ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀಂ ನಿರ್ಮಲಾ | ಬಜೆಟ್ ರೂಪಿಸಲು ಇವರೇ ಆಧಾರ, ಇಲ್ಲಿದೆ ತೆರೆಮರೆ ಶ್ರಮದ ಪರಿಚಯ

Last Updated 28 ಜನವರಿ 2020, 6:17 IST
ಅಕ್ಷರ ಗಾತ್ರ
ADVERTISEMENT
""
""
""
""
""

ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿರುವ ದೇಶಕ್ಕೆ ಈ ಬಾರಿಯ ಬಜೆಟ್ ನವಚೈತನ್ಯದ ಟಾನಿಕ್ ನೀಡಬಲ್ಲದು ಎಂಬ ನಿರೀಕ್ಷೆಯಿದೆ. ಬಿಜೆಪಿ ಸರ್ಕಾರದ ಎರಡನೇ ಅವಧಿಯ ಎರಡನೇ ಬಜೆಟ್‌ ಮಂಡಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊನೆಯ ಕ್ಷಣದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅರ್ಥಶಾಸ್ತ್ರಜ್ಞರು, ಕೈಗಾರಿಕೋದ್ಯಮಿಗಳು, ರೈತ ಸಂಘದ ನಾಯಕರು ಸೇರಿ ಹಲವರೊಂದಿಗೆ ಈಗಾಗಲೇಪ್ರಧಾನಿ ನರೇಂದ್ರ ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಸಾಲುಸಾಲು ಸಭೆಗಳನ್ನು ನಡೆಸಿದ್ದಾರೆ.

ಫೆಬ್ರುವರಿ 1ರಂದು ಮಂಡನೆಯಾಗುವ ಬಜೆಟ್‌ ಕುಸಿಯುತ್ತಿರುವ ಆರ್ಥಿಕತೆಯನ್ನುಮೇಲೆತ್ತುವ ಮ್ಯಾಜಿಕ್ ಮಾಡಲಿ ಎನ್ನುವ ದೊಡ್ಡ ಆಶಯವನ್ನು ಸಮಾಜ ಇಟ್ಟುಕೊಂಡಿದೆ.ಹತ್ತಾರು ವಲಯಗಳಿಂದ ವ್ಯಕ್ತವಾದ ನೂರಾರು ಸಲಹೆಗಳು ಮತ್ತು ಆಶಯಗಳನ್ನು ಸರ್ಕಾರದ ಚಿಂತನೆಯ ಭಾಗವಾಗಿಸಲು ಶ್ರಮಿಸುತ್ತಿರುವಐವರು ಹಿರಿಯ ಸರ್ಕಾರಿ ಅಧಿಕಾರಿಗಳ ಪರಿಚಯ ಇಲ್ಲಿದೆ.

ರಾಜೀವ್‌ ಕುಮಾರ್

ರಾಜೀವ್ ಕುಮಾರ್, ಹಣಕಾಸು ಇಲಾಖೆ ಕಾರ್ಯದರ್ಶಿ

ಹಣಕಾಸು ಸಚಿವಾಲಯದ ಆಡಳಿತ ವಿಭಾಗದ ಮುಖ್ಯಾಧಿಕಾರಿ ರಾಜೀವ್‌ ಕುಮಾರ್.ಜಾರ್ಖಂಡ್ ಕೇಡರ್‌ನ 1984ನೇ ಬ್ಯಾಚ್‌ ಐಎಎಸ್ ಅಧಿಕಾರಿಯಾಗಿರುವ ರಾಜೀವ್‌ ಕುಮಾರ್ ಅಡಿಯಲ್ಲಿ ವಿತ್ತ ಸಚಿವಾಲಯದ ಆರ್ಥಿಕ ವ್ಯವಹಾರಗಳು, ಆದಾಯ, ವ್ಯಯ, ಹಣಕಾಸ ಸೇವೆಗಳು,ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತುಗಳ ನಿರ್ವಹಣೆ ವಿಭಾಗಗಳು ಕಾರ್ಯನಿರ್ವಹಿಸುತ್ತವೆ.

ಬ್ಯಾಂಕಿಂಗ್ ಸುಧಾರಣೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದವರು. ಸರ್ಕಾರಿ ಬ್ಯಾಂಕ್‌ಗಳ ವಿಲೀನ ಮತ್ತುವಸೂಲಾಗದ ಸಾಲಗಳಿಂದ ಜರ್ಝರಿತವಾಗಿದ್ದ ಬ್ಯಾಂಕ್‌ಗಳಿಗೆಮರುಬಂಡವಾಳ ಸಂಚಯದ ಮೂಲಕ ಹೊಸಜೀವ ಕೊಟ್ಟವರು. ಉಸಿರುಗಟ್ಟುವ ಸ್ಥಿತಿಯಲ್ಲಿರುವ ಬ್ಯಾಂಕಿಂಗ್ ವಲಯದಪುನಶ್ಚೇತನಕ್ಕೆಬಜೆಟ್‌ನಲ್ಲಿ ರಾಜೀವ್‌ ಕುಮಾರ್ ಏನಾದರೂ ಮಾಡುತ್ತಾರೆ ಎಂಬ ನಿರೀಕ್ಷೆವ್ಯಕ್ತವಾಗಿದೆ. ಸಾಲ ನೀಡುವ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಮೂಲಕ ದೇಶೀ ಆರ್ಥಿಕತೆಯ ಪುನಶ್ಚೇತನದಹಾದಿ ಹುಡುಕುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅತನು ಚಕ್ರವರ್ತಿ

ಅತನು ಚಕ್ರವರ್ತಿ, ಆರ್ಥಿಕ ವಿದ್ಯಮಾನಗಳ ವಿಭಾಗದ ಕಾರ್ಯದರ್ಶಿ

ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಿ, ಬಂಡವಾಳ ಸಂಚಯಿಸುವ ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಅತನು ಚಕ್ರವರ್ತಿ ಈಗ ಆರ್ಥಿಕ ವಿದ್ಯಮಾನಗಳ ವಿಭಾಗದಮುಖ್ಯಸ್ಥರುಗುಜರಾತ್ ಕೇಡರ್‌ನ 1985ನೇ ಬ್ಯಾಚ್ ಐಎಎಸ್ ಅಧಿಕಾರಿ ಅತನು ಚಕ್ರವರ್ತಿ.ವಿದೇಶಗಳಲ್ಲಿ ಭಾರತೀಯ ಬಾಂಡ್‌ಗಳನ್ನು ಮಾರಾಟ ಮಾಡುವ ಯೋಜನೆಯನ್ನು ಮುಂದೂಡುವ ನಿರ್ಧಾರದ ಹಿಂದೆ ಅತನು ಸಲಹೆ ಇತ್ತು. ಆರ್ಥಿಕತೆಯ ನಿಗಾವಣೆಯ ಜವಾಬ್ದಾರಿಯನ್ನು ಇವರು ವಹಿಸಿಕೊಂಡ ನಂತರವೇ ಆರ್ಥಿಕ ಪ್ರಗತಿ ಶೇ 5ರಷ್ಟು ಕುಸಿದಿದ್ದು ಎಂಬುದು ಮತ್ತೊಂದು ಪ್ರಮುಖ ಅಂಶ.ಇದೀಗ ಅತನು ನೇತೃತ್ವದ ತಂಡವು ಆರ್ಥ ವ್ಯವಸ್ಥೆಯ ಪುನಶ್ಚೇತನಕ್ಕಾಗಿ ಮೂಲಸೌಕರ್ಯ ಯೋಜನೆಗಳಲ್ಲಿ1 ಲಕ್ಷ ಕೋಟಿ ಡಾಲರ್ ಮೊತ್ತದ ಹೂಡಿಕೆಯ ಯೋಜನೆ ರೂಪಿಸಿದೆ. ಕೇಂದ್ರ ಸರ್ಕಾರದ ಆದಾಯ ಮತ್ತು ವ್ಯಯದ ನಡುವಣ ಅಂತರ (ವಿತ್ತೀಯ ಕೊರತೆ) ಸರಿದೂಗಿಸುವ ವಿಚಾರ ಮತ್ತುಆರ್ಥಿಕ ಪುನಶ್ಚೇತನದ ವಿಷಯಗಳಲ್ಲಿ ಅತನು ಅವರ ಸಲಹೆಗಳು ನಿರ್ಣಾಯಕ ಪಾತ್ರ ನಿರ್ವಹಿಸುತ್ತವೆ.

ಟಿ.ವಿ.ಸೋಮನಾಥನ್

ಟಿ.ವಿ.ಸೋಮನಾಥನ್, ವ್ಯಯ ವಿಭಾಗದ ಕಾರ್ಯದರ್ಶಿ

ಹಣಕಾಸು ಇಲಾಖೆಗೆ ಹೊಸ ಸೇರ್ಪಡೆಯಾಗಿರುವ ಟಿ.ವಿ.ಸೋಮನಾಥನ್ 1987ನೇ ಬ್ಯಾಚ್‌ನ ತಮಿಳುನಾಡು ಕೇಡರ್‌ ಐಎಎಸ್‌ ಅಧಿಕಾರಿ. ಸೋಮನಾಥನ್ಅವರ ಎದುರುಸರ್ಕಾರದ ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವ ಗುರಿಯಿದೆ.ಚಿಲ್ಲರೆ ಬೇಡಿಕೆ ಹೆಚ್ಚಾಗಲು ಸರ್ಕಾರದ ಖರ್ಚು ಹೇಗಿರಬೇಕು ಎಂದು ನಿರ್ಧರಿಸುವ ಮಹತ್ವ ಹೊಣೆಗಾರಿಕೆಯಿದೆ.ಪ್ರಧಾನಿ ಕಚೇರಿಯಲ್ಲಿ ಈ ಮೊದಲು ಕೆಲಸ ಮಾಡಿದ್ದ ಸೋಮನಾಥನ್ ಅವರಿಗೆ ಮೋದಿ ಎಂಥ ಬಜೆಟ್ ನಿರೀಕ್ಷಿಸುತ್ತಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟ ಕಲ್ಪನೆ ಇದೆ.

ಅಜಯ್ ಭೂಷಣ್ ಪಾಂಡೆ

ಅಜಯ್ ಭೂಷಣ್ ಪಾಂಡೆ, ಕಂದಾಯ ಕಾರ್ಯದರ್ಶಿ

ಭಾರತ ಸರ್ಕಾರದಲ್ಲಿ ಅತ್ಯಂತ ಹೆಚ್ಚು ಒತ್ತಡ ಅನುಭವಿಸುತ್ತಿರುವ ಅಧಿಕಾರಿ ಅಜಯ್ ಭೂಷಣ್ ಪಾಂಡೆ. 1984ನೇ ಬ್ಯಾಚ್ ಮಹಾರಾಷ್ಟ್ರ ಕೇಡರ್‌ನ ಈ ಅಧಿಕಾರಿಯ ಮೇಲೆ ಕಂದಾಯ ವಸೂಲಿಯ ಜವಾಬ್ದಾರಿಯಿದೆ. ದೇಶದಲ್ಲಿ ಈ ಬಾರಿಆರ್ಥಿಕ ಹಿಂಜರಿತದಿಂದಾಗಿ ಕಂದಾಯ ವಸೂಲಿ ಪ್ರಮಾಣ ನಿರೀಕ್ಷೆಗಿಂತ ಕಡಿಮೆಯಾಗಿದೆ. 20 ಶತಕೋಟಿ ಡಾಲರ್‌ನಷ್ಟು ಕಾರ್ಪೊರೇಟ್ ತೆರಿಗೆಗಳನ್ನು ಕಳೆದ ವರ್ಷ ಕಡಿತಗೊಳಿಸಲಾಗಿತ್ತು. ಈ ಕ್ರಮದಿಂದ ಉದ್ಯಮ ಚಟುವಟಿಕೆಗಳು ಚುರುಕಾಗಿಸರ್ಕಾರದ ಆದಾಯ ಹೆಚ್ಚಾಗಲು ಇನ್ನೂ ಸಮಯಬೇಕಿದೆ. ನೇರ ತೆರಿಗೆಯ (ಡೈರೆಕ್ಟ್ ಟ್ಯಾಕ್ಸ್‌ ಕೋಡ್) ವ್ಯಾಪ್ತಿಯಿಂದ ಕೈಬಿಟ್ಟಿರುವ ಕೆಲ ವ್ಯವಹಾರಗಳ ಮೇಲೆ ಮತ್ತೆ ತೆರಿಗೆ ವಿಧಿಸುವಂತೆ ಮಾಡುವ ಪ್ರಸ್ತಾವವನ್ನುಅಜಯ್ ಭೂಷಣ್ ಕೊಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಟ್ಯೂಹಿನ್ ಕಂಟಾ ಪಾಂಡೆ

ಟ್ಯೂಹಿನ್ ಕಂಟಾ ಪಾಂಡೆ, ಹೂಡಿಕೆ ಹಿಂತೆಗೆತ ಮತ್ತು ಸ್ವತ್ತು ನಿರ್ವಹಣಾ ವಿಭಾಗದ ಕಾರ್ಯದರ್ಶಿ

ಪ್ರಮುಖ ಸಾರ್ವಜನಿಕ ವಲಯದ ಕಂಪನಿಗಳಲ್ಲಿ ತನ್ನ ಪಾಲು ಮಾರಾಟ ಮಾಡುವ ಮೂಲಕ ಬಂಡವಾಳ ಸಂಗ್ರಹಿಸುವುದು ಸರ್ಕಾರದ ಆದಾಯದ ಪ್ರಮುಖ ಮೂಲ. ಈ ಜವಾಬ್ದಾರಿ ಹೊತ್ತವರು 1987ನೇ ಬ್ಯಾಚ್‌ ಒಡಿಶಾ ಕೇಡರ್‌ನ ಐಎಎಸ್ ಅಧಿಕಾರಿಟ್ಯೂಹಿನ್ ಕಂಟಾ ಪಾಂಡೆ.ಬಂಡವಾಳ ಹಿಂಪಡೆತದಿಂದ ₹ 1.05 ಲಕ್ಷ ಕೋಟಿ ರೂಪಾಯಿಸಂಗ್ರಹದ ನಿರೀಕ್ಷೆಯನ್ನು ಈ ಬಾರಿ ಸರ್ಕಾರ ಇಟ್ಟುಕೊಂಡಿತ್ತು. ಆದರೆ ಆರ್ಥಿಕ ಹಿಂಜರಿತ ಮತ್ತು ಖರೀದಿದಾರರ ನಿರಾಸಕ್ತಿಯಿಂದಈ ಗುರಿ ಖಂಡಿತ ಈಡೇರಿರಲಾರದು. ಆದರೆ ಮುಂದಿನ ವರ್ಷಆದರೆ ಮುಂದಿನ ವರ್ಷದ ಬಂಡವಾಳ ಹಿಂತೆಗೆತದ ರೂಪುರೇಷೆಗಳ ನಿರ್ಧಾರ ಮತ್ತು ಏರ್‌ ಇಂಡಿಯಾ ಸೇರಿದಂತೆ ಹಲವು ಸರ್ಕಾರಿ ಸ್ವಾಮ್ಯದ ಕಂಪನಿಗಳ ಮಾರಾಟದ ವಿಚಾರದಲ್ಲಿ ಟ್ಯೂಹಿನ್ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT