ನವದೆಹಲಿ: ಇಂದು ಸತತ 9ನೇ ಬಾರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಾರ್ಷಿಕ ಆಯವ್ಯಯ ಮಂಡಿಸುತ್ತಿದ್ದಾರೆ. ಈ ಬಾರಿ ತಮಿಳುನಾಡಿನ ಕಾಂಚೀವರಂ ಸೀರೆಯುಟ್ಟು ನಿರ್ಮಲಾ ಬಜೆಟ್ ಮಂಡನೆಗೆ ಬಂದಿದ್ದಾರೆ.
.ನಿರ್ಮಲಾರ ‘ಬಜೆಟ್ ಸೀರೆ’ಯ ವೈಶಿಷ್ಟ್ಯ: ಈ ಬಾರಿ ಎಲ್ಲಿಯ ಸೀರೆ ಉಡಲಿದ್ದಾರೆ?.
ಈ ಮೂಲಕ ತಮ್ಮ ತವರು ರಾಜ್ಯವಾದ ತಮಿಳುನಾಡಿನ ಪ್ರಾಚೀನ ಸಾಂಸ್ಕೃತಿಕ ಪರಂಪರೆಗೆ ಗೌರವ ಸೂಚಿಸಿದ್ದಾರೆ.

ಅಲ್ಲದೆ ಈ ವರ್ಷದ ಕೊನೆಯಲ್ಲಿ ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದ್ದು, ದಕ್ಷಿಣ ರಾಜ್ಯದಲ್ಲಿ ಸರ್ಕಾರವನ್ನು ರಚಿಸುವ ಆಶಯವನ್ನು ಬಿಜೆಪಿ ಹೊಂದಿದ್ದು, ಅದಕ್ಕೆ ಪೂರಕವಾಗಿ ನಿರ್ಮಲಾ ಅವರು ತಮಿಳುನಾಡಿನ ಪ್ರಸಿದ್ಧ ಕಾಂಚೀವರಂ ಸೀರೆ ತೊಟ್ಟಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕೈಮಗ್ಗದಲ್ಲಿ ತಯಾರಾದ ಢಾಳ ನೀಲಿ ಮತ್ತು ಬಂಗಾರ ಬಣ್ಣದ ಅಂಚುಗಳಿರುವ ಕೆನ್ನೇರಳೆ ಬಣ್ಣದ ಸೀರೆಯುಟ್ಟು, ಶಾಲು ತೊಟ್ಟು ‘ಡಿಜಿಟಲ್ ಬಹಿ ಖಾತಾ’ ಹಿಡಿದು ಬಂದಿದ್ದಾರೆ. ಹೀಗಾಗಿ ಈ ಬಾರಿಯೂ ಕಾಗದ ರಹಿತ ಬಜೆಟ್ ಮಂಡನೆ ಇರಲಿದೆ.

ಕಳೆದ ವರ್ಷ, ಸೀತಾರಾಮನ್ ಅವರು ಬಿಹಾರದ ಮಧುಬನಿ ಸೀರೆಯನ್ನು ಧರಿಸಿದ್ದರು. ಈ ಸೀರೆಯನ್ನು ಪದ್ಮಶ್ರೀ ಪುರಸ್ಕೃತ ದುಲಾರಿ ದೇವಿ ಅವರಿಗೆ ಉಡುಗೊರೆಯಾಗಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.