸೀರೆ ಒಳ್ಳೆಯ ಲುಕ್ ನೀಡುತ್ತದೆ.

ಮಿಲೇನಿಯಲ್ಗಳ ಅಚ್ಚುಮೆಚ್ಚು

ಸರಳ, ಹಗುರವಾಗಿದ್ದು ಸ್ಟೈಲಿಶ್ ಆಗಿರುವ ಸೀರೆ ಮಿಲೇನಿಯಲ್ ಯುವತಿಯರ ಮನ ಕದ್ದಿರುವುದು ಸುಳ್ಳಲ್ಲ. ನೋಡಲು ತೆಳು ಅನ್ನಿಸಿದರೂ ಸೀರೆ ಉಟ್ಟ ಮೇಲೆ ನೋಟವೇ ಬದಲಾಗುವಂತೆ ಮಾಡುವ ಈ ಸೀರೆಗೆ ಫ್ಯಾಷನ್ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ಖ್ಯಾತ ವಿನ್ಯಾಸಕಾರರೂ ಇದರ ಬಗ್ಗೆ ಹೆಚ್ಚು ಆಸ್ಥೆ ವಹಿಸುತ್ತಿದ್ದಾರೆ.

ಬಾಲಿವುಡ್, ಹಾಲಿವುಡ್ನಲ್ಲೂ ಸದ್ದು

ಫ್ಯಾಷನ್ ಮಾರುಕಟ್ಟೆಯಲ್ಲಿ ಹೊಸತಾಗಿ ಯಾವುದೇ ಬರಲಿ ಅದನ್ನು ಮೊದಲು ಮೆಚ್ಚಿ ಪ್ರಚಾರ ನೀಡುವುದು ಸಿನಿತಾರೆಯರು. ಈ ಆರ್ಗಾಂಝಾ ಸೀರೆಯನ್ನೂ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ಸಿನಿತಾರೆಯರೂ ಮೆಚ್ಚಿ ಧರಿಸಿದ್ದಾರೆ. ಕರೀನಾ ಕಪೂರ್, ಅನುಷ್ಕಾ ಶರ್ಮಾ, ಶಿಲ್ಪಾ ಶೆಟ್ಟಿ, ಸಮಂತಾ ಮೊದಲಾದ ನಟಿಮಣಿಯರು ಈ ಸೀರೆಯನ್ನು ಮೆಚ್ಚಿದ್ದಾರೆ, ಅಲ್ಲದೇ ಆರ್ಗಾಂಝಾ ಸೀರೆ ಧರಿಸಿದ್ದ ತಮ್ಮ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ.

ಆನ್ಲೈನ್ನಲ್ಲೂ ಹೆಚ್ಚಿದ ಬೇಡಿಕೆ

ಸೀರೆ ಮಳಿಗೆಗಳಲ್ಲಿ ಮಾತ್ರವಲ್ಲದೇ ಆನ್ಲೈನ್ನಲ್ಲೂ ಆರ್ಗಾಂಝಾ ಸೀರೆ ಖರೀದಿಯ ಭರಾಟೆ ಜೋರಾಗಿದೆ. ಅದರಲ್ಲೂ ಹಬ್ಬಹರಿದಿನಗಳಲ್ಲಿ ಆನ್ಲೈನ್ ಖರೀದಿ ಬೇಡಿಕೆ ಹೆಚ್ಚಿದೆ. ಬಹುತೇಕ ಎಲ್ಲಾ ಆನ್ಲೈನ್ ಮಾರುಕಟ್ಟೆಯಲ್ಲಿ ವಿಭಿನ್ನ ವಿನ್ಯಾಸ ಹಾಗೂ ಬಣ್ಣದ ಆರ್ಗಾಂಝಾ ಸೀರೆಗಳಿವೆ. ಆಫ್ಲೈನ್ ಮಳಿಗೆಗಳಿಗೆ ಹೋಲಿಸಿದರೆ ಆನ್ಲೈನ್ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಕಡಿಮೆ ಇದೆ. ಅಲ್ಲದೇ ಹಬ್ಬದ ದಿನಗಳಲ್ಲಿ ವಿಶೇಷ ರಿಯಾಯಿತಿ ಇರುವ ಕಾರಣ ಇನ್ನಷ್ಟು ಕಡಿಮೆ ಬೆಲೆಗೆ ಗ್ರಾಹಕರನ್ನು ತಲುಪುತ್ತಿದೆ.

ಆರ್ಗಾಂಝಾ ಸೀರೆಯ ಕೆಲವು ಆಸಕ್ತಿದಾಯಕ ಅಂಶಗಳು

ಇದು ಯಾವುದೇ ಬಣ್ಣ ಹಾಗೂ ಶೇಡ್ನಲ್ಲಿ ಆಕರ್ಷಕವಾಗಿ ಕಾಣುತ್ತದೆ. ಆಕರ್ಷಕ ಟೋನ್ ಹಾಗೂ ಬಣ್ಣದ ಸೀರೆಗಳು ಲಭ್ಯವಿರುವ ಕಾರಣ ಎಲ್ಲರಿಗೂ ಇಷ್ಟವಾಗುತ್ತದೆ. ಹಣ ಹಾಗೂ ಆದ್ಯತೆಗೆ ತಕ್ಕಂತೆ ಖರೀದಿಸಲು ಸಾಧ್ಯವಿದೆ.

ಈ ಸೀರೆಯ ಬಟ್ಟೆ ಭಿನ್ನವಾಗಿರುವ ಕಾರಣ ಸುಲಭವಾಗಿ ಡಿಜಿಟಲ್ ವಿನ್ಯಾಸ ಮಾಡಬಹುದಾಗಿದೆ. ಆ ಕಾರಣಕ್ಕೆ ಫ್ಯಾಷನ್ ವಿನ್ಯಾಸಕರು ಈ ಸೀರೆಯ ಮೇಲೆ ಭಿನ್ನ, ವಿಭಿನ್ನ ವಿನ್ಯಾಸಗಳನ್ನು ಚಿತ್ರಿಸುತ್ತಾರೆ. ಕಂಪ್ಯೂಟರ್ ಡಿಸೈನ್ಗಳನ್ನೂ ಸೀರೆಯಲ್ಲಿ ಹೆಚ್ಚಾಗಿ ಕಾಣಬಹುದು. ಫ್ಯಾಷನ್ ವಿನ್ಯಾಸಕರ ಕಲ್ಪನೆಯ ಹಲವು ಚಿತ್ತಾರಗಳನ್ನು ಸೀರೆಯಲ್ಲಿ ಮೂಡಿಸಬಹುದು.

ಇದು ವಧುವಿನ ಉಡುಗೆಗಳಿಗೆ ಉತ್ತಮವಾಗಿರುತ್ತದೆ. ವಿಶೇಷ ವಿನ್ಯಾಸ, ಅನನ್ಯ ಫ್ಯಾಬ್ರಿಕ್ ಹೊಂದಿರುವ ಕಾರಣ ಧರಿಸಿದವರ ಸೊಬಗು ಹಾಗೂ ಸೌಂದರ್ಯವನ್ನು ಎತ್ತಿ ಹಿಡಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.