ಇತ್ತೀಚಿನ ವರ್ಷಗಳಲ್ಲಿ ‘ಯೋಗ’ವು ಇಡೀ ಜಗತ್ತನ್ನೇ ಆವರಿಸಿದೆ. ಆ ಮೂಲಕ ಜಗತ್ತಿನ ಲಕ್ಷಾಂತರ ಜನರ ಜೀವನವನ್ನು ಬದಲಾಯಿಸಿದೆ. ಯೋಗವನ್ನು ಜಾಗತಿಕವಾಗಿ ಹರಡಲು ಪತಂಜಲಿ ಆಯುರ್ವೇದದ ಸಹ-ಸಂಸ್ಥಾಪಕರಾದ ಸ್ವಾಮಿ ರಾಮದೇವ್ ಅವರು ಅವಿಶ್ರಾಂತವಾಗಿ ಶ್ರಮಿಸಿದ್ದಾರೆ. ಅವರ ನಿಷ್ಕಲ್ಮಶ ಬೋಧನೆಗಳು ಯೋಗದಿಂದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳನ್ನು ಕಂಡುಕೊಳ್ಳುವಲ್ಲಿ ಅಸಂಖ್ಯಾತ ಜನರಿಗೆ ಮಾರ್ಗದರ್ಶನ ನೀಡಿವೆ.

ಯೋಗವನ್ನು ಜಗತ್ತಿನಾದ್ಯಂತ ಪ್ರಚಾರ ಮಾಡುವಲ್ಲಿ ಸ್ವಾಮಿ ರಾಮದೇವ್ ಅವರ ಪಾತ್ರ ಗಮನಾರ್ಹವಾಗಿದೆ. ಅವರು ಟಿ.ವಿ ಕಾರ್ಯಕ್ರಮಗಳು, ಸಾಮಾಜಿಕ ಮಾಧ್ಯಮಗಳು ಮತ್ತು ಲೈವ್ ಇವೆಂಟ್ಗಳ ಮೂಲಕ ಎಲ್ಲರೂ ಯೋಗ ಮಾಡುವಂತೆ ಮಾಡಿದ್ದಾರೆ. ಇದಕ್ಕೆ ವಯಸ್ಸು ಅಥವಾ ಹಿನ್ನೆಲೆಯನ್ನು ರಾಮದೇವ ಅವರು ಲೆಕ್ಕಿಸಿಲ್ಲ. ಯೋಗದ ಸಂಕೀರ್ಣ ತಂತ್ರಗಳನ್ನು ಸರಳ ಪರಿಕಲ್ಪನೆಗಳಾಗಿ ತಿಳಿಸುವ ಅವರ ಸಾಮರ್ಥ್ಯವು ಅವರನ್ನು ಒಬ್ಬ ಜನಪ್ರಿಯ ಯೋಗ ಗುರುವನ್ನಾಗಿ ಮಾಡಿವೆ.

ಪತಂಜಲಿ ಯೋಗವು ದೇಶ ಭಾಷೆಯ ಎಲ್ಲೆಗಳನ್ನು ಮೀರಿದ್ದು. ಜೀವನದ ಎಲ್ಲಾ ಹಂತಗಳ ಮತ್ತು ಎಲ್ಲಾ ರೀತಿಯ ವ್ಯಕ್ತಿಗಳು ಉತ್ತಮ ಆರೋಗ್ಯ ಮತ್ತು ಉತ್ತಮ ಯೋಗಕ್ಷೇಮಕ್ಕಾಗಿ ಯೋಗವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಸಮಗ್ರ ಆರೋಗ್ಯಕ್ಕೆ ‘ಪತಂಜಲಿ ಯೋಗ’ವನ್ನು ಚಿನ್ನದಂತಹ ಅವಕಾಶವೆಂದು ಪರಿಗಣಿಸಲಾಗಿದೆ. ಪತಂಜಲಿ ಯೋಗವು ದೈಹಿಕ ಸದೃಢತೆ, ಮಾನಸಿಕ ಆರೋಗ್ಯ ಮತ್ತು ಭಾವನೆಗಳ ಸಮತೋಲನವನ್ನು ಒತ್ತಿ ಹೇಳುತ್ತದೆ.

ಓಡುತ್ತಿರುವ ಇಂದಿನ ಜಗತ್ತಿನಲ್ಲಿ ಬಹುತೇಕ ಎಲ್ಲರಿಗೂ ಒತ್ತಡ ಎಂಬುದು ಸಾಮಾನ್ಯ ಸಮಸ್ಯೆಯಾಗಿದೆ. ಒತ್ತಡವನ್ನು ನಿಭಾಯಿಸಲು ಪತಂಜಲಿ ಯೋಗ ಪರಿಣಾಮಕಾರಿ ಮಾರ್ಗವಾಗಿದೆ. ಇದು ಪ್ರಾಣಾಯಾಮ ಮತ್ತು ಮೈಂಡ್ಫುಲ್ನೆಸ್ನಂತಹ ತಂತ್ರಗಳನ್ನು ಬಳಸಿಕೊಂಡು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಪ್ರತಿಯೊಬ್ಬರು ತಮ್ಮ ದೈನಂದಿನ ದಿನಚರಿಗಳಲ್ಲಿ ಪತಂಜಲಿ ಯೋಗವನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಒತ್ತಡವನ್ನು ನಿವಾರಿಸಬಹುದು ಹಾಗೂ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬಹುದು.

‘ಅಂತರರಾಷ್ಟ್ರೀಯ ಯೋಗ ದಿನ’ದ (ಜೂನ್ 21) ಘೋಷಣೆಯು ಯೋಗದ ಪ್ರಚಾರಕ್ಕೆ ಜಾಗತಿಕವಾಗಿ ಮಹತ್ವದ ಕ್ಷಣವಾಗಿತ್ತು. ‘ಅಂತರರಾಷ್ಟ್ರೀಯ ಯೋಗ ದಿನ’ದ ಘೋಷಣೆಗೆ ‘ಪತಂಜಲಿ ಯೋಗ’ದ ಪಾತ್ರ ನಿರ್ಣಾಯಕವಾಗಿತ್ತು. ಈ ನಿಟ್ಟಿನಲ್ಲಿ ರಾಮದೇವ್ ಅವರ ಉತ್ಸಾಹಭರಿತ ಬೆಂಬಲವು ಯೋಗ ಹಾಗೂ ಅದರ ಪ್ರಯೋಜನ ಪ್ರಪಂಚದಾದ್ಯಂತ ಜನಪ್ರಿಯ ಆಗಲು ಕಾರಣವಾಯಿತು.

ನೈಸರ್ಗಿಕವಾಗಿ ಆರೋಗ್ಯವನ್ನು ಮರಳಿ ಪಡೆಯಲು ಪತಂಜಲಿ ಯೋಗವು ಸರಳವಾದ ಮಾರ್ಗವನ್ನು ಒದಗಿಸುತ್ತದೆ. ಕಲಿಯಲು ಸುಲಭವಾದ ಭಂಗಿಗಳು ಮತ್ತು ಉಸಿರಾಟದ ಪ್ರಕ್ರಿಯೆಗಳಿಗೆ ಅದು ಒತ್ತು ನೀಡುತ್ತದೆ. ಜನರು ತಮ್ಮ ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳುವ ಮೂಲಕ, ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮ ಕಾಣಬಹುದು.

ಯೋಗಕ್ಕಾಗಿ ರಾಮದೇವ್ ಅವರ ಸಮರ್ಪಣೆ ಲಕ್ಷಾಂತರ ಜೀವನವನ್ನು ಬದಲಾಯಿಸಿದೆ. ಯೋಗವನ್ನು ವಿಶ್ವಾದ್ಯಂತ ಒಂದು ಅಭ್ಯಾಸವಾಗಿ ಪರಿವರ್ತಿಸಲಾಗಿದೆ. ದೈನಂದಿನ ಒತ್ತಡವನ್ನು ನಿಭಾಯಿಸಲು, ಆರೋಗ್ಯವನ್ನು ಮರಳಿ ಪಡೆಯಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸಲು ಪತಂಜಲಿ ಯೋಗವು ಒಂದು ಅದ್ಭುತ ಮಾರ್ಗವಾಗಿ ಹೊರಹೊಮ್ಮಿದೆ. ಅಂತರರಾಷ್ಟ್ರೀಯ ಯೋಗ ದಿನ ಸಮೀಪಿಸುತ್ತಿರುವಂತೆಯೇ, ಪತಂಜಲಿ ಯೋಗದ ಪರಂಪರೆಯು ಹೊಸ ಪೀಳಿಗೆಗಳಿಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.