ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಮಂಡಿಸಿದ 16ನೇ ಬಜೆಟ್ನಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಅಭಿವೃದ್ಧಿಗೆ ಕೆಲ ಘೋಷಣೆಗಳನ್ನು ಮಾಡಿದ್ದಾರೆ.

ಹೊಸ ಐ.ಟಿ ನೀತಿ ಜಾರಿಗೆ ಕ್ರಮ. ಕ್ಲೌಡ್ ಕಂಪ್ಯೂಟಿಂಗ್ ಅಭಿವೃದ್ಧಿಗೆ ಒತ್ತು. 2 ಮತ್ತು 3ನೇ ಹಂತದ ನಗರಗಳಿಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರ ವಿಸ್ತರಣೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.

* ಬೆಂಗಳೂರು ಹೊರತು ಪಡಿಸಿ, ಇತರ ನಗರಗಳಗಲ್ಲೂ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು, 1 ಸಾವಿರ ಕೋಟಿ ರೂಪಾಯಿ ವೆಚ್ಚದ ಸ್ಥಳೀಯ ಆರ್ಥಿಕ ಆಕ್ಸಿಲರೇಟರ್ ಕಾರ್ಯಕ್ರಮ -LEAP ಪ್ರಾರಂಭ ವಾಗವುದು. ಈ ವರ್ಷ ₹200 ಕೋಟಿ ಅನುದಾನ ನೀಡಲಾಗುತ್ತಿದ್ದು, 5 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ.

* ₹50 ಕೋಟಿ ಹೂಡಿಕೆಯೊಂದಿಗೆ Centre for Applied AI for Tech Solutions(CATS) ಸ್ಥಾಪನೆ ಈ ವರ್ಷ ₹7.5 ಕೋಟಿ ಅನುದಾನ.

* ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ₹48 ಕೋಟಿ ವೆಚ್ಚದಲ್ಲಿ ಕ್ವಾಂಟಮ್ ರಿಸರ್ಚ್ ಪಾರ್ಕ್-ಹಂತ-2 ಸ್ಥಾಪನೆ.

* ಕರ್ನಾಟಕ ಜೈವಿಕ ತಂತ್ರಜ್ಞಾನ ನೀತಿ 2024-2029,ಎಂಎಸ್ಎಂಇ ಮತ್ತು ದೊಡ್ಡ ಉದ್ಯಮ ವಿಭಾಗದಲ್ಲಿ ₹1,500 ಕೋಟಿ ಹೂಡಿಕೆಯನ್ನು ಆಕರ್ಷಿಸುವ ಗುರಿ. ಪ್ರೋತ್ಸಾಹಕಗಳಿಗಾಗಿ ₹220 ಕೋಟಿ ಅನುದಾನ..

* ಕಲಬುರಗಿಯಲ್ಲಿ Plug and Play ಮಾದರಿಯಲ್ಲಿ Flat Floor Factory ಸ್ಥಾಪನೆ.

* ಬೆಂಕಿ ಅನಾಹುತದಲ್ಲಿ ತೀವ್ರ ಹಾನಿ ಸಂಭವಿಸಿದ ಬೆಂಗಳೂರು ಬಯೊ-ಇನ್ನೋವೇಷನ್ ಸೆಂಟರ್ನ ಪುನರ್ ನಿರ್ಮಾಣಕ್ಕೆ ಒಟ್ಟು ₹57 ಕೋಟಿ ನೆರವು, ಈ ವರ್ಷ ₹20 ಕೋಟಿ ಅನುದಾನ

* ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಧಾರವಾಡದಲ್ಲಿ ಕಿಯೊನಿಕ್ಸ್ ಮೂಲಕ ಗ್ಲೋಬಲ್ ಇನ್ನೋವೇಶನ್ ಡಿಸ್ಟ್ರಿಕ್ಟ್ ಅಭಿವೃದ್ಧಿಗೆ ಕ್ರಮ.

* ಕೋಲಾರ, ರಾಮನಗರ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹೊಸ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳ ಸ್ಥಾಪನೆಗೆ ₹ 9 ಕೋಟಿ ಅನುದಾನ.

* ಮೈಸೂರಿನ 150 ಎಕರೆ ಪ್ರದೇಶದಲ್ಲಿ ಪಿಸಿಬಿ ಪಾರ್ಕ್ ಅಭಿವೃದ್ಧಿ.

* ಭಾರತ ಸರ್ಕಾರ ಮತ್ತು ಕೈಗಾರಿಕೆಗಳ ಸಹಭಾಗಿತ್ವದಲ್ಲಿ ₹99 ಕೋಟಿ ವೆಚ್ಚದಲ್ಲಿ ಸೆನ್ಸರ್ಟೆಕ್ ಇನ್ನೋವೇಶನ್ ಹಬ್ ಸ್ಥಾಪನೆ.

* ಕಿಯೋನಿಕ್ಸ್ ವತಿಯಿಂದ ಮಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಪ್ಲಗ್-ಅಂಡ್-ಪ್ಲೇ ಸೌಲಭ್ಯಗಳಾಗಿ ಮೂರು ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರ(GTC)ಗಳ ಸ್ಥಾಪನೆ.

* ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಏಕೀಕರಣಕ್ಕಾಗಿ ಕಲಬುರ್ಗಿಯಲ್ಲಿ ಅಗ್ರಿ-ಟೆಕ್ ವೇಗವರ್ಧಕ ಸ್ಥಾಪನೆ.
.Karnataka Budget: ಬೆಂಗಳೂರು ಮೂಲಸೌಕರ್ಯ ಅನುದಾನ ₹7,000 ಕೋಟಿಗೆ ಹೆಚ್ಚಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.