ಫ್ಯಾಶನ್ ಷೋ ಅಂದರೆ ಅಲ್ಲಿ ಅಂದ, ಆಕಾರ, ವಯಸ್ಸು ಮುಂತಾದವು ಇರುವವರಿಗೆ ಮಾತ್ರ ರ್ಯಾಂಪ್ ಹತ್ತಲು ಅವಕಾಶ ಸಿಗುವುದುಂಟು.

ಆದರೆ ಇಲ್ಲೊಂದು ಹೊಸ ಪ್ರಯತ್ನ ನಡೆದಿದೆ. ಜ್ಯೋತ್ಸಾ ವೆಂಕಟೇಶ್ ಮತ್ತು ಸಬರೇಷ್ ಬಾಲಕೃಷ್ಣನಾಯ್ಡು ಸಾರಥ್ಯದ ಜಾಸ್ ಸ್ಟುಡಿಯೋದವರು, ‘ಮಿಸ್ ಅಂಡ್ ಮಿಸಸ್ ಕರ್ನಾಟಕ 2021’ ಅಡಿಷನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು. ಇದಕ್ಕೆ ಯಾವುದೇ ರೀತಿಯ ನೋಂದಣಿ ಶುಲ್ಕವಿಲ್ಲ. ಪ್ರಸಕ್ತ ಪಿಡುಗು ಬಂದಿರುವ ಸಂದರ್ಭದಲ್ಲಿ ಇವರಿಗೆ ಬದುಕಿನಲ್ಲಿ ಆತ್ಮವಿಶ್ವಾಸ ತುಂಬಲು ಇಂತಹ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಜಾಸ್ ಸ್ಟುಡಿಯೋ ಹೇಳಿದೆ.

ಆಡಿಷನ್ ಮುಗಿದಿದೆ. ಅಕ್ಟೋಬರ್ ಅಂತ್ಯದೊಳಗೆ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ.

ಫ್ಯಾಶನ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಹತ್ತು ಮಂದಿ ತೀರ್ಪುಗಾರರಾಗಿದ್ದಾರೆ. ಈ ಪೈಕಿ ಇಬ್ಬರು ಮಂಗಳಮುಖಿಯರು. ನೀತೂ ಆರ್.ಎಸ್ ಹಾಗೂ ಅಮಿತ್ಪಾಂಡ್ಯ ತೀರ್ಪುಗಾರರ ಸಾಲಿನಲ್ಲಿದ್ದಾರೆ. ಬೆಂಗಳೂರು, ಮೈಸೂರು, ಮೂಡಬಿದಿರೆ, ತಿರುಪತಿ, ತ್ರಿಪುರ, ಶಿಲ್ಲಾಂಗ್ ಸಹಿತ ವಿವಿಧೆಡೆಯಿಂದ 115 ಸ್ಪರ್ಧಿಗಳು ಬಂದಿದ್ದರು. ಮಿಸ್ ಮತ್ತು ಮಿಸೆಸ್ ಎರಡು ವಿಭಾಗಗಳಲ್ಲಿ ಒಟ್ಟು 12 ಮಂದಿಯಂತೆ ಆಯ್ಕೆ ನಡೆಯಲಿದೆ. ಆಯ್ಕೆ ಸುತ್ತಿನಲ್ಲಿ ನಟ ಅಭಯ್ವೀರ್, ಗಾಯಕಿ ರೆಮೋ ಮುಂತಾದ ಗಣ್ಯರು ಅತಿಥಿಗಳಾಗಿ ಆಗಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.