ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರಿಸಲು ಆರಾಮದಾಯಕ ಫ್ಯೂಷನ್‌ ಉಡುಪು

Last Updated 12 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ಫ್ಯಾಷನ್ ಮಾರುಕಟ್ಟೆಯಲ್ಲಿ ದಿನಕ್ಕೊಂದು ಬಗೆಯ ಫ್ಯಾಷನ್‌ ಉಡುಗೆಗಳು ರಾರಾಜಿಸುತ್ತಿವೆ. ಈಗ ಪಾಶ್ಚ್ಯಾತ್ಯ ಉಡುಗೆಗಳೊಂದಿಗೆ ಭಾರತೀಯ ಶೈಲಿಯ ಉಡುಗೆಗಳನ್ನು ಮಿಕ್ಸ್ ಅಂಡ್‌ ಮ್ಯಾಚ್ ಮಾಡಿಕೊಳ್ಳುವುದು ಟ್ರೆಂಡ್‌. ಈಗಿನ ಯುವತಿಯರು ಮನೆಯಿಂದಲೇ ಕೆಲಸವಾಗಲಿ, ಕಚೇರಿ ಕೆಲಸವಾಗಲಿ ಧರಿಸಲು ಸುಲಭ ಎನ್ನಿಸುವ ಇಂಡೋ–ವೆಸ್ಟರ್ನ್‌(ಫ್ಯೂಷನ್‌) ಶೈಲಿಯ ದಿರಿಸುಗಳನ್ನು ತೊಡಲು ಇಷ್ಟಪಡುತ್ತಾರೆ. ಇಂತಹ ಹೊಸ ಟ್ರೆಂಡ್‌ನ ಕೆಲವು ಉಡುಪುಗಳು ಹೀಗಿವೆ.

ಸಾಫ್ಟ್‌ ರಿಬ್ಡ್ ಟೀ ಶರ್ಟ್‌: ಧರಿಸಲು ಆರಾಮ ಎನ್ನಿಸುವ, ಸಡಿಲವಾಗಿರುವ ರಿ‌ಬ್ಡ್ ಟೀ ಶರ್ಟ್‌ಗಳನ್ನು ಯುವತಿಯರು ಹೆಚ್ಚು ಇಷ್ಟಪಡುತ್ತಾರೆ. ಇದರಲ್ಲಿ ಕ್ರಾಪ್ಡ್‌ ಟೀ ಶರ್ಟ್‌ಗಳು ಕೂಡ ಲಭ್ಯ. ಜೀನ್ಸ್ ಅಥವಾ ಲೆಗ್ಗಿಂಗ್ಸ್ ಮೇಲೆ ಧರಿಸಲು ಇದು ಚೆನ್ನಾಗಿರುತ್ತದೆ. ತುಂಬು ತೋಳಿನ ಈ ಟೀ ಶರ್ಟ್‌ಗಳು ಎಲ್ಲಾ ಕಾಲಕ್ಕೂ ಹೊಂದುತ್ತವೆ.

ಸ್ವೆಟ್‌ ಸೂಟ್‌: ಧರಿಸಲು ಆರಾಮವಾಗಿರಬೇಕು ಎಂಬ ಕಾರಣಕ್ಕೆ ಸ್ವೆಟ್‌ ಶರ್ಟ್‌ ಅಥವಾ ಸ್ವೆಟ್‌ ಫ್ಯಾಂಟ್‌ಗಳನ್ನು ಧರಿಸುವುದು ಇಷ್ಟವಾಗಬಹುದು. ಆದರೆ ವರ್ಷಗಳಿಂದ ಸ್ವೆಟ್‌ ಪ್ಯಾಂಟ್ ಧರಿಸಿ ಬೇಸರವಾಗಿದ್ದರೆ ಸ್ವೆಟ್‌ ಸೂಟ್‌ಗಳನ್ನು ಖರೀದಿಸಿಬಹುದು. ಸ್ವೆಟ್‌ ಶಾರ್ಟ್ಸ್‌ ಈಗಿನ ಟ್ರೆಂಡ್‌. ಒಂದೇ ಬಣ್ಣದ ಶಾರ್ಟ್ಸ್‌ ಹಾಗೂ ಟೀ ಶರ್ಟ್‌ಗಳು ಫ್ಯಾಷನ್‌ ಲೋಕವನ್ನು ಪ್ರವೇಶಿಸಿವೆ. ಟೈ ಅಂಡ್ ಡೈ ವಿನ್ಯಾಸವೂ ಚೆನ್ನಾಗಿರುತ್ತದೆ.

ರಿಬ್ಡ್ ವೈಡ್‌ ಲೆಗ್‌ ಲೌಂಜ್ ಪ್ಯಾಂಟ್‌: ಮೇಲಿನಿಂದ ಕೆಳಗಿನವರೆಗೆ ಒಂದೇ ಬಣ್ಣದ ಬಟ್ಟೆ ಧರಿಸುವ ಹಳೆಯ ಫ್ಯಾಷನ್‌ ಈಗ ಮತ್ತೆ ಫ್ಯಾಷನ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ವೈಡ್ ಲೆಗ್‌ ಲೌಂಜ್ ಪ್ಯಾಂಟ್‌ ಹಾಗೂ ತೋಳಿಲ್ಲದ ಅದೇ ಬಣ್ಣದ ಟೀ ಶರ್ಟ್ ಧರಿಸಲು ಹೆಚ್ಚು ಸೂಕ್ತ. ಮೃದುವಾದ ಕಾಟನ್ ಲೌಂಜ್ ಪ್ಯಾಂಟ್‌ ಲಭ್ಯವಿದ್ದು ಇದು ಬೇಸಿಗೆಕಾಲಕ್ಕೂ ಧರಿಸಲು ಚೆನ್ನಾಗಿರುತ್ತದೆ.

ಪ್ರಿಂಟ್‌ಗಳಿರುವ ರ‍್ಯಾಪ್‌ ಟಾಪ್‌: ಪ್ರಿಂಟ್‌ ಇರುವ ವಿವಿಧ ವಿನ್ಯಾಸದ ರ‍್ಯಾಪ್‌ ಟಾಪ್‌ಗಳು ಇಂದು ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಹೊರಗಡೆ ಹೋಗುವಾಗ, ಮನೆಯಿಂದಲೇ ಕೆಲಸ ಮಾಡುವಾಗ ಎರಡೂ ಸಂದರ್ಭಗಳಲ್ಲಿ ಭಿನ್ನ ಲುಕ್ ಕೊಡುವ ರ‍್ಯಾಪ್‌ ಟಾಪ್‌ ವಿವಿಧ ವಿನ್ಯಾಸಗಳಲ್ಲಿ ಲಭ್ಯವಿದೆ. ಇದನ್ನು ಜೀನ್ಸ್, ಪೈಜಾಮ, ಪೆನ್ಸಿಲ್ ಪ್ಯಾಂಟ್ ಎಲ್ಲದರೊಂದಿಗೂ ಧರಿಸಬಹುದು.

ಕಾಟನ್-ಪಾಪ್ಲಿನ್ ಮಿನಿ ಟಾಪ್‌: ವಿವಿಧ ಬಣ್ಣದ ವಿನ್ಯಾಸದ ಮಿನಿ ಟಾಪ್‌ಗಳು ಎಲ್ಲಾ ವಯಸ್ಸಿನವರಿಗೂ ಸೂಕ್ತ ಎನ್ನಿಸುತ್ತವೆ, ಅಲ್ಲದೇ ಇದು ಟ್ರೆಂಡಿ ಡ್ರೆಸ್‌ ಕೂಡ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT