ನವದೆಹಲಿ: ದೇಶದ ರಕ್ಷಣಾ ವಲಯಕ್ಕೆ 2020–21ನೇ ಸಾಲಿನ ಬಜೆಟ್ನಲ್ಲಿ ₹3.37 ಲಕ್ಷ ಕೋಟಿ ಮೀಸಲಿಟ್ಟಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಪ್ರಕಟಿಸಿದರು.

ಕಳೆದ ವರ್ಷ ಮೀಸಲಿಟ್ಟಿದ್ದ ₹ 3.17 ಲಕ್ಷ ಕೋಟಿಗೆ ಹೋಲಿಸಿದರೆ ಈ ಬಾರಿ ರಕ್ಷಣಾ ವಲಯಕ್ಕೆ ಮೀಸಲಿರಿಸಿದ ಮೊತ್ತದಲ್ಲಿ ಶೇ 6ರಷ್ಟು ಹೆಚ್ಚು.

ಹೊಸ ಯುದ್ಧ ವಿಮಾನ, ಯುದ್ಧನೌಕೆ, ಮಿಲಿಟರಿ ಹಾರ್ಡ್ವೇರ್ ಖರೀದಿ ಸೇರಿದಂತೆಸೇನಾಪಡೆಗಳ ಆಧು
ನೀಕರಣ, ಶಸ್ತ್ರಾಸ್ತ್ರಗಳ ಖರೀದಿಗಾಗಿ ಈ ಬಜೆಟ್ನಲ್ಲಿ ₹1.13 ಲಕ್ಷ ಕೋಟಿ ತೆಗೆದಿರಿಸಲಾಗಿದೆ ಎಂದು ಸೀತಾರಾಮನ್ ಹೇಳಿದರು. ಕಳೆದ ವರ್ಷದ ಬಜೆಟ್ನಲ್ಲಿ ಈ ಉದ್ದೇಶಕ್ಕೆ ತೆಗೆದಿರಿಸಿದ್ದ ಮೊತ್ತಕ್ಕೆ ಹೋಲಿಸಿದರೆ ಈ ಬಾರಿ ₹ 10,340 ಕೋಟಿಯಷ್ಟು ಹೆಚ್ಚು ಮೀಸಲಿರಿಸಲಾಗಿದೆ.

ಇನ್ನು, ರಕ್ಷಣಾ ಇಲಾಖೆಯ ಬಜೆಟ್ನಲ್ಲಿ ಸಿಂಹಪಾಲು ನಿವೃತ್ತಿ ವೇತನಕ್ಕೆ ಮೀಸಲಾಗಿದೆ. ಕಳೆದ ವರ್ಷದ ಬಜೆಟ್ನಲ್ಲಿ ₹1.17 ಲಕ್ಷ ಕೋಟಿ ಮೀಸಲಿರಿಸಿದ್ದರೆ, ಈ ಉದ್ದೇಶಕ್ಕೆ 2020–21ನೇ ಸಾಲಿನ ಬಜೆಟ್ನಲ್ಲಿ ₹ 1.33 ಲಕ್ಷ ಕೋಟಿ ತೆಗೆದಿರಿಸಲಾಗಿದೆ. ಇನ್ನು, ವೇತನ, ನಿರ್ವಹಣೆಗಾಗಿ ₹ 2.09 ಲಕ್ಷ ಕೋಟಿ ಮೀಸಲಿರಿಸಲಾಗಿದೆ.

ರಕ್ಷಣಾ ಕ್ಷೇತ್ರಕ್ಕೆ ಒಟ್ಟು ಜಿಡಿಪಿಯ ಶೇ 1.5ರಷ್ಟಿದೆ. ಆದರೆ, ಸೇನಾಪಡೆಗಳ ಆಧುನೀಕರಣಕ್ಕೆ ಜಿಡಿಪಿಯ ಶೇ 2.5ರಷ್ಟು ಮೊತ್ತವನ್ನು ತೆಗೆದಿರಿಸಬೇಕು ಎಂಬುದು ತಜ್ಞರ ಅಭಿಪ್ರಾಯ.

‘ನವಭಾರತದ ಬಜೆಟ್’

ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಆತ್ಮವಿಶ್ವಾಸದಿಂದ ಬೀಗುವ ನವಭಾರತ ಸಾಗುವ ದಿಕ್ಕನ್ನು ತೋರುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

‘ಇದು ಭರವಸೆದಾಯಕ, ಕ್ರಿಯಾಶೀಲ ಮತ್ತು ಪ್ರಗತಿಪರ ಬಜೆಟ್. ಇದು ಬರುವ ದಿನಗಳಲ್ಲಿ ಭಾರತವನ್ನು ಸದೃಢ ಮತ್ತು ಶಕ್ತಿಶಾಲಿ ರಾಷ್ಡ್ರವನ್ನಾಗಿ ಮಾಡಲಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.