ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

ಸ್ಯಾಮ್‌ಸಂಗ್‌ ಆಲ್ಟ್‌ ಝಡ್‌ ಲೈಫ್‌

Last Updated 12 ಸೆಪ್ಟೆಂಬರ್ 2020, 7:17 IST
ಅಕ್ಷರ ಗಾತ್ರ

ಮೊಬೈಲ್‌ ಕ್ಷೇತ್ರದಲ್ಲಿಯೇ ಮೊಟ್ಟಮೊದಲ ಬಾರಿಗೆ ಸ್ಯಾಮ್‌ಸಂಗ್‌ ಖಾಸಗಿ ಮಾಹಿತಿ ಸುರಕ್ಷತೆಗಾಗಿ ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಫೋನ್‌ಗಳಲ್ಲಿ 'ಕ್ವಿಕ್‌ ಸ್ವಿಚ್‌' ಮತ್ತು 'ಕಂಟೆಂಟ್‌ ಸಜೆಷನ್ಸ್‌' ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿದೆ.

◘ ಖಾಸಗಿತನ ಸುರಕ್ಷತೆಯಲ್ಲಿ ಸ್ಯಾಮ್‌ಸಂಗ್‌ನ ಹೊಸ ಅನ್ವೇಷಣೆಯಿಂದ ಕ್ವಿಕ್‌ ಸ್ವಿಚ್ ಮತ್ತು ಕಂಟೆಂಟ್‌ ಸಜೆಷನ್ಸ್‌, ಗ್ಯಾಲಕ್ಸಿ ಎ51 ಹಾಗೂ ಗ್ಯಾಲಕ್ಸಿ ಎ71 ಮಾದರಿಗಳಲ್ಲಿ ಲಭ್ಯವಿದೆ.

◘ ಕ್ವಿಕ್‌ ಸ್ವಿಚ್ ಮತ್ತು ಕಂಟೆಂಟ್‌ ಸಜೆಷನ್ಸ್‌ ಗ್ಯಾಲಕ್ಸಿ ಎ51 ಹಾಗೂ ಗ್ಯಾಲಕ್ಸಿ ಎ71ನಲ್ಲಿ ಲಭ್ಯ: ಸ್ಯಾಮ್‌ಸಂಗ್‌ನಿಂದ ಉದ್ಯಮದಲ್ಲಿಯೇ ಮೊಟ್ಟ ಮೊದಲ ಖಾಸಗಿತನದ ಸುರಕ್ಷತೆ ಸೌಲಭ್ಯಗಳು

ಯಾವುದೇ ಒತ್ತಡ, ತಳಮಳ ಅಥವಾ ಆತಂಕಗಳಿಲ್ಲದೆ ನಿಮ್ಮ ಖಾಸಗಿ ಆ್ಯಪ್‌ಗಳು ಹಾಗೂ ಕಂಟೆಂಟ್‌ನ್ನು ಸುರಕ್ಷಿತವಾಗಿಟ್ಟು, ಖುಷಿಯಾಗಿರಲು ಆಲ್ಟ್‌ ಝಡ್‌ ಲೈಫ್‌ (Alt Z Life) ಸಹಕಾರಿಯಾಗಿದೆ. ಇದರಿಂದ ನಿಮ್ಮ ಖಾಸಗಿ ಬದುಕು ಖಾಸಗಿಯಾಗಿಯೇ ಉಳಿಯುತ್ತದೆ.

ಜಗತ್ತಿನ ಬಹುತೇಕ ಎಲ್ಲ ಕೆಲಸಗಳಿಗೂ ಮಿಲೇನಿಯ್ಸ್ ಮತ್ತು ಹೊಸ ತಲೆಮಾರಿನವರು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಾರೆ. ಫೋಟೊಗಳನ್ನು ಕ್ಲಿಕ್ಕಿಸುವುದು, ಗೇಮ್‌ಗಳನ್ನು ಆಡುವುದು, ಸ್ನೇಹಿತರು ಮತ್ತು ಸಂಬಂಧಿಗಳೊಂದಿಗೆ ಸಂಪರ್ಕದಲ್ಲಿರಲು ಹಾಗೂ ಎಲ್ಲದಕ್ಕೂ ಮತ್ತು ಎಲ್ಲವನ್ನೂ ಗೂಗಲ್‌ನಲ್ಲಿ ಹುಡುಕಾಡಲು ಸ್ಮಾರ್ಟ್‌ಫೋನ್‌ ಉಪಯೋಗಿಸುತ್ತಾರೆ.

ಫೋನ್‌ ಜೊತೆಗೆ ನೀವು ಅಷ್ಟೊಂದು ಬೆರೆತು ಹೋಗಿದ್ದರೆ, ಸದಾಕಾಲ ಫೋನ್‌ ಸುರಕ್ಷಿತವಾಗಿರುವಂತೆಯೇ ನಿಮಗನಿಸುತ್ತದೆ. ಆದರೆ, ನಿಮ್ಮ ಸ್ನೇಹಿತರು ಅಥವಾ ಕುಟುಂಬದವರು (ಅದರಲ್ಲೂ ನಿಮ್ಮ ಒಡಹುಟ್ಟಿದ ಮುದ್ದಾದ ಪುಟಾಣಿಗಳು) ನಿಮ್ಮ ಸ್ಮಾರ್ಟ್‌ಫೋನ್‌ ನೋಡಬೇಕೆಂದರೆ, ನಿಜಕ್ಕೂ ಬೇಡ ಎನ್ನಲು ಸಾಧ್ಯವಾಗುತ್ತದೆಯೇ? ಅವರಿಗೆ ನಿಮ್ಮ ಫೋನ್‌ನ ಕ್ಯಾಮೆರಾ ಓಪನ್‌ ಮಾಡಿ ನೋಡಬೇಕು, ಸುಮ್ಮನೇ ಹಾಗೇ ಕಣ್ಣಾಡಿಸಬೇಕೆಂದಷ್ಟೇ ಇದ್ದರೂ, ನಿಮ್ಮ ಖಾಸಗಿ ಕಂಟೆಂಟ್‌ ಯಾವುದೇ ಕ್ಷಣದಲ್ಲಿ ಹೊರ ಕಾಣುವ ಸಾಧ್ಯತೆಗಳಂತೂ ಇದ್ದೇ ಇರುತ್ತದೆ!

ಆಲ್ಟ್‌ ಝಡ್‌ ಲೈಫ್‌ (Alt Z Life) ಜೊತೆಗೆ ಸೇರಿ ಹಾಗೂ ನಿಮ್ಮ ಖಾಸಗಿ ಬದುಕನ್ನು ಖಾಸಗಿಯಾಗಿಯೇ ಉಳಿಸಿಕೊಳ್ಳಿ. ಉದ್ಯಮದಲ್ಲಿಯೇ ಮೊಟ್ಟ ಮೊದಲ ಖಾಸಗಿತನ ಸುರಕ್ಷತೆಗಾಗಿ 'ಕ್ವಿಕ್‌ ಸ್ವಿಚ್‌' ವಿಶೇಷ ಆಯ್ಕೆಯನ್ನು ಹೊರತಂದಿದೆ. ಮತ್ತೊಬ್ಬರಿಗೆ ನಿಮ್ಮ ಸ್ಮಾರ್ಟ್‌ಫೋನ್‌ ನೀಡುವಾಗ ಎದುರಾಗುವ ತಳಮಳವನ್ನು ಇದು ನಿವಾರಿಸುತ್ತದೆ. ಫೋನ್‌ನ ಪವರ್‌ ಬಟನ್‌ ಎರಡು ಸಲ ಒತ್ತಿದರೆ ಅಷ್ಟೇ ಸಾಕು, ಖಾಸಗಿ ಕಂಟೆಂಟ್‌ ಸುರಕ್ಷಿತವಾಗುತ್ತದೆ.

ಸ್ಯಾಮ್‌ಸಂಗ್‌ನ 'ಮೇಕ್‌ ಫಾರ್‌ ಇಂಡಿಯಾ' ಅಭಿಯಾನದ ಅಡಿಯಲ್ಲಿ ಗ್ಯಾಲಕ್ಸಿ ಎ71 ಮತ್ತು ಗ್ಯಾಲಕ್ಸಿ ಎ51 ಫೋನ್‌ಗಳಲ್ಲಿ ಕ್ವಿಕ್ ಸ್ವಿಚ್‌ ಮತ್ತು ಕಂಟೆಂಟ್‌ ಸಜೆಷನ್ಸ್‌ (ಖಾಸಗಿ ಫೋಟೊಗಳನ್ನು ಗುರುತಿ ಮತ್ತು ಸುರಕ್ಷಿತಗೊಳಿಸಲು ಸಹಕಾರಿ) ಎರಡೂ ಗುಣಲಕ್ಷಣಗಳನ್ನು ಹೊರತರಲಾಗಿದೆ.

ಈ ಗುಣಲಕ್ಷಣಗಳ ಬಗ್ಗೆ ಮತ್ತಷ್ಟು ತಿಳಿಯೋಣ;

* ಕ್ವಿಕ್‌ ಸ್ವಿಚ್: ಬಹಳ ಬೇಗ ಖಾಸಗಿ ಕಂಟೆಂಟ್‌ ಸುರಕ್ಷಿತಗೊಳಿಸುವ ಮಾರ್ಗ ಇದಾಗಿದೆ.

ಕೆಲಸದ ನಡುವೆ ಊಟ ಅಥವಾ ಚಹಾ ವಿರಾಮದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಕಾರ್ಯನಿರ್ವಹಿಸುವ ಮೇಜಿನ ಮೇಲೆಯೇ ಬಿಟ್ಟು ಹೋಗುವವರ ಪೈಕಿ ನೀವೂ ಒಬ್ಬರೇ? ಬೇರೆಯವರಿಗೆ ತಮ್ಮ ಫೋನ್‌ಗಳಲ್ಲಿಯೇ ಲೇಖನಗಳನ್ನು ಅಥವಾ ದಾಖಲೆಗಳನ್ನು ಓದಲು ನೀಡುವವರ ಪೈಕಿ ನೀವೂ ಒಬ್ಬರೇ? ಚಿಂತಿಸಬೇಕಿಲ್ಲ. ಕ್ವಿಕ್‌ ಸ್ವಿಚ್‌ ಯಾವುದು ಖಾಸಗಿಯೋ ಅದನ್ನು ಖಾಸಗಿಯಾಗಿಯೇ ಉಳಿಸುತ್ತದೆ.

ಆಲ್ಟ್‌ ಝಡ್‌ ಲೈಫ್‌ ನಡೆಸಲು ಅಗತ್ಯವಿರುವ ಎಲ್ಲವನ್ನೂ ಕ್ವಿಕ್‌ ಸ್ವಿಚ್‌ ಒದಗಿಸುತ್ತದೆ. ಇದು ಅನುಕೂಲಕರ ಹಾಗೂ ತಡೆರಹಿತವೂ ಆಗಿದೆ. ನಿಮ್ಮ ಸ್ಮಾರ್ಟ್‌ಫೋನ್‌ನ್ನು ಬೇರೆಯವರಿಗೆ ಕೊಡಬೇಕಾದ ಸಮಯದಲ್ಲಿ ಫೋನ್‌ ಪಕ್ಕದಲ್ಲಿರುವ ಪವರ್‌ ಕೀ ಅನ್ನು ಎರಡು ಸಲ ಒತ್ತಿದರೆ ಸಾಕು.

ಖಾಸಗಿ ಮತ್ತು ಸಾರ್ವಜನಿಕ ಮೋಡ್‌ಗಳ ನಡುವೆ ಕ್ಷಣಾರ್ಧದಲ್ಲೇ ಬದಲಿಸಿಕೊಳ್ಳಲು 'ಕ್ವಿಕ್‌ ಸ್ವಿಚ್‌' ಬಳಸಿಕೊಳ್ಳಬಹುದು. ಗ್ಯಾಲರಿ ಮಾತ್ರವಲ್ಲದೆ ವಾಟ್ಸ್‌ಆ್ಯಪ್‌ ಹಾಗೂ ವೆಬ್‌ ಬ್ರೌಸರ್‌ನಂತಹ ಆ್ಯಪ್‌ಗಳಲ್ಲಿಯೂ ಬಳಕೆಯ ಮೋಡ್‌ ಬಡಲಿಸಿಕೊಳ್ಳಬಹುದು. ಯಾರೊಬ್ಬರಿಗೂ ನೀವು ಮೋಡ್‌ ಬದಲಿಸುವುದು ತಿಳಿಯುವುದೇ ಇಲ್ಲ.

ಯಾರಾದರೂ ನಿಮ್ಮ ಫೋನ್‌ ಗ್ಯಾಲರಿ ನೋಡಲು ಬಯಸಿದರೆ, ಅವರಿಗೆ ಸಾರ್ವಜನಿಕ ಮೋಡ್‌ನಲ್ಲಿ ಇರುವುದನ್ನಷ್ಟೇ ತೋರಿಸಬಹುದು. 'ಸೆಕ್ಯೂರ್‌ ಫೋಲ್ಡರ್‌'ನಲ್ಲಿ ಸಂಗ್ರಹಿಸಲಾಗಿರುವ ಖಾಸಗಿ ಕಂಟೆಂಟ್‌ನ್ನು ನೀವು ಮಾತ್ರವೇ ತೆರೆದು ನೋಡಲು ಸಾಧ್ಯವಿರುತ್ತದೆ. ಬೇರೆಯವರೊಂದಿಗೆ ಹಂಚಿಕೊಳ್ಳಲು ಇಷ್ಟವಿರದ ಎಲ್ಲ ಫೋಟೊಗಳು ಸೆಕ್ಯೂರ್‌ ಫೋಲ್ಡರ್‌ನಲ್ಲಿ ಸುರಕ್ಷಿತವಾಗಿರುತ್ತದೆ. ಡಿಫೆನ್ಸ್‌ ಗ್ರೇಡ್‌ ಸ್ಯಾಮ್‌ಸಂಗ್‌ ನಾಕ್ಸ್‌ನಿಂದ ಇದು ಅಭಿವೃದ್ಧಿಯಾಗಿದೆ.

* ಕಂಟೆಂಟ್‌ ಸಜೆಷನ್ಸ್‌: ಯಾವುದು ಖಾಸಗಿ ಮತ್ತು ಯಾವುದು ಅಲ್ಲ ಎಂಬುದನ್ನು ತಾನಾಗಿಯೇ ಪತ್ತೆ ಮಾಡುವ ವಿಧಾನ

ಸೆಕ್ಯೂರ್‌ ಫೋಲ್ಡರ್‌ ಒಳಗೆ ಕಾರ್ಯಾಚರಿಸುವ ಕೃತಕ ಬುದ್ಧಿಮತ್ತೆ (ಎಐ) ಗುಣಲಕ್ಷಣವೇ ಕಂಟೆಂಟ್‌ ಸಜೆಷನ್ಸ್‌. ಆನ್‌–ಡಿವೈಸ್‌ ಎಐ ಆಧಾರಿತ ವ್ಯವಸ್ಥೆಯನ್ನು ಕಂಟೆಂಟ್‌ ಸಜೆಷನ್ಸ್‌ ಬಳಸುವ ಮೂಲಕ ಸೆಕ್ಯೂರ್ ಫೋಲ್ಡರ್‌ಗೆ ವರ್ಗಾಯಿಸಬೇಕಾದ ಕೆಲವು ಚಿತ್ರಗಳನ್ನು ಸೂಚಸುತ್ತದೆ (ಈಗಾಗಲೇ ಗುರುತು ಸೂಚಿಸಲಾಗಿರುವ ಆಯ್ಕೆಗಳನ್ನು ಗಮನಿಸಿ).

ಖಾಸಗಿ ಎಂದು ಆಯ್ಕೆ ಮಾಡಲು ನಿರ್ದಿಷ್ಟ ವ್ಯಕ್ತಿಯ ಮುಖ, ಜನರು ಹಾಗೂ ಯಾವ ರೀತಿಯ ಚಿತ್ರಗಳು ಎಂಬುದನ್ನು ಬಳಕೆದಾರರು ಮುಂಚಿತವಾಗಿಯೇ ನಿಗದಿ ಪಡಿಸಿರಬಹುದು. ಅನಂತರ ಕಂಟೆಂಟ್‌ ಸಜೆಷನ್ಸ್‌ ತಾನಾಗಿಯೇ ಖಾಸಗಿ ಗ್ಯಾಲರಿಗೆ ವರ್ಗಾಯಿಸಬೇಕಾದ ಫೋಟೊಗಳನ್ನು ಗುರುತಿಸುತ್ತದೆ ಹಾಗೂ ಅದನ್ನು ಬೇರೆ ಯಾರೂ ಸಹ ನೋಡಲು ಸಾಧ್ಯವಾಗುವುದಿಲ್ಲ.

ಬಳಕೆದಾರರ ಖಾಸಗಿ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ಪ್ರಕ್ರಿಯೆಗಳೂ ಆನ್‌–ಡಿವೈಸ್‌ ಎಐ ಮೂಲಕ ಫೋನ್‌ನ ಒಳಗೆಯೇ ನಡೆಯುತ್ತವೆ. ಇದು ಸರ್ವರ್‌ ಅಥವಾ ಕ್ಲೌಡ್‌ನೊಂದಿಗೆ ಸಂಪರ್ಕ ಹೊಂದಿರುವುದಿಲ್ಲ.

ಈ ಎಲ್ಲ ಸೌಲಭ್ಯಗಳನ್ನು ಮೊಟ್ಟ ಮೊದಲ ಬಾರಿಗೆ ಮಧ್ಯಮ ಶ್ರೇಣಿಯ ಫೋನ್‌ಗಳಲ್ಲಿ ಸ್ಯಾಮ್‌ಸಂಗ್‌ ಪರಿಚಯಿಸಿದೆ ಹಾಗೂ ಯಾರೋ ಒಬ್ಬರಾದರೂ ಗ್ರಾಹಕರ ಖಾಸಗಿತನವನ್ನು ಆದ್ಯತೆಯಾಗಿ ಪರಿಗಣಿಸಿರುವುದು ಸಂತಸದ ವಿಚಾರವಾಗಿದೆ.

ಹೊಸ ತಲೆಮಾರಿನವರು (ಜೆನ್‌ ಝಡ್‌) ಮತ್ತು ಮಿಲೇನಿಯನ್ಸ್‌ ಗಮನದಲ್ಲಿರಿಸಿ ಕ್ವಿಕ್‌ ಸ್ವಿಚ್‌ ಮತ್ತು ಕಂಟೆಂಟ್‌ ಸಜೆಷನ್ಸ್‌ ಗುಣಲಕ್ಷಣಗಳು ಬಳಕೆದಾರರಿಗೆ ಸಂಪೂರ್ಣ ಖಾಸಗಿತನ ನಿಯಂತ್ರಣ ನೀಡುತ್ತವೆ ಹಾಗೂ ಆ ಮೂಲಕ ಮನಸ್ಸು ಶಾಂತವಾಗಿರುವುದನ್ನು ಖಾತ್ರಿ ಪಡಿಸುತ್ತವೆ.

ನಾಕ್ಸ್‌ (Knox) ಸೆಕ್ಯುರಿಟಿ

ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಸಾಧನಗಳು ಸ್ಯಾಮ್‌ಸಂಗ್‌ ನಾಕ್ಸ್‌ ಮೂಲಕ ಸುರಕ್ಷಿತವಾಗಿವೆ. ಹಲವು ಹಂತಗಳ ಡಿಫೆನ್ಸ್‌ ಗ್ರೇಡ್‌ ಸುರಕ್ಷತೆ ವ್ಯವಸ್ಥೆಯು 'ಒನ್‌ ಯುಐ' ಸಾಫ್ಟ್‌ವೇರ್‌ನೊಂದಿಗೆ ಅಳವಡಿಸಲಾಗಿದೆ.  ಒನ್‌ ಯುಐ ಗೂಗಲ್‌ನ ಆ್ಯಂಡ್ರಾಯ್ಡ್‌ ಒಎಸ್‌ ಆಧಾರಿತ ವ್ಯವಸ್ಥೆಯಾಗಿದೆ.

ಈ ಮಿಲಿಟರಿ ಗ್ರೇಡ್‌ ಖಾಸಗಿ ವ್ಯವಸ್ಥೆಯು ನಿಮ್ಮ ಸ್ಮಾರ್ಟ್‌ಫೋನ್‌ನ ಎಲ್ಲ ಮಾಹಿತಿಯನ್ನೂ ಎನ್‌ಕ್ರಿಪ್ಟ್‌ ಮಾಡುತ್ತದೆ ಹಾಗೂ ದತ್ತಾಂಶ ಸುರಕ್ಷಿತವಾಗಿಡುತ್ತದೆ.

ಇನ್ನಾವುದೇ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಸಹ ಬಳಕೆದಾರರ ಖಾಸಗಿತನದ ಬಗ್ಗೆ ಇಷ್ಟು ಕಾಳಜಿ ವಹಿಸಿಲ್ಲ. ಸ್ಯಾಮ್‌ಸಂಗ್‌ ಉದ್ಯಮದಲ್ಲಿಯೇ ಮೊಟ್ಟ ಮೊದಲ ಖಾಸಗಿತನದ ಅನ್ವೇಷಣೆಗಳೊಂದಿಗೆ ಮಹತ್ತರ ಹೆಜ್ಜೆ ಮುಂದಿಟ್ಟಿದೆ.

ಆಲ್ಟ್ ಝಡ್‌ ಲೈಫ್‌ ನಡೆಸಲು ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಫೋನ್‌ಗಳು ಅತ್ಯುತ್ತಮ ಆಯ್ಕೆಗಳಾಗಿವೆ.

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT