ನವದೆಹಲಿ: ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್ ಮತ್ತು ಅವರ ತಂಡವು ರಚಿಸಿರುವ ಆರ್ಥಿಕ ಸಮೀಕ್ಷೆ (2024-25)ಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದರು.

ಆರ್ಥಿಕತೆಯ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಬಜೆಟ್ಗೆ ಮುಂಚಿತವಾಗಿ ಸರ್ಕಾರವು ಪ್ರಸ್ತುತಪಡಿಸುವ ವಾರ್ಷಿಕ ದಾಖಲೆ ಆರ್ಥಿಕ ಸಮೀಕ್ಷೆಯಾಗಿದೆ.

2024-25ರ ಆರ್ಥಿಕ ಸಮೀಕ್ಷೆ ಮುಖ್ಯಾಂಶಗಳು ಈ ಕೆಳಗಿನಂತಿವೆ...

* ಜಾಗತಿಕ ಅನಿಶ್ಚಿತತೆ ನಡುವೆಯೂ, ಪ್ರಸಕ್ತ ಹಣಕಾಸು ವರ್ಷ (2024-25)ದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 6.4 ರಷ್ಟಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

* 2025-26ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.6.3 ರಿಂದ ಶೇ.6.8ರಷ್ಟು ಇರಲಿದೆ ಅಂದಾಜಿಸಲಾಗಿದೆ.

* ಭಾರತದ ಆರ್ಥಿಕ ಮೂಲಭೂತ ಅಂಶಗಳು ಸದೃಢವಾಗಿವೆ

* ಜಾಗತಿಕ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸಲು ವಿವೇಕಯುತ ನೀತಿ ನಿರ್ವಹಣೆ, ವಿವಿಧ ಕಾರ್ಯತಂತ್ರಗಳು ಮತ್ತು ದೇಶೀಯ ಮೂಲಭೂತ ಅಂಶಗಳನ್ನು ಬಲಪಡಿಸುವ ಅಗತ್ಯವಿದೆ

* ಜಾಗತಿಕವಾಗಿ ಉಂಟಾಗಿರುವ ರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆಗಳ ಕಾರಣದಿಂದಾಗಿ ಹಣದುಬ್ಬರದ ಅಪಾಯಗಳು ಉಳಿದಿವೆ
.Union Budget 2025 | ಆರ್ಥಿಕ ಸಮೀಕ್ಷೆ ಮಂಡಿಸಿದ ನಿರ್ಮಲಾ ಸೀತಾರಾಮನ್.Union Budget 2025 | ಜಿಡಿಪಿ ಬೆಳವಣಿಗೆ ದರ ಶೇ 6.3ರಿಂದ 6.8: ಆರ್ಥಿಕ ಸಮೀಕ್ಷೆ .
* ಸಾರ್ವಜನಿಕ ಬಂಡವಾಳ ವೆಚ್ಚ ಹಾಗೂ ವಾಣಿಜ್ಯ ಮತ್ತು ವ್ಯಾಪಾರದ ನಿರೀಕ್ಷೆಗಳನ್ನು ಸುಧಾರಿಸುವ ಹೂಡಿಕೆ ಚಟುವಟಿಕೆಗಳು ಹೆಚ್ಚಾಗುವ ನಿರೀಕ್ಷೆ ಇದೆ.

* ತಳಮಟ್ಟದ ರಚನಾತ್ಮಕ ಸುಧಾರಣೆಗಳ ಮೂಲಕ ಭಾರತವು ತನ್ನ ಜಾಗತಿಕ ಸ್ಪರ್ಧಾತ್ಮಕತೆಯನ್ನು ಸುಧಾರಿಸುವ ಅಗತ್ಯವಿದೆ

* ದೇಶದ ವಿದೇಶೀ ವಿನಿಮಯ 640.3 ಶತಕೋಟಿ ಡಾಲರ್ ಇದೆ.

* ಮುಂದಿನ ಎರಡು ದಶಕಗಳಲ್ಲಿ ಮೂಲಸೌಕರ್ಯ ಹೂಡಿಕೆಯ ಅಗತ್ಯವಿದೆ

* ಗುಜರಾತ್, ಉತ್ತರಾಖಂಡ್ ಮತ್ತು ಹಿಮಾಚಲಪ್ರದೇಶದಂತಹ ಕೆಲವು ರಾಜ್ಯಗಳು ಕೈಗಾರಿಕಾ ವಲಯದಲ್ಲಿ ಜನರಿಗೆ ಆದಾಯವನ್ನು ಸೃಷ್ಟಿಸಲು ಸಮರ್ಥವಾಗಿವೆ

* ಸೇವಾ ಆಧಾರಿತ ವಲಯ ಬೆಳವಣಿಗೆಯಾಗುತ್ತಿದ್ದು ಕೃತಕ ಬುದ್ಧಿಮತ್ತೆಯ ಪ್ರಭಾವ ಇದಕ್ಕೆ ಪೂರಕವಾಗಿದೆ.

* ಕಾರ್ಪೊರೇಟ್ ವಲಯವು ಉನ್ನತ ಮಟ್ಟದ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಬೇಕು.
.Union Budget 2025: ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಎಂದರೇನು?.Union Budget 2025 | ಬಜೆಟ್ನಿಂದ ಅನುದಾನ ನಿರೀಕ್ಷೆಯಿಲ್ಲ: ಚಲುವರಾಯಸ್ವಾಮಿ.
* ಹವಾಮಾನ ವೈಪರಿತ್ಯದಿಂದಾಗುವ ಬೆಳೆ ಹಾನಿಯನ್ನು ಕಡಿಮೆ ಮಾಡಬೇಕು ಮತ್ತು ಇಳುವರಿಯನ್ನು ಹೆಚ್ಚಿಸಬೇಕು. ಬೇಳೆ ಕಾಳುಗಳು, ಎಣ್ಣೆ ಕಾಳುಗಳು, ಟೊಮೆಟೊ, ಈರುಳ್ಳಿ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವಿದೆ.

* 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಭಾರತ ಎರಡು ದಶಕಗಳವರೆಗೆ ಸರಾಸರಿ ಶೇ. 8ರಷ್ಟು ಬೆಳವಣಿಗೆಯನ್ನು ಹೊಂದಿರಬೇಕು.

* ದೇಶದ ಬೆಳವಣಿಗೆಗೆ ಪೂರಕವಾಗಿ ಹೂಡಿಕೆ ಪ್ರಮಾಣ ಶೇ.31 ರಿಂದ ಶೇ.35ಕ್ಕೆ ಹೆಚ್ಚಾಗಬೇಕು.

* ಸುಧಾರಣೆಗಳು, ಆರ್ಥಿಕ ನೀತಿಗಳ ಗಮನವು ಈಗ ವ್ಯವಸ್ಥಿತವಾಗಿ ನಿಯಂತ್ರಣವನ್ನು ತೆಗೆದುಹಾಕುವುದರ ಮೇಲೆ ಇರಬೇಕು

* ಉತ್ಪಾದನಾ ವಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕೃತಕ ಬುದ್ಧಿಮತ್ತೆ (ಎಐ), ರೊಬೊಟಿಕ್ಸ್ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಅಗತ್ಯವಿದೆ.
.Union Budget 2025: ಹೊಸ ಆದಾಯ ತೆರಿಗೆ ಮಸೂದೆ ಮಂಡನೆ ಸಾಧ್ಯತೆ.Union Budget 2024: ಆವಿಷ್ಕಾರ, ಸಂಶೋಧನೆಗೆ ₹1 ಲಕ್ಷ ಕೋಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.