ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಐಪಿಒಗೆ (ಆರಂಭಿಕ ಸಾರ್ವಜನಿಕ ಹೂಡಿಕೆ) ದಿನಗಣನೆ ಶುರುವಾಗಿದೆ. ಈ ವರ್ಷದ ಮಾರ್ಚ್ 31ರ ಒಳಗಾಗಿ ಐಪಿಒ ನಡೆಯುವ ಸಾಧ್ಯತೆ ಹೆಚ್ಚಿದ್ದು, ಅದಕ್ಕಾಗಿ ಭರದ ಸಿದ್ಧತೆಯೂ ನಡೆದಿದೆ. ಭಾರತದಲ್ಲಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲೂ ಎಲ್ಐಸಿ ಐಪಿಒ ದೊಡ್ಡ ಸುದ್ದಿ ಮಾಡುತ್ತಿದೆ. ಈ ಹೊತ್ತಿನಲ್ಲಿ ಎಲ್ಐಸಿ ಐಪಿಒ ಹೂಡಿಕೆಗೆ ಒಳ್ಳೆಯ ಆಯ್ಕೆಯೇ ಎನ್ನುವ ಬಗ್ಗೆ ಅರಿತುಕೊಳ್ಳುವ ಅಗತ್ಯವಿದೆ.

ಎಲ್ಐಸಿ ಐಪಿಒ ಹಿನ್ನೆಲೆ:
1956ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಎಲ್ಐಸಿ ಸದ್ಯ ಹಣಕಾಸು ಸಚಿವಾಲಯದ ಸುಪರ್ದಿಯಲ್ಲಿದ್ದು ಜಾಗತಿಕವಾಗಿ ‘ಟಾಪ್–10’ ವಿಮಾ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿದೆ. ಈಗ ಎಲ್ಐಸಿಯ ಶೇ 10ರಷ್ಟು ಪಾಲುದಾರಿಕೆಯನ್ನು ಕೇಂದ್ರ ಸರ್ಕಾರವು ಮಾರಾಟ ಮಾಡಲು, ಐಪಿಒಗೆ ಮುಂದಾಗಿದೆ ಎಂಬ ವರದಿಗಳು ಇವೆ. ಇದು ಸರ್ಕಾರದ ಬಂಡವಾಳ ಹಿಂತೆಗೆತದ ಪ್ರಮುಖ ಹೆಜ್ಜೆಯಾಗಿದ್ದು ಸುಮಾರು ₹ 80,000 ಕೋಟಿಯಿಂದ ₹ 1 ಲಕ್ಷ ಕೋಟಿವರೆಗೆ ಬಂಡವಾಳ ಸಂಗ್ರಹದ ಗುರಿ ಹೊಂದಲಾಗಿದೆ. ಐಪಿಒ ಬಳಿಕ ಎಲ್ಐಸಿಯ ಮೌರುಕಟ್ಟೆ ಮೌಲ್ಯ ₹ 14 ಲಕ್ಷ ಕೋಟಿಯಷ್ಟಾಗಲಿದೆ ಎಂಬ ಅಂದಾಜು ಇದೆ.

ಎಲ್ಐಸಿಯ ಮಾರುಕಟ್ಟೆ ಪಾಲು:
ಭಾರತದ ವಿಮಾ ಮಾರುಕಟ್ಟೆಯ ಮೌಲ್ಯ 2019-20ರಲ್ಲಿ ಸುಮಾರು ₹ 7.63 ಲಕ್ಷ ಕೋಟಿ ಆಗಿತ್ತು. ವಿಮಾ ವಲಯದಲ್ಲಿನ ಶೇ 67.39ರಷ್ಟು ಮಾರುಕಟ್ಟೆ ಎಲ್ಐಸಿ ಹಿಡಿತದಲ್ಲಿದೆ. ಇನ್ನುಳಿದ ಶೇ 32.61ರಷ್ಟು ಪಾಲು 23 ಖಾಸಗಿ ವಿಮಾ ಕಂಪನಿಗಳ ಬಳಿ ಇದೆ. ಕಂಪನಿಯ ಗಾತ್ರದ ಕಾರಣದಿಂದಾಗಿ ಎಲ್ಐಸಿ ಐಪಿಒ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದೆ. ಎಲ್ಐಸಿಯ ರಿಟರ್ನ್ ಆನ್ ಈಕ್ವಿಟಿ (ಹೂಡಿಕೆ ಮೇಲಿನ ಗಳಿಕೆ) ಶೇ 82ರಷ್ಟಿದೆ ಎಂದು ಕ್ರಿಸಿಲ್ ಸಂಸ್ಥೆಯ ವರದಿ ಹೇಳುತ್ತಿದೆ.

ಜಾಗತಿಕ ಮಟ್ಟದಲ್ಲಿ ವಿಮೆ ಹೊಂದಿರುವವರ ಸರಾಸರಿ ಪ್ರಮಾಣ ಶೇ 7.23ರಷ್ಟು. ಆದರೆ ಭಾರತದಲ್ಲಿ ವಿಮೆ ಹೊಂದಿರುವವರು ಒಟ್ಟು ಜನಸಂಖ್ಯೆಯ ಶೇ 4.2ರಷ್ಟು ಮಂದಿ ಮಾತ್ರ. ಹೀಗಾಗಿ, ಭವಿಷ್ಯದಲ್ಲಿ ವಿಮಾ ವಲಯದಲ್ಲಿ ಗಣನೀಯ ಪ್ರಮಾಣದ ಬೆಳವಣಿಗೆಗೆ ಅವಕಾಶಗಳಿವೆ.

ಎಲ್ಐಸಿ ಆರ್ಥಿಕ ಸ್ಥಿತಿಗತಿ:
ಅವಧಿ ವಿಮೆ (ಟರ್ಮ್ ಇನ್ಶೂರೆನ್ಸ್), ಆರೋಗ್ಯ ವಿಮೆ, ಯುಲಿಪ್ ಪಾಲಿಸಿಗಳು, ಎಂಡೋಮೆಂಟ್ ಪಾಲಿಸಿಗಳು, ಮನಿ ಬ್ಯಾಕ್ ಪಾಲಿಸಿಗಳು, ಹಿರಿಯ ನಾಗರಿಕರಿಗಾಗಿ ಇರುವ ಹೂಡಿಕೆಗಳು, ರಾಷ್ಟ್ರೀಯ ಪಿಂಚಣಿ ಯೋಜನೆ ಸೇರಿ ಹಲವು ಸೇವೆ ಮತ್ತು ಉತ್ಪನ್ನಗಳನ್ನು ನೀಡಿ ಎಲ್ಐಸಿ ಆದಾಯ ಗಳಿಸುತ್ತಿದೆ. ಇದಲ್ಲದೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಕೂಡ ಎಲ್‌ಐಸಿ ಹಣ ಬೆಳೆಸುತ್ತಿದೆ. ಎಲ್ಐಸಿಯ ಹಣಕಾಸಿನ ಸ್ಥಿತಿಗತಿ ಉತ್ತಮವಾಗಿದೆ. 2000-01ರಲ್ಲಿ ಎಲ್ಐಸಿಯ ತೆರಿಗೆ ನಂತರದ ನಿವ್ವಳ ಲಾಭ ₹ 317 ಕೋಟಿ ಇತ್ತು. 2004-05ರಲ್ಲಿ ಅದು ₹ 708 ಕೋಟಿಗೆ ಏರಿಕೆಯಾಗಿದೆ. 2009-10ರಲ್ಲಿ ನಿವ್ವಳ ಲಾಭ ₹ 1,061 ಕೋಟಿ ಆಗಿದ್ದರೆ, 2014-15ರ ಅವಧಿಯಲ್ಲಿ ಅದು ₹ 1,834 ಕೋಟಿ ಆಗಿದೆ. 2019-20ನೇ ಸಾಲಿನಲ್ಲಿ ಎಲ್ಐಸಿಯ ತೆರಿಗೆ ನಂತರದ ನಿವ್ವಳ ಲಾಭ ₹ 2,713 ಕೋಟಿಗೆ ಏರಿಕೆಯಾಗಿದೆ.

ಎಲ್ಐಸಿ ಐಪಿಒ ಅನುಕೂಲಗಳು:
‘ಇನ್ಶೂರೆನ್ಸ್ ಅಂದ್ರೆ ಎಲ್ಐಸಿ’ ಎನ್ನುವ ಮಟ್ಟಿಗೆ ಎಲ್ಐಸಿ ಜನರ ಮನದಲ್ಲಿ ಗಟ್ಟಿಯಾಗಿ ಬೇರೂರಿದೆ. ಪ್ರತಿಯೊಂದು ಮನೆಗೂ ಎಲ್ಐಸಿ ಪರಿಚಯವಿದೆ. ಎಲ್ಐಸಿ ಅಡಿಯಲ್ಲಿ 2,048 ಖಾಖೆಗಳು, ಎಂಟು ವಲಯಗಳು, 113 ವಿಭಾಗೀಯ ಕಚೇರಿಗಳು, 1,408 ಉಪ ಕಚೇರಿಗಳು ಇವೆ. ಸುಮಾರು 13.5 ಲಕ್ಷ ಏಜೆಂಟರು ಇದ್ದಾರೆ. 2021-22ರ ಮೊದಲಾರ್ಧದಲ್ಲಿ ಎಲ್ಐಸಿಯ ತೆರಿಗೆ ನಂತರದ ಲಾಭ ₹ 1,437 ಕೋಟಿ ಇದೆ.

ಎಲ್ಐಸಿ ಐಪಿಒ ಸವಾಲುಗಳು:
ಎಲ್ಐಸಿಯ ಹಣಕಾಸಿನ ಸ್ಥಿತಿ ಉತ್ತಮವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಖಾಸಗಿ ಕಂಪನಿಗಳಿಂದ ಅದು ಸವಾಲುಗಳನ್ನು ಎದುರಿಸಿ ವಿಮಾ ವಲಯದಲ್ಲಿ ಮುನ್ನಡೆ ಕಾಯ್ದುಕೊಳ್ಳಬೇಕಾಗುತ್ತದೆ. ವಿಮಾ ಪ್ರೀಮಿಯಂಗಳ ವಿಚಾರದಲ್ಲಿ ಖಾಸಗಿ ಕಂಪನಿಗಳ ಜೊತೆ ಸ್ಪರ್ಧಾತ್ಮಕವಾಗಿ ಬೆಲೆ ನಿಗದಿ ಮಾಡುವತ್ತ ಎಲ್ಐಸಿ ಗಮನಹರಿಸಬೇಕಿದೆ. ವಿಮಾ ವಲಯ ಸಂಪೂರ್ಣ ಡಿಜಿಟಲೀಕರಣಕ್ಕೆ ಒಳಗಾಗುತ್ತಿದ್ದು ಆ ಸವಾಲು ಎದುರಿಸಲು ಎಲ್ಐಸಿ ಎಷ್ಟರಮಟ್ಟಿಗೆ ಸನ್ನದ್ಧವಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ. ಹೊಸ ಜನಸ್ನೇಹಿ ವಿಮಾ ಉತ್ಪನ್ನಗಳನ್ನು ರೂಪಿಸುವತ್ತಲೂ ಎಲ್ಐಸಿ ಗಮನಹರಿಸಬೇಕಾಗುತ್ತದೆ.

ಷೇರುಗಳ ಬೆಲೆ ನಿಗದಿ:
ಎಲ್ಐಸಿ ಐಪಿಒದಲ್ಲಿ ಪ್ರತಿ ಷೇರಿನ ಬೆಲೆ ₹ 400ರಿಂದ ₹ 600ರ ನಡುವೆ ಇರಬಹುದು ಎನ್ನಲಾಗಿದೆ. ಆದರೆ ನಿಖರವಾಗಿ ಇಂತಿಷ್ಟೇ ಇರುತ್ತದೆ ಎಂದು ಹೇಳುವುದು ಕಷ್ಟ.

ಪಾಲಿಸಿದಾರರಿಗೆ ಬಂಪರ್: ಎಲ್ಐಸಿ ತನ್ನ ಪಾಲಿಸಿದಾರರಿಗಾಗಿ ಶೇ 10ರಷ್ಟು ಷೇರುಗಳನ್ನು ಮೀಸಲಿಡಲಿದೆ ಎಂಬ ವರದಿಗಳಿಗೆ. 29 ಕೋಟಿ ಎಲ್ಐಸಿ ಪಾಲಿಸಿದಾರರು ಇದರ ಅನುಕೂಲ ಪಡೆಯಬಹುದು. ಈ ಕೋಟಾದ ಅಡಿಯಲ್ಲಿ ಐಪಿಒ ಅರ್ಜಿ ಸಲ್ಲಿಸಬೇಕು ಅಂದರೆ ಎಲ್ಐಸಿ ದಾಖಲೆಗಳೊಂದಿಗೆ ನಿಮ್ಮ ಪ್ಯಾನ್ ಕಾರ್ಡ್ ಲಿಂಕ್ ಮಾಡಿರಬೇಕು. ಪ್ಯಾನ್ ಲಿಂಕ್ ಮಾಡಲು ಈ ವೆಬ್ ಕೊಂಡಿ ಬಳಸಬಹುದು: https://licindia.in/Home/Online-PAN-Registration.

ಪ್ಯಾನ್ ಲಿಂಕ್ ಆಗಿದ್ದರೆ ಸಾಲದು. ಡಿ-ಮ್ಯಾಟ್ ಖಾತೆ ಸಹ ಹೊಂದಿರಬೇಕು. ಅದನ್ನು ಬ್ಯಾಂಕ್‌ಗಳ ಮೂಲಕ ಅಥವಾ ಕೆಲವು ಆನ್‌ಲೈನ್ ಅಪ್ಲಿಕೇಷನ್‌ಗಳ ಮೂಲಕ ತೆರೆಯಬಹುದು. ಎಲ್ಐಸಿ ಪಾಲಿಸಿ ಹೊಂದದವರು ಕೂಡ ಸಾಮಾನ್ಯ ಕೋಟಾದ ಅಡಿಯಲ್ಲಿ ಐಪಿಒಗೆ ಅರ್ಜಿ ಸಲ್ಲಿಸಬಹುದು.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.