21ನೇ ಶತಮಾನದಲ್ಲಿ ಯುದ್ಧದ ಪರಿಭಾಷೆ ಬದಲಾಗಿರುವಂತೆ ಕೃಷಿಯ ಪರಿಭಾಷೆಯೂ ಬದಲಾಗಿದೆ. ಯಾಂತ್ರೀಕರಣದ ಜತೆ ಡಿಜಿಟಲೀಕರಣ, ಡ್ರೋನ್ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ) ಅನ್ವಯಗೊಳಿಸುವಿಕೆ ಈಗ ಅಗ್ರಸ್ಥಾನ ಪಡೆಯುತ್ತಿದೆ.

ಇಳುವರಿ, ರೋಗ ನಿಯಂತ್ರಣ, ಸೂಕ್ಷ್ಮ ಪೋಷಕಾಂಶ ಒದಗಿಸುವಿಕೆ, ಉತ್ಪಾದಕತೆ ಮತ್ತು ಲಾಭದ ದೃಷ್ಟಿಯಿಂದಲೂ ಡಿಜಿಟಲೀಕರಣ ಮತ್ತು ಎಐ ಬಳಕೆ ಅತ್ಯುಪಯುಕ್ತ. ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಈಗ ಕರ್ನಾಟಕ ಸರ್ಕಾರ ಮೈಚಳಿ ಬಿಟ್ಟು ದಿಟ್ಟ ಹೆಜ್ಜೆ ಇಟ್ಟಿದೆ. ಈ ಕ್ರಮಗಳಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚು ಪ್ರಯೋಜನ ಆಗುವುದರಲ್ಲಿ ಸಂದೇಹವಿಲ್ಲ.

ಇದಕ್ಕೆ ಪೂರಕವಾಗಿ ರಾಜ್ಯ ಹತ್ತು ಹವಾಮಾನ ವಲಯಗಳಲ್ಲಿ ಸಮಗ್ರ ಕೃಷಿ ಪದ್ಧತಿಯ ಮಾದರಿ ಪ್ರಾತ್ಯಕ್ಷಿಕೆ ತಾಕುಗಳನ್ನು ಅಭಿವೃದ್ಧಿಪಡಿಸಿ, ಆ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಪ್ರೋತ್ಸಾಹ ನೀಡಲಾಗುವುದು. ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರವಾಗಿಸಲು ಮತ್ತು ರೈತರ ಜೀವನೋಪಾಯ ಸುಧಾರಿಸಲು ‘ಸಮಗ್ರ ಮಳೆಯಾಶ್ರಿತ ಕೃಷಿ ನೀತಿ’ಯೊಂದನ್ನು ಅನುಷ್ಠಾನಗೊಳಿಸುವುದಾಗಿ ಬಜೆಟ್ನಲ್ಲಿ ಪ್ರಕಟಿಸಲಾಗಿದೆ. ಅದರ ವಿವರಗಳು ಏನೆಂಬುದು ಮುಂಬರುವ ದಿನಗಳಲ್ಲಿ ಗೊತ್ತಾಗಬಹುದು. ಲಾಗಾಯ್ತಿನಿಂದಲೂ ನೀರಾವರಿ ಪ್ರದೇಶಗಳಿಗೇ ಹೆಚ್ಚಿನ ಒತ್ತು ಸಿಕ್ಕಿತ್ತು. ಆದರೆ, ಹಲವು ದಶಕಗಳಿಂದ ಮಳೆಯಾಶ್ರಿತ ಕೃಷಿ ಪ್ರದೇಶದ ನಿರ್ಲಕ್ಷ್ಯ ಕಾರಣ, ಈ ಪ್ರದೇಶಗಳಲ್ಲಿ ಉತ್ಪಾದಕತೆ ಕಡಿಮೆಯಾಗುತ್ತಾ ಬಂದಿದ್ದು, ಹಲವು ಕಡೆಗಳಲ್ಲಿ ಕೃಷಿಯನ್ನು ಸಂಪೂರ್ಣ ಕೈಬಿಡಲಾಗಿದೆ. ಹೀಗಾಗಿ ಸಾಕಷ್ಟು ಜಮೀನು ಬೀಳು ಬಿದ್ದಿದೆ. ಹೊಸ ನೀತಿ ಕಾಯಕಲ್ಪ ತುಂಬುವುದೇ ಕಾದು ನೋಡಬೇಕು.

ಮಳೆಯಾಶ್ರಿತ ಪ್ರದೇಶದಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು 1.81 ಲಕ್ಷ ರೈತರಿಗೆ ಹನಿ ಮತ್ತು ತುಂತುರು ನೀರಾವರಿ ಘಟಕಗಳಿಗೆ ಅಳವಡಿಕೆಗೆ ₹ 440 ಕೋಟಿ ಸಹಾಯಧನ ಒದಗಿಸಿದೆ. ತೊಗರಿ ಬೆಳೆಯ ಉತ್ಪಾದನೆಯಲ್ಲಿ ರಾಷ್ಟ್ರಮಟ್ಟದಲ್ಲೇ ಮುಂಚೂಣಿ ರಾಜ್ಯವನ್ನಾಗಿಸುವ ಗುರಿ ಹೊಂದಲಾಗಿದೆ. ಅಲ್ಲದೇ, ಇತ್ತೀಚಿನ ವರ್ಷಗಳಲ್ಲಿ ನೈಸರ್ಗಿಕ ವೈಪರೀತ್ಯಗಳ ಬದಲಾವಣೆಯಿಂದ ಹವಾಮಾನ ವಲಯವನ್ನು ಮರುವ್ಯಾಖ್ಯಾನಗೊಳಿಸುವ ಉದ್ದೇಶಕ್ಕಾಗಿ ತಜ್ಞರ ಸಮಿತಿ ರಚಿಸುವ ಪ್ರಸ್ತಾಪ ಆಯವ್ಯಯದಲ್ಲಿದೆ.

37 ಲಕ್ಷ ರೈತರಿಗೆ ರಿಯಾಯಿತಿ ಬಡ್ಡಿದರಲ್ಲಿ ₹28,000 ಕೋಟಿ ಸಾಲ ನೀಡಲು ತೀರ್ಮಾನಿಸಲಾಗಿದೆ. ಕಳೆದ ವರ್ಷ 21.78 ಲಕ್ಷ ರೈತರಿಗೆ ₹18,960 ಕೋಟಿ ಸಾಲ ನೀಡಲಾಗಿತ್ತು. ಪುನರ್ಧನದ ಮಿತಿಯನ್ನು ನಬಾರ್ಡ್ ಶೇ 58ರಷ್ಟು ತಗ್ಗಿಸಿದ್ದರೂ ಈ ಬಾರಿ ಸಾಲ ನೀಡಿಕೆ ಗುರಿ ಹೆಚ್ಚಿಸಲಾಗಿದೆ. ಅಲ್ಲದೇ, ಆಕಸ್ಮಿಕಗಳಿಂದ ರೈತರ ಹಸು, ಎತ್ತು, ಎಮ್ಮೆ, ಕುರಿ, ಕೋಳಿಗಳು ಸತ್ತು ಹೋದರೆ ನೀಡಲಾಗುವ ಪರಿಹಾರ ಮೊತ್ತವನ್ನೂ ಹೆಚ್ಚಿಸಲಾಗಿದೆ.

ನೀರಾವರಿ ಕ್ಷೇತ್ರದಲ್ಲಿ ಹೊಸ ಯೋಜನೆಗಳನ್ನು ಘೋಷಿಸಿಲ್ಲವಾದರೂ, ಚಾಲ್ತಿಯಲ್ಲಿರುವ ಕೃಷ್ಣಾ ಕಣಿವೆ, ಕಾವೇರಿ ಕಣಿವೆ ಮತ್ತುಇತರ ನದಿಗಳ ಕಣಿವೆಗಳ ಸಾಕಷ್ಟು ಯೋಜನೆಗಳಿಗೆ ಅನುದಾನವನ್ನು ಕಲ್ಪಿಸಲಾಗಿದೆ. ಹೀಗಾಗಿ ಬೃಹತ್ ಮತ್ತು ಸಣ್ಣ ನೀರಾವರಿ ಯೋಜನೆಗಳಡಿ 48 ಪ್ರಮುಖ ನೀರಾವರಿ ಕಾಮಗಾರಿಗಳು ಮುಂದುವರೆಯಲಿವೆ.

ಸೌರಶಕ್ತಿ ಬಳಸಿ ಗ್ರಾಮ ಪಂಚಾಯಿತಿಗಳ ವಿದ್ಯುತ್ ಬಿಲ್ಲಿನ ಹೊರೆಯನ್ನು ತಗ್ಗಿಸಲು ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ ಸೋಲಾರ್ ಮೈಕ್ರೊ ಗ್ರಿಡ್ ಸ್ಥಾಪನೆ, ಎಲ್ಲ ಅಗತ್ಯ ದಾಖಲೆಗಳನ್ನು ಹೊಂದಿರುವ ಆಸ್ತಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲು ಇ–ಸ್ವತ್ತು ಅಭಿಯಾನ, ನೀರು ಸರಬರಾಜು ಮೂಲಭೂತ ಸೌಕರ್ಯಗಳ ಸುಸ್ಥಿರ ಮತ್ತು ವೈಜ್ಞಾನಿಕ ನಿರ್ವಹಣೆ ಸಲುವಾಗಿ ಭೌಗೋಳಿಕ ಮಾಹಿತಿ ವ್ಯವಸ್ಥೆ ಆಧಾರಿತ ಮೊಬೈಲ್ ಮತ್ತು ವೆಬ್ ತಂತ್ರಾಂಶದ ಅಭಿವೃದ್ಧಿ ಮತ್ತಿತರ ಪ್ರಸ್ತಾಪ ಗಮನ ಸೆಳೆಯುತ್ತವೆ.

ಅಲ್ಲದೇ ರೈತ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಕೃಷಿ ಪಥ ಯೋಜನೆ, ಕೃಷಿ ಜಮೀನುಗಳಲ್ಲಿ ಅಂತರ್ಜಲ ಹೆಚ್ಚಳ ಮತ್ತು ಮಣ್ಣಿನ ಸಂರಕ್ಷಣೆ ಹೆಚ್ಚಿಸುವ ಉದ್ದೇಶದಿಂದ ಕೃಷಿ ಕವಚ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 5000 ಹೆಕ್ಟೇರ್ಗಳಲ್ಲಿ ಬದು ನಿರ್ಮಾಣ ಮಾಡುವ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಈ ಎಲ್ಲವೂ ಪ್ರಾಮಾಣಿಕವಾಗಿ ಜಾರಿ ಆದಲ್ಲಿ ಗ್ರಾಮೀಣ ಜನರ ಬದುಕೂ ಹಸಿರಾಗಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.