ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಐಗೆ 'ಮಾಹಿತಿ ಕಣಜ' ತಂತ್ರಾಂಶ, ಶಿಕ್ಷಕರಿಗಾಗಿ 'ಶಿಕ್ಷಕ ಮಿತ್ರ' ಆ್ಯಪ್‌

Last Updated 5 ಮಾರ್ಚ್ 2020, 10:38 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರವು ಇಲಾಖೆಗಳಲ್ಲಿ ಹಾಗೂ ಸಾರ್ವಜನಿಕ ವಲಯಗಳಲ್ಲಿ ತಂತ್ರಜ್ಞಾನದ ನೆರವು ಹೆಚ್ಚಿಸಲು ಹಾಗೂ ಅಪ್ಲಿಕೇಷನ್‌ ಅಥವಾ ತಂತ್ರಾಂಶಗಳ ಮುಖೇನ ಆಡಳಿತ ಕಾರ್ಯಗಳ ವೇಗ ಹೆಚ್ಚಿಸಲು ಕ್ರಮ ವಹಿಸಿದೆ. ಗುರುವಾರ ಮಂಡನೆಯಾದ 2020–21ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಹಲವು ತಂತ್ರಾಂಶಗಳ ಅಭಿವೃದ್ಧಿ ಮತ್ತು ತಂತ್ರಜ್ಞಾನ ಅಳವಡಿಕೆ ಘೋಷಣೆಯಾಗಿವೆ.

* ಜಾಲತಾಣದ ಮೂಲಕ ಮಾಹಿತಿ ಹಕ್ಕು ಕಾಯ್ಡೆಯಡಿ ಅರ್ಜಿ ಸಲ್ಲಿಸಲು ಮತ್ತು ಮಾಹಿತಿ ಪಡೆಯಲು 'ಮಾಹಿತಿ ಕಣಜ' ತಂತ್ರಾಂಶ ಅಭಿವೃದ್ಧಿ

* ಶಿಕ್ಷಕರ ಸೇವಾ ಸೌಲಭ್ಯಗಳನ್ನು ಅಂತರ್ಜಾಲ ಮೂಲಕ ಒದಗಿಸಲು 'ಶಿಕ್ಷಕ ಮಿತ್ರ' ಮೊಬೈಲ್‌ ಆ್ಯಪ್‌ ಅಭಿವೃದ್ಧಿ

* ಕಾವೇರಿ ಮತ್ತು ಇ–ಆಸ್ತಿ ತಂತ್ರಾಂಶಗಳ ಸಂಯೋಜನೆ ಜಾರಿ

* ಕಾವೇರಿ–2 ತಂತ್ರಾಂಶ ಅನುಷ್ಠಾನ

* ಬೆಂಗಳೂರು ಮಹಿಳೆಯರ ಸುರಕ್ಷತೆಗಾಗಿ ಅಭಿವೃದ್ಧಿ ಪಡಿಸಿರುವ 'ಸುರಕ್ಷಾ ಆ್ಯಪ್' ರಾಜ್ಯದಾದ್ಯಂತ ವಿಸ್ತರಣೆ

* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳನ್ನು ಪಾರದರ್ಶಕವಾಗಿ ಮಹಿಳೆಯರಿಗೆ ತಲುಪಿಸಲು ಮಹಿಳಾ ಸುರಕ್ಷತಾ ಪೋರ್ಟಲ್‌ ಆರಂಭ

* ನಗರಗಳ ಬೀದಿ ವ್ಯಾಪಾರಗಳಿಗೆ ಇ–ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ತಂತ್ರಾಂಶ ಅಭಿವೃದ್ಧಿ. ದೀನ್‌ ದಯಾಳ್‌ ಅಂತ್ಯೋದಯ ಯೋಜನೆ–ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ

* 'ಆಹಾರ' ತಂತ್ರಾಂಶ ಉನ್ನತೀಕರಿಸಲು ಕ್ರಮ

* ಕಾನೂನು ಮಾಪನ ಶಾಸ್ತ್ರ ಇಲಾಖೆಯ ಚಟುವಟಿಕೆಗಳ ಮೇಲ್ವಿಚಾರಣೆ ಮತ್ತು ಉಸ್ತುವಾರಿ ಬಿಗಿಗೊಳಿಸಲು 'ಇಮಾಪನ' ತಂತ್ರಾಂಶ ಉನ್ನತೀಕರಣ

* ಇಂಟರ್‍ಯಾಕ್ಟೀವ್‌ ಆನ್‌–ಲೈನ್‌ ಕೋರ್ಸ್‌ಗಳ (M.O.O.C) ಪ್ರಾರಂಭ ಮತ್ತು ಗುಣಾತ್ಮಕ ಇ–ಕಂಟೆಂಟ್‌ ಅಭಿವೃದ್ಧಿಗೆ ₹1 ಕೋಟಿ

* ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಆಡಳಿತ ವ್ಯವಸ್ಥೆ ಸಮರ್ಥ ನಿರ್ವಹಣೆಗಾಗಿ ತಂತ್ರಜ್ಞಾನದ ನೆರವು; ₹1 ಕೋಟಿ ವೆಚ್ಚ

* ಬ್ಯಾಂಕ್‌ ಮತ್ತು ಎನ್‌ಬಿಎಫ್‌ಸಿ ಆನ್‌ಲೈನ್‌ನಲ್ಲಿ ನೋಂದಾಯಿಸುವ ಸಾಲ ದಾಖಲಾತಿಗಳಿಗೆ ಆನ್‌ಲೈನ್‌ ಮುಖಾಂತರ ಮುದ್ರಾಂಕ ಶುಲ್ಕ ಪಾವತಿ ವ್ಯವಸ್ಥೆ

* ಬೆಂಗಳೂರು ನಗರದಲ್ಲಿರುವ ಎಲ್ಲ ಗ್ರಾಹಕರಿಗೆ ಅತಿ ವೇಗದ ಇಂಟರ್‌ನೆಟ್‌ ಸಂಪರ್ಕ ಒದಗಿಸಲು ಆಪ್ಟಿಕಲ್‌ ಫೈಬರ್‌ ಅಳವಡಿಕೆ

* ಪ್ರಯಾಣಿಕ ಮತ್ತು ಸರಕು ಸಾಗಣೆ ವಾಹನಗಳಿಗೆ ವೆಹಿಕಲ್‌ ಲೊಕೇಶನ್‌ ಟ್ರ್ಯಾಕಿಂಗ್‌ ವ್ಯವಸ್ಥೆ ಅಳವಡಿಕೆ; ₹20 ಕೋಟಿ ವೆಚ್ಚ

* ದೃಷ್ಟಿದೋಷವುಳ್ಳ ವ್ಯಕ್ತಿಗಳಿಗಾಗಿ ಬೆಂಗಳೂರು ಮತ್ತು ಕಲಬುರ್ಗಿಯಲ್ಲಿ ಬ್ರೈಲ್‌ ಕಂ ಟಾಕಿಂಗ್‌ ಲೈಬ್ರರಿ ಸ್ಥಾಪನೆ; ₹30 ಲಕ್ಷ

* ಆಹಾರ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಂಸ್ಕರಣೆ, ದಾಸ್ತಾನು ಮತ್ತು ಪ್ಯಾಕೇಜಿಂಗ್‌ಗಳ ಬಗ್ಗೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಕ್ರಮ

* ಸಾರ್ವಜನಿಕ ಸಾರಿಗೆಯ ಸಂಪರ್ಕ ಸುಧಾರಣೆಗೆ 'ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿ' ಯೋಜನೆ

* ಬಿಡದಿಯಲ್ಲಿ 11.5 ವೆಗಾ ವ್ಯಾಟ್‌ ಸಾಮರ್ಥ್ಯದ "ವೇಸ್ಟ್‌ ಟು ಎನರ್ಜಿ' ವಿದ್ಯುತ್‌ ಉತ್ಪಾದನಾ ಕೇಂದ್ರ ಸ್ಥಾಪನೆ. ಬೇರ್ಪಡಿಸಿದ ತ್ಯಾಜ್ಯ ಬಳಸಿಕೊಂಡು ವಾರ್ಷಿಕ 70 ದಶಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದನೆ ಗುರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT