ಶ್ರೀಗಂಧ, ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆ ಜತೆ ಮೇಳೈಸಿದೆ. ದೇಶದ ಶ್ರೀಗಂಧ ಪರಂಪರೆ ವೈಭವವನ್ನು ಮುಂದುವರಿಸುವ ನಿಟ್ಟಿನಲ್ಲಿ ಶ್ರೀಗಂಧ ಬೆಳೆಯಲು ಮತ್ತು ಕಟಾವು ನಂತರ ಪ್ರಕ್ರಿಯೆಗಳಿಗೆ ನೆರವು ನೀಡಲಾಗುವುದು. ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.