ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

2 ವರ್ಷದ ಹರಿವರ್ಧನ್‌ಗೆ ಕ್ಯಾನ್ಸರ್: ನೆರವಿಗಾಗಿ ಕಾಯುತ್ತಿರುವ ಕುಟುಂಬ

Published 24 ಜನವರಿ 2024, 10:32 IST
Last Updated 24 ಜನವರಿ 2024, 10:32 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕ ಮೂಲದ ಅನುಷಾ ಮತ್ತು ಕಿರಣ್ ದಂಪತಿಗೆ 2021ರಲ್ಲಿ ಹರಿವರ್ಧನ್ ಹುಟ್ಟಿದಾಗ ಮನೆಯಲ್ಲಿ ಸಂತಸ ಮನೆ ಮಾಡಿತ್ತು. ಆದರೆ, 2023ರ ಸೆಪ್ಟೆಂಬರ್‌ನಲ್ಲಿ ಕುಟುಂಬಕ್ಕೆ ಆಘಾತ ಕಾದಿತ್ತು.

‘ನನ್ನ ಮಗನಿಗೆ ಇದ್ದಕ್ಕಿದ್ದಂತೆ ಜ್ವರ ಕಾಣಿಸಿಕೊಂಡಿತು. ಕಿವಿ ಮತ್ತು ಕೆನ್ನೆಯ ಭಾಗದಲ್ಲಿ ಊತ ಕಂಡುಬಂದಿತು. ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆಗೊಳಪಡಿಸಿದಾಗ ಆತನಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಆಗಾಗ್ಗೆ ಅನಾರೋಗ್ಯಕ್ಕೆ ಈಡಾಗುತ್ತಿರುತ್ತಾರೆ. ಅವರಿಗೆ ಕ್ಯಾನ್ಸರ್ ಇರುತ್ತದೆ ಎಂದು ಯಾರಾದರೂ ಊಹಿಸಲು ಸಾಧ್ಯವೇ’ ಎಂದು ತಾಯಿ ಅನುಷಾ ಕಣ್ಣೀರು ಹಾಕುತ್ತಾರೆ.

ವೈದ್ಯರನ್ನು ಸಂಪರ್ಕಿಸಿದ ಬಳಿಕ ಪೋಷಕರು ಮಗನಿಗೆ ಉತ್ತಮ ಚಿಕಿತ್ಸೆ ಒದಗಿಸಲು ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬರಲು ನಿರ್ಧರಿಸುತ್ತಾರೆ. ಬೆಂಗಳೂರಲ್ಲಿ ಹಲವು ಪರೀಕ್ಷೆ ನಡೆಸಿದ ವೈದ್ಯರು ಹರಿವರ್ಧನ್‌ಗೆ ಕ್ಯಾನ್ಸರ್ 4ನೇ ಸ್ಟೇಜ್‌ನಲ್ಲಿದ್ದು, ಕ್ಯಾನ್ಸರ್ ಥೆರಪಿ ಅಗತ್ಯವಿದೆ ಎಂದು ಸೂಚಿಸಿದ್ದಾರೆ.

‘ನನ್ನ ಕುಟುಂಬದಲ್ಲಿ ನನ್ನ ಪತಿ ಒಬ್ಬರು ಮಾತ್ರ ದುಡಿಮೆ ಮಾಡುತ್ತಿದ್ದರು. ಈಗ ಹರಿವರ್ಧನ್ ಚಿಕಿತ್ಸೆ ನೋಡಿಕೊಳ್ಳಲು ಬೇರೆ ದಾರಿ ಇಲ್ಲದೆ ತಮ್ಮ ವ್ಯವಹಾರ ನಿಲ್ಲಿಸಿದ್ದಾರೆ. ನಮಗೆ ಈಗ ಚಿಕಿತ್ಸೆಗೆ ₹10 ಲಕ್ಷ ಅಗತ್ಯವಿದೆ. ಈ ಮೊತ್ತ ನಮ್ಮಂಥವರಿಗೆ ಬಹಳ ದೊಡ್ಡದು. ನಮ್ಮ ಎಲ್ಲ ಆಭರಣಗಳನ್ನೂ ಮಾರಾಟ ಮಾಡಿದ್ದೇವೆ. ಗೆಳೆಯರು ಮತ್ತು ಕುಟುಂಬ ವರ್ಗದವರಿಂದ ಬಹಳಷ್ಟು ಸಾಲ ಪಡೆದಿದ್ದೇವೆ. ಹಾಗಾಗಿ, ನೆರವು ಪಡೆಯಲು ಬೇರೆ ಯಾವ ಸಂಬಂಧಿಕರು ಉಳಿದಿಲ್ಲ. ನಾವು ನಿಮ್ಮ ಅಮೂಲ್ಯ ನೆರವಿನ ನಿರೀಕ್ಷೆಯಲ್ಲಿದ್ದೇವೆ’ ಎಂದು ಅನುಷಾ ನೋವು ತೋಡಿಕೊಂಡಿದ್ದಾರೆ.

ನಿಮ್ಮ ಅಮೂಲ್ಯವಾದ ಸಹಾಯಕ್ಕಾಗಿ ನಿರೀಕ್ಷಿಸಲಾಗುತ್ತಿದೆ

ಹರಿವರ್ಧನ್‌ಗೇ ಇನ್ನೂ ಕೇವಲ 2 ವರ್ಷ. ಆತ ಸರಿಯಾಗಿ ಕೂರಲು ಅಥವಾ ನಿಲ್ಲಲು ಸಾಧ್ಯವಾಗುತ್ತಿಲ್ಲ. ಪದಗಳಲ್ಲಿ ನನ್ನ ನೋವನ್ನು ವ್ಯಕ್ತಪಡಿಸುವುದೂ ಆತನಿಗೆ ಸಾಧ್ಯವಿಲ್ಲ. ಅವನನ್ನು ಆಸ್ಪತ್ರೆ ಬೆಡ್ ಮೇಲೆ ನೋಡಿದಾಗಲೆಲ್ಲ ನನಗಾಗುವ ನೋವನ್ನು ವಿವರಿಸಲು ಸಾಧ್ಯವಿಲ್ಲ ಎಂದು ಅನುಷಾ ಮತ್ತೆ ಕಣ್ಣೀರು ಹಾಕುತ್ತಾರೆ.

ಹರಿವರ್ಧನ್ ಭವಿಷ್ಯ ಈಗ ನಿಮ್ಮ ಭರವಸೆಯೆ ಕೈಗಳಲ್ಲಿದೆ. ದಯವಿಟ್ಟು ಉದಾರವಾಗಿ ನೆರವನ್ನು ನೀಡಿ. ಹರಿವರ್ಧನ್ ಆರೋಗ್ಯಯುತವಾಗಿ ಜೀವನ ಕಳೆಯಲು ಸಹಾಯ ಮಾಡಿ ಎಂದು ತಾಯಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT