ಬುಧವಾರ, ಫೆಬ್ರವರಿ 19, 2020
30 °C

ಕ್ಷಯ ನಿರ್ಮೂಲನೆಗೆ ಕ್ರಮ, ಜಿಲ್ಲೆಗೆ ಮೆಡಿಕಲ್ ಕಾಲೇಜು, ಶಿಕ್ಷಣಕ್ಕೆ ಹೆಚ್ಚಿನ ಹಣ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಜನರ ಆರೋಗ್ಯಕ್ಕಾಗಿ ಹೊಸ ಯೋಜನೆಗಳನ್ನು 2020ರ ಬಜೆಟ್‌‌ನಲ್ಲಿ ಪ್ರಕಟಿಸಲಾಗಿದ್ದು, ಕ್ಷಯರೋಗ ನಿರ್ಮೂಲನೆಗಾಗಿ 'ಟಿಬಿ ಹಾರೇಗಾ ದೇಶ ಜೀತೇಗಾ' ಘೋಷಣೆಯೊಂದಿಗೆ ನೂತನ ಕಾರ್ಯಕ್ರಮ ರೂಪಿಸಲಾಗಿದೆ.

ಕ್ಷಯರೋಗ ಹೋದರೆ ದೇಶ ಬಲಿಷ್ಠವಾಗುತ್ತೆ ಎಂಬ ಘೋಷಣೆಯೊಂದಿಗೆ ದೇಶದಲ್ಲಿ ಕ್ಷಯ ರೋಗ ನಿರ್ಮೂಲನೆಗೆ ಕ್ರಮ ಕೈಗೊಳ್ಳಲು ವಿಶೇಷ ಯೋಜನೆ. 2025ರ ವೇಳೆಗೆ ಕ್ಷಯ ರೋಗ ನಿರ್ಮೂಲನೆಗೆ ಪಣ. 2024ರ ಹೊತ್ತಿಗೆ ದೇಶದ ಎಲ್ಲ ಜಿಲ್ಲೆಗಳಿಗೆ ಜನ ಆರೋಗ್ಯ ಯೋಜನೆ ವಿಸ್ತರಣೆ.

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಮೂಲಕ ತಾಲ್ಲೂಕು ಮತ್ತು ಹೋಬಳಿ ಹಂತದ ಅಸ್ಪತ್ರೆಗಳಿಗೂ ಸೌಲಭ್ಯ ಒದಗಿಸಲು ಚಿಂತನೆ. ಖಾಸಗಿ ಸಹಭಾಗಿತ್ವದಲ್ಲಿ ಆರೋಗ್ಯ ಕ್ಷೇತ್ರ ಸುಧಾರಣೆಗೆ ಕ್ರಮಕೈಗೊಳ್ಳಲಾಗುವುದು. 

ಮಕ್ಕಳ ಆರೋಗ್ಯ ಸಂರಕ್ಷಣೆಗಾಗಿ ಇಂದ್ರಧನುಷ್ ಯೋಜನೆಯ ವಿಸ್ತರಣೆ. ವೈದ್ಯಕೀಯ ಸಲಕರಣೆಗಳಿಂದ ಸಂಗ್ರಹಿಸುವ ತೆರಿಗೆಯನ್ನು ಗುರುತಿಸಲಾದ 112 ಜಿಲ್ಲೆಗಳಲ್ಲಿ ಆರೋಗ್ಯ ಸುಧಾರಿಸಲು ಬಳಸಲಾಗುವುದು. ಸ್ವಚ್ಛತೆಗೆ ಒತ್ತು. ಸ್ವಚ್ಛ ಭಾರತಕ್ಕೆ 12,300 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ. ಎಲ್ಲ ಮನೆಗಳಿಗೆ ಕುಡಿಯುವ ನೀರು ಒದಗಿಸಲು ಜಲ ಜೀವನ್ ಮಿಷನ್ ಘೋಷಣೆ. 3.60 ಲಕ್ಷ ಕೋಟಿ ಘೋಷಣೆ.

ಶಿಕ್ಷಣ ಮತ್ತು ಕೌಶಲ: 2030ರ ವೇಳೆಗೆ ಜಗತ್ತಿನ ಅತಿಹೆಚ್ಚು ಉದ್ಯೋಗಕ್ಕೆ ಸಿದ್ಧರಿರುವ ಜನರು ನಮ್ಮ ದೇಶದಲ್ಲಿ ಇರುತ್ತಾರೆ. ಹೊಸ ಶಿಕ್ಷಣ ನೀತಿಗೆ 2 ಲಕ್ಷಕ್ಕೂ ಹೆಚ್ಚು ಸಲಹೆಗಳು ಬಂದಿವೆ. ಶೀಘ್ರ ಹೊಸ ಶಿಕ್ಷಣ ನೀತಿ ಘೋಷಿಸುವುದಾಗಿ ಬಜೆಟ್ ನಲ್ಲಿ ಹೇಳಲಾಗಿದೆ.

ಆಯುಷ್ಮಾನ್ ಭಾರತ್ ಯೋಜನೆಯಡಿ ದೇಶದ 112 ಜಿಲ್ಲೆಗಳಿಗೆ ವಿಶೇಷ ಆರೋಗ್ಯ ಯೋಜನೆ. ಆರೋಗ್ಯ ಕ್ಷೇತ್ರಕ್ಕೆ 2000 ಮೆಡಿಶನ್ 2024 ವರೆಗೆ ಗುರಿ ಸಾಧಿಸುವ ಯೋಜನೆ.  ಆರೋಗ್ಯಕ್ಕಾಗಿ ₹69,000 ಕೋಟಿ ಮೀಸಲು.

ನೂತನ ಶಿಕ್ಷಣ ನೀತಿ ಸದ್ಯದಲ್ಲೇ

ಶಿಕ್ಷಣಕ್ಕೆ ಈ ಬಾರಿ ₹99,300 ಕೋಟಿ ಮೀಸಲಿರಿಸಲಾಗಿದ್ದು, ₹300 ಕೋಟಿಯನ್ನು ಕೌಶಲಾಭಿವೃದ್ಧಿಗಾಗಿ (ಸ್ಕಿಲ್ ಡೆವಲಪ್ಮೆಂಟ್) ಮೀಸಲಿರಿಸಲಾಗಿದೆ. ಸದ್ಯದಲ್ಲಿಯೇ ನೂತನ ಶಿಕ್ಷಣ ನೀತಿಯನ್ನು ಪ್ರಕಟಿಸಲಾಗುವುದು. ಪರಿಣತಿಹೊಂದಿರುವ ಶಿಕ್ಷಕರನ್ನು ಗುರುತಿಸಲು ಕ್ರಮ. ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಇದಕ್ಕಾಗಿ 150 ಶಿಕ್ಷಣ ಸಂಸ್ಥೆಗಳ ಗುರುತಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲೂ ವಿದೇಶಿ ಬಂಡವಾಳ ಹೂಡಿಕೆಗೆ ಕ್ರಮ. ವಿದ್ಯಾರ್ಥಿಗಳು ಇಂಟರ್ನ್ಶಿಪ್ ಪಡೆಯಲು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಆ ಮೂಲಕ ಉತ್ತಮ ಶಿಕ್ಷಣ ನೀಡಲು ಕ್ರಮ. 

ಪದವಿ ಶಿಕ್ಷಣದಲ್ಲಿ ಆನ್ ಲೈನ್ ಪದ್ದತಿ ಜಾರಿ ಮಾಡಲು ಯೋಜನೆ. ಆಯ್ದ ಸಂಸ್ಥೆಗಳನ್ನು ಯೋಜನೆಯಲ್ಲಿ ಅಳವಡಿಸಲಾಗುವುದು. ಈ ಸಂಬಂಧ ಮಾತುಕತೆ ನಡೆಯುತ್ತಿದ್ದು ಸದ್ಯದಲ್ಲಿಯೇ ಜಾರಿಗೊಳಿಸಲಾಗುವುದು. ಇಂಡ್ ಸ್ಯಾಟ್ ಪರೀಕ್ಷೆ ನಡೆಸಿ ವಿದ್ಯಾರ್ಥಿ ವೇತನ ನೀಡಿ ವಿದೇಶದಲ್ಲಿ ವ್ಯಾಸಂಗಕ್ಕೆ ಅವಕಾಶ. 

ಇದನ್ನೂ ಓದಿ: ತೆರಿಗೆ ಲೆಕ್ಕಿಗರಿಗೆ ಸಿಹಿ ಸುದ್ದಿ: ಏಪ್ರಿಲ್‌ನಿಂದ ಸರಳವಾಗಲಿದೆ GST ನಮೂನೆ

ರಾಷ್ಟ್ರೀಯ ಪೊಲೀಸ್ ಯುನಿವರ್ಸಿಟಿ ರಚನೆ, ನ್ಯಾಷನಲ್ ಫೊರೆನ್ಸಿಕ್ ಯೂನಿವರ್ಸಿಟಿ ಸ್ಥಾಪನೆ, ಮೆಡಿಕಲ್ ಕಾಲೇಜುಗಳು, ಜಿಲ್ಲಾ ಆಸ್ಪತ್ರೆಗಳನ್ನು ಪಿಪಿಪಿ ಮೋಡ್ ಗೆ ತರುವ ವಿಶೇಷ ಯೋಜನೆ ಹಮ್ಮಿಕೊಳ್ಳಲಾಗಿದೆ ಬಜೆಟ್ ನಲ್ಲಿ ತಿಳಿಸಲಾಗಿದೆ. 

ವಿದೇಶದಲ್ಲಿ ವೈದ್ಯರು, ಶುಶ್ರೂಷಕರಿಗೆ ಬೇಡಿಕೆ ಇದೆ. ನಮ್ಮಲ್ಲಿ ಅಂತಹ ವೈದ್ಯರು ಹಾಗೂ ಶುಶ್ರೂಷಕರಿದ್ದಾರೆ, ಆದರೆ, ಅವರಿಗೆ ಭಾಷೆ ಹಾಗೂ ತಾಂತ್ರಿಕ ಕೌಶಲ್ಯ ಅವಶ್ಯಕತೆ ಇದೆ. ಅಂತಹವರಿಗೆ ಸರ್ಕಾರವೇ ವಿಶೇಷ ತರಬೇತಿಯನ್ನು ನೀಡಿ ಉದ್ಯೋಗಕ್ಕೆ ನೆರವು ನೀಡಲಿದೆ.

ಬಜೆಟ್ ಮಾಹಿತಿಗೆ: www.prajavani.net/budget-2020

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು