ಮಂಗಳವಾರ, ಫೆಬ್ರವರಿ 25, 2020
19 °C

ಕೇಂದ್ರ ಬಜೆಟ್ 2020 | ಹೊಸ ತೆರಿಗೆ ನಿಯಮ ಕಡ್ಡಾಯವಲ್ಲ: ಆಯ್ಕೆ ನೀಡಿದ ನಿರ್ಮಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸರ್ಕಾರದ 2020–21ನೇ ಸಾಲಿನ ಬಜೆಟ್‌ ಮಂಡನೆ ವೇಳೆ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಕೆಲವು ವಿನಾಯಿತಿ ಘೋಷಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ತೆರಿಗೆದಾದರರು ತಮಗೆ ಅನುಕೂಲವೆನಿಸಿದರೆ ಈ ಹಿಂದಿನ ನಿಯಮದಂತೆಯೇ ತೆರಿಗೆ ಪಾವತಿಸುವ ಅವಕಾಶವನ್ನೂ ನೀಡಿದ್ದಾರೆ.ಸದ್ಯ ನೀಡಲಾಗಿರುವ ತೆರಿಗೆ ವಿನಾಯಿತಿಯಿಂದಾಗಿ ವಾರ್ಷಿಕ ₹40 ಸಾವಿರ ಕೋಟಿ ಹೊರೆಯಾಗಲಿದೆ ಎಂದು ಹೇಳಿರುವ ಸಚಿವೆ, ಹೊಸ ನಿಯಮವು ತೆರಿಗೆದಾರರಿಗೆ ಕಡ್ಡಾಯವಲ್ಲ. ಅದು ಆಯ್ಕೆಯಾಗಿದ್ದು, ತೆರಿಗೆದಾರರು ಬಯಸಿದರೆ ಹಳೆಯ ನಿಯಮವನ್ನೇ ಆಯ್ಕೆ ಮಾಡಿಕೊಳ್ಳಬಹದು ಎಂದಿದ್ದಾರೆ.

ಮುಂದುವರಿದು, 100 ವಿವಿಧ ತೆರಿಗೆಯಲ್ಲಿ ವಿನಾಯಿತಿ ನೀಡಲಾಗಿದೆ. ಅದರಲ್ಲಿ 70 ರೀತಿಯ ವಿನಾಯಿತಿಯನ್ನು ಹೊಸ ವ್ಯವಸ್ಥೆಯಲ್ಲಿ ತೆಗೆದುಹಾಕಲಾಗುವುದು. ಉಳಿದವುಗಳನ್ನೂ ನಿಧಾನವಾಗಿ ಪರಿಶೀಲಿಸಲಾಗುವುದು ಎಂದಿದ್ದಾರೆ. ಆದರೆ, ವಿನಾಯಿತಿ ನೀಡಲಾಗಿರುವ 70 ತೆರಿಗೆಗಳು ಯಾವುವು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. 

ಮುದ್ರಣ ಕಾಗದದ ಮೇಲಿನ ಆಮದು ತೆರಿಗೆ ಇಳಿಕೆ
ಕೇಂದ್ರ ಸರ್ಕಾರವು ಕಳೆದ ಬಜೆಟ್‌ನಲ್ಲಿ, ಮುದ್ರಣ ಕಾಗದ (ನ್ಯೂಸ್‌ ಪ್ರಿಂಟ್‌) ಮತ್ತು ಸುಧಾರಿತ ಕಾಗದದ ಮೇಲಿನ (ಲೈಟ್‌ವೇಟ್‌) ಮೇಲಿನ ತೆರಿಗೆಯನ್ನು ಶೇ.10ಕ್ಕೆ ಹೆಚ್ಚಿಸಿತ್ತು. ‘ಈ ಏರಿಕೆಯಿಂದಾಗಿ ಮುದ್ರಣ ಕ್ಷೇತ್ರಕ್ಕೆ ಹೊಡೆತ ಬೀಳಲಿದೆ. ಅದನ್ನು ಕಡಿತಮಾಡಬೇಕು ಎಂಬ ಸಲಹೆಗಳು ಬಂದಿದ್ದವು. ಹಾಗಾಗಿ ಆಮದು ಸುಂಕವನ್ನು ಶೇ. 10 ರಿಂದ ಶೇ. 5ಕ್ಕೆ ಕಡಿತಗೊಳಿಸಲು ನಿರ್ಧರಿಸಲಾಗಿದೆ’ ಎಂದು ಬಜೆಟ್‌ ಮಂಡನೆ ವೇಳೆ ಸೀತಾರಾಮನ್‌ ತಿಳಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು