ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Budget 2024 | 59 ನಿಮಿಷಗಳ ನಿರ್ಮಲಾ ಭಾಷಣದಲ್ಲಿ 8 ಬಾರಿ ಮೋದಿ ಹೆಸರು ಪ್ರಸ್ತಾಪ

Published 1 ಫೆಬ್ರುವರಿ 2024, 14:22 IST
Last Updated 1 ಫೆಬ್ರುವರಿ 2024, 14:22 IST
ಅಕ್ಷರ ಗಾತ್ರ

ನವದೆಹಲಿ: ಸಚಿವೆ ನಿರ್ಮಲಾ ಹಿಂದೆ ಬಜೆಟ್‌ನಲ್ಲಿ ತಮಿಳು ಕವಿಗಳು, ಚಿಂತಕರನ್ನು ಉಲ್ಲೇಖಿಸಿದ್ದರು. ಈ ಬಾರಿ ಅದರ ಪ್ರಸ್ತಾಪ ಇರಲಿಲ್ಲ. ಆದರೆ, ಭಾಷಣದಲ್ಲಿ ಕನಿಷ್ಠ 8 ಬಾರಿ ಪ್ರಧಾನಿ ಮೋದಿ ಹೆಸರನ್ನು ಉಲ್ಲೇಖಿಸಿದರು. 

ಲೋಕಸಭೆಯ ವೀಕ್ಷಕರ ಗ್ಯಾಲರಿ–2ರಲ್ಲಿ ರಾಜ್ಯಸಭೆಯ ಕೆಲ ಸದಸ್ಯರು ಅಸೀನರಾಗಿದ್ದರು. ಸಭಿಕರ ಹಾಜರಿ ವಿರಳವಾಗಿತ್ತು. ನಿರ್ಮಲಾ ಅವರ ಪುತ್ರಿ ವಂಗಮಾಯಿ ಪರಕಾಲ ಮತ್ತು ಸಂಬಂಧಿಕರಾದ ಕೃಷ್ಣಮೂರ್ತಿ ಲಕ್ಷ್ಮಿನಾರಾಯಣ, ವಿದ್ಯಾ ಲಕ್ಷ್ಮಿನಾರಾಯಣ ಸಭಿಕರ ಗ್ಯಾಲರಿ–3ರಲ್ಲಿ ಮೊದಲ ಸಾಲಿನಲ್ಲಿದ್ದರು.

ಕಾಂತಾ ರೇಷ್ಮೆ ಸೀರೆಯನ್ನು ಧರಿಸಿದ್ದ ಸಚಿವೆ ಇದಕ್ಕೂ ಮೊದಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಆಗಿದ್ದರು. ಒಂದು ಚಮಚೆ ಮೊಸರು, ಸಕ್ಕರೆಯನ್ನು ನೀಡಿದ ರಾಷ್ಟ್ರಪತಿ, ಸಚಿವೆಗೆ ಶುಭಕೋರಿದರು. 

ಎಫ್‌ಡಿಐ, ಜಿಡಿಪಿಗೆ ಹೊಸ ವಿಸ್ತೃತ ರೂಪ

ಬಜೆಟ್‌ ಭಾಷಣದಲ್ಲಿ ಸಚಿವೆ ಎಫ್‌ಡಿಐ ಮತ್ತು ಜಿಡಿಪಿಗೆ ಹೊಸ ವಿಸ್ತೃತ ರೂಪ ನೀಡಿದರು. ಆ ಪ್ರಕಾರ, ಎಫ್‌ಡಿಐ ಎಂದರೆ ‘ಫರ್ಸ್ಟ್ ಡೆವಲಪ್‌ ಇಂಡಿಯಾ’, ಜಿಡಿಪಿ ಎಂದರೆ ‘ಗವರ್ನೆನ್ಸ್‌, ಡೆವಲಪ್‌ಮೆಂಟ್‌, ಫರ್ಫಾರ್ಮೆನ್ಸ್’.

ಬಜೆಟ್‌ ಭಾಷಣ, ಇತರೆ ಕಡತಗಳಿದ್ದ ಟ್ಯಾಬ್ಲೆಟ್‌ ಕಂಪ್ಯೂಟರ್ ಅನ್ನು ರಾಷ್ಟ್ರ ಲಾಂಛನ ಅಳವಡಿಸಿದ್ದ, ಕೆಂಪು ಬಣ್ಣದ ಚೀಲದಲ್ಲಿ ತಂದರು.

59 ನಿಮಿಷದ ಬಜೆಟ್‌ ಬಾಷಣ ಮುಗಿಯುತ್ತಿದ್ದಂತೆ ನಿರ್ಮಲಾ ಸೀತಾರಾಮನ್‌ ಅವರ ಆಸನದ ಬಳಿಗೇ ಹೋಗಿ ಪ್ರಧಾನಿ ಮೋದಿ ಅಭಿನಂದಿಸಿದರು. ಹಿಂದೆಯೇ ಹಲವು ಸಚಿವರೂ ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT