ಮ್ಯೂಚುವಲ್ ಫಂಡ್ಗಳಲ್ಲಿ (ಎಂ.ಎಫ್) ಹೂಡಿಕೆ ಮಾಡುವಾಗ ನಮ್ಮ ಪೋರ್ಟ್ಫೋಲಿಯೋ ಹೇಗಿರಬೇಕು? ಆ್ಯಕ್ಟಿವ್ ಫಂಡ್ಗಳಲ್ಲಿ ಹೆಚ್ಚು ಹೂಡಿಕೆ ಮಾಡಬೇಕಾ, ಪ್ಯಾಸಿವ್ ಫಂಡ್ಗಳ ಆಯ್ಕೆ ಪರಿಗಣಿಸಬೇಕಾ? ಯಾವ ಮಾದರಿಯಿಂದ ಹೆಚ್ಚು ಲಾಭ? ಇಂಥದ್ದೊಂದು ಪ್ರಶ್ನೆ ಪ್ರತಿ ಹೂಡಿಕೆದಾರನನ್ನೂ ಕಾಡುತ್ತದೆ.

ಯಾವೆಲ್ಲ ಮ್ಯೂಚುವಲ್ ಫಂಡ್ಗಳನ್ನು ಫಂಡ್ ಮ್ಯಾನೇಜರ್ ಮುಂದಾಳತ್ವದಲ್ಲಿ ನಿರ್ವಹಿಸಲಾಗುತ್ತವೆಯೋ ಅವನ್ನು ಆ್ಯಕ್ಟಿವ್ ಫಂಡ್ ಎನ್ನಲಾಗುತ್ತದೆ. ಆ್ಯಕ್ಟಿವ್ ಫಂಡ್ನಲ್ಲಿ ಹೂಡಿಕೆದಾರರ ಹಣವನ್ನು ಯಾವ ಮಾದರಿಯ ಹೂಡಿಕೆ ಉತ್ಪನ್ನದ ಮೇಲೆ ತೊಡಗಿಸಬೇಕು ಎನ್ನುವ ತೀರ್ಮಾನವನ್ನು ಫಂಡ್ ಮ್ಯಾನೇಜರ್ ಮಾಡುತ್ತಾನೆ. ಯಾವಾಗ ಯಾವ ಕಂಪನಿಯ ಷೇರು ಖರೀದಿಸಬೇಕು ಮತ್ತು ಯಾವ ಸಂದರ್ಭದಲ್ಲಿ ಅವನ್ನು ಮಾರಾಟ ಮಾಡಬೇಕು ಎನ್ನುವ ನಿರ್ಧಾರವೂ ಫಂಡ್ ಮ್ಯಾನೇಜರ್ನದ್ದೇ ಆಗಿರುತ್ತದೆ. ಷೇರು ಮಾರುಕಟ್ಟೆಯ ಏರಿಳಿತ ಆಧರಿಸಿ ಫಂಡ್ ಮ್ಯಾನೇಜರ್ ಕಾಲಕಾಲಕ್ಕೆ ಹೂಡಿಕೆ ತಂತ್ರಗಾರಿಕೆ ಬದಲಿಸುತ್ತಾನೆ. ಈಕ್ವಿಟಿ, ಡೆಟ್ ಮತ್ತು ಹೈಬ್ರಿಡ್ ಮ್ಯೂಚುವಲ್ ಫಂಡ್ಗಳು ಆ್ಯಕ್ಟಿವ್ ಫಂಡ್ಗಳಿಗೆ ಉತ್ತಮ ಉದಾಹರಣೆ.

ಪ್ಯಾಸಿವ್ ಫಂಡ್ಗಳಲ್ಲಿ ಯಾವ ಷೇರಿನಲ್ಲಿ ಹೂಡಿಕೆ ಮಾಡಬೇಕು, ಯಾವುದರಲ್ಲಿ ಹೂಡಿಕೆ ಮಾಡಬಾರದು ಎನ್ನುವ ನಿರ್ಧಾರವನ್ನು ಫಂಡ್ ಮ್ಯಾನೇಜರ್ ತೆಗೆದುಕೊಳ್ಳುವುದಿಲ್ಲ. ಇಲ್ಲಿ ಫಂಡ್ ಮ್ಯಾನೇಜರ್ಗಳ ಪಾತ್ರ ಅತ್ಯಲ್ಪ. ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿರುವ ವಿವಿಧ ವಲಯಗಳ ಸೂಚ್ಯಂಕಗಳನ್ನು ಆಧರಿಸಿ ಇಲ್ಲಿ ಹೂಡಿಕೆ ಮಾಡಲಾಗುತ್ತದೆ. ಇಂಡೆಕ್ಸ್ ಮ್ಯೂಚುವಲ್ ಫಂಡ್, ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಸ್ (ಇಟಿಎಫ್), ಫಂಡ್ ಆಫ್ ಫಂಡ್ಸ್ (ಎಫ್ಒಎಫ್) ಪ್ಯಾಸಿವ್ ಫಂಡ್ಸ್ಗೆ ಉತ್ತಮ ಉದಾಹರಣೆ.

ಆ್ಯಕ್ಟಿವ್ ಮತ್ತು ಪ್ಯಾಸಿವ್ ಫಂಡ್ನ ಪ್ರಮುಖಾಂಶಗಳು

* ಫಂಡ್ ನಿರ್ವಹಣೆ: ಆ್ಯಕ್ಟಿವ್ ಮ್ಯೂಚುವಲ್ ಫಂಡ್ಗಳಲ್ಲಿ ಫಂಡ್ ಮ್ಯಾನೇಜರ್ ಹೂಡಿಕೆ ತೀರ್ಮಾನಗಳನ್ನು ಮಾಡುತ್ತಾನೆ. ಯಾವುದನ್ನು ಖರೀದಿಸಬೇಕು – ಮಾರಾಟ ಮಾಡಬೇಕು ಎಂಬುದನ್ನು ನಿರ್ಧರಿಸುತ್ತಾನೆ. ಪ್ಯಾಸಿವ್ ಮ್ಯೂಚುವಲ್ ಫಂಡ್ಗಳಲ್ಲಿ ಸೂಚ್ಯಂಕಗಳನ್ನು ಅನುಸರಿಸಿ ಹೂಡಿಕೆ ಮಾಡಲಾಗುತ್ತದೆ. ಹೂಡಿಕೆ ನಿರ್ಧಾರಗಳಲ್ಲಿ ಇಲ್ಲಿ ಫಂಡ್ ಮ್ಯಾನೇಜರ್ ಪಾತ್ರ ಇರುವುದಿಲ್ಲ.

* ಹೂಡಿಕೆ ಗುರಿ: ಷೇರುಪೇಟೆ ಸೂಚ್ಯಂಕಗಳು ನೀಡುವ ಲಾಭವನ್ನು ಮೀರಿ ಹೂಡಿಕೆದಾರನಿಗೆ ಲಾಭ ತಂದುಕೊಡುವುದು ಆ್ಯಕ್ಟಿವ್ ಫಂಡ್ಗಳ ಗುರಿಯಾಗಿರುತ್ತದೆ. ಷೇರುಪೇಟೆ ಸೂಚ್ಯಂಕದಲ್ಲಿ ಬರುವಷ್ಟೇ ಲಾಭವನ್ನ ಹೂಡಿಕೆದಾರನಿಗೆ ಸಿಗುವಂತೆ ಮಾಡುವುದು ಪ್ಯಾಸಿವ್ ಫಂಡ್ಗಳ ಗುರಿ.

* ವೆಚ್ಚ ಅನುಪಾತ (ಎಕ್ಸ್ಪೆನ್ಸ್ ರೇಷಿಯೋ/ಕಮಿಷನ್): ಆ್ಯಕ್ಟಿವ್ ಫಂಡ್ಗಳಲ್ಲಿ ಎಕ್ಸ್ಪೆನ್ಸ್ ರೇಷಿಯೋ/ಕಮಿಷನ್ ಸಾಮಾನ್ಯವಾಗಿ ಜಾಸ್ತಿ ಇರುತ್ತದೆ. ಶೇ 0.5ರಿಂದ ಶೇ 2.5ರವರೆಗೂ ವೆಚ್ಚ ಅನುಪಾತವನ್ನು ಇಲ್ಲಿ ಪಡೆಯಲಾಗುತ್ತದೆ. ಆದರೆ ಪ್ಯಾಸಿವ್ ಫಂಡ್ಗಳಲ್ಲಿ ಎಕ್ಸ್ಪೆನ್ಸ್ ರೇಷಿಯೋ ಶೇ 1.25ರ ಒಳಗೇ ಇರುತ್ತದೆ.

* ಯಾವುದರಲ್ಲಿ ಖರ್ಚು ಜಾಸ್ತಿ?: ಆ್ಯಕ್ಟಿವ್ ಫಂಡ್ಗಳಲ್ಲಿ ವಿಶ್ಲೇಷಣೆ, ಅಧ್ಯಯನ, ಕಾಲಕಾಲಕ್ಕೆ ಖರೀದಿ ಮತ್ತು ಮಾರಾಟದ ನಿರ್ಧಾರಗಳನ್ನು ಮಾಡಬೇಕಿರುವುದರಿಂದ ಖರ್ಚು ಜಾಸ್ತಿ ಬರುತ್ತದೆ. ಆದರೆ ಪ್ಯಾಸಿವ್ ಫಂಡ್ಗಳು ಸೂಚ್ಯಂಕಗಳನ್ನು ಅನುಸರಿಸಬೇಕಿರುವ ಕಾರಣ ವೆಚ್ಚ ಕಡಿಮೆ.

ನಿಮಗೆ ಯಾವುದು ಸೂಕ್ತ?: ಹೂಡಿಕೆ ಮಾಡುವಾಗ ಆ್ಯಕ್ಟಿವ್ ಫಂಡ್ ಪರಿಗಣಿಸಬೇಕೋ ಅಥವಾ ಪ್ಯಾಸಿವ್ ಫಂಡ್ ಆಯ್ಕೆ ಮಾಡಿಕೊಳ್ಳಬೇಕೋ ಎಂಬ ಪ್ರಶ್ನೆ ಎದುರಾಗುತ್ತದೆ. ಹೂಡಿಕೆ ಬಗ್ಗೆ ನಿಮಗೆ ಎಷ್ಟು ತಿಳಿವಳಿಕೆ ಇದೆ ಎನ್ನುವುದರ ಆಧಾರದಲ್ಲಿ ಈ ಪ್ರಶ್ನೆಗೆ ಉತ್ತರ ಹುಡುಕಬೇಕಾಗುತ್ತದೆ. ಸಾಮಾನ್ಯವಾಗಿ ಹೂಡಿಕೆದಾರರನ್ನು ಎರಡು ರೀತಿಯಲ್ಲಿ ವರ್ಗೀಕರಿಸಬಹುದು, ಒಂದನೇ ವರ್ಗ ತಿಳಿವಳಿಕೆಯುಳ್ಳ ಹೂಡಿಕೆದಾರರು ಮತ್ತು ಎರಡನೇ ವರ್ಗ ತಿಳಿವಳಿಕೆಯ ಕೊರತೆಯಿರುವ ಹೂಡಿಕೆದಾರರು.

ತಿಳಿವಳಿಕೆಯುಳ್ಳ ಹೂಡಿಕೆದಾರರಿಗೆ ಪ್ರಚಲಿತ ವಿದ್ಯಮಾನಗಳು, ಷೇರು ಮಾರುಕಟ್ಟೆ ರಿಸ್ಕ್, ಜಾಗತಿಕ ಬೆಳವಣಿಗೆಗಳ ಬಗ್ಗೆ ಅರಿವಿರುತ್ತದೆ. ಯಾವ ರೀತಿಯ ಹೂಡಿಕೆ ರಿಸ್ಕ್ ತೆಗೆದುಕೊಳ್ಳಬೇಕು, ಯಾವ ಫಂಡ್ ಮ್ಯಾನೇಜರ್ ನಿರ್ವಹಣೆ ಮಾಡುವ ಫಂಡ್ಗಳನ್ನು ಪರಿಗಣಿಸಬೇಕು ಎಂಬ ಮಾಹಿತಿ ಅವರಿಗೆ ಇರುತ್ತದೆ. ಇಂತಹ ಹೂಡಿಕೆದಾರರು ಆ್ಯಕ್ಟಿವ್ ಫಂಡ್ಗಳತ್ತ ಹೆಚ್ಚು ಗಮನಹರಿಸಬಹುದು. ಜೊತೆಗೆ ಪ್ಯಾಸಿವ್ ಫಂಡ್ಗಳನ್ನೂ ಆಯ್ದುಕೊಳ್ಳಬಹುದು. ತಿಳಿವಳಿಕೆಯ ಕೊರತೆ ಇರುವ ಹೂಡಿಕೆದಾರರಿಗೆ ಮಾರುಕಟ್ಟೆಯ ಏರಿಳಿತದ ರಿಸ್ಕ್ ಮತ್ತು ಜಾಗತಿಕ ವಿದ್ಯಮಾನಗಳು ಹೆಚ್ಚು ಅರ್ಥವಾಗುವುದಿಲ್ಲ. ಇಂತಹ ಹೂಡಿಕೆದಾರರು ಹೆಚ್ಚು ತಲೆಕೆಡಿಸಿಕೊಳ್ಳದೆ ಷೇರು ಮಾರುಕಟ್ಟೆ ಸೂಚ್ಯಂಕವನ್ನು ಅನುಸರಿಸುವ ಪ್ಯಾಸಿವ್ ಫಂಡ್ಗಳನ್ನು ಪರಿಗಣಿಸಬಹುದು. ಸರಳವಾಗಿ ಹೇಳುವುದಾದರೆ, ಯಾರು ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗೆ ಹೊಸಬರೋ ಅವರು ಪ್ಯಾಸಿವ್ ಫಂಡ್ಗಳಿಂದ ಹೂಡಿಕೆ ಪಯಣ ಆರಂಭಿಸುವುದು ಒಳಿತು. ನಂತರದಲ್ಲಿ ನಿಧಾನಕ್ಕೆ ಆ್ಯಕ್ಟಿವ್ ಫಂಡ್ಗಳತ್ತಲೂ ಹೂಡಿಕೆ ವಿಸ್ತರಿಸಿಕೊಳ್ಳಬಹುದು.

ಸಣ್ಣ ಹೂಡಿಕೆದಾರರ ಪೋರ್ಟ್ಫೋಲಿಯೋ ಹೇಗಿರಬೇಕು?: ಷೇರು ಮಾರುಕಟ್ಟೆ ಆಧರಿಸಿದ ಹೂಡಿಕೆಗಳಿಗಾಗಿ ನಿಮ್ಮ ಬಳಿ ₹100 ಇದೆ ಎಂದಾದಲ್ಲಿ ₹50 ಲಾರ್ಜ್ಕ್ಯಾಪ್ ಪ್ಯಾಸಿವ್ ಫಂಡ್ಗಳ ಮೇಲೆ ಹೂಡಿಕೆ ಮಾಡುವುದು ಸೂಕ್ತವಾಗುತ್ತದೆ. ಇನ್ನುಳಿದ ₹50 ಆ್ಯಕ್ಟಿವ್ ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಫ್ಲೆಕ್ಸಿ ಕ್ಯಾಪ್, ಥಿಮ್ಯಾಟಿಕ್, ಸೆಕ್ಟೋರಲ್ ಫಂಡ್ಗಳಿಗೆ ಮೀಸಲಿಡಬಹುದು. ಇಂತಹ ಫಂಡ್ಗಳ ನಿರ್ವಹಣೆಯಲ್ಲಿ ಫಂಡ್ ಮ್ಯಾನೇಜರ್ನ ಪಾತ್ರ ದೊಡ್ಡದಿರುವುದರಿಂದ ಆ್ಯಕ್ಟಿವ್ ಮಾದರಿ ಹೆಚ್ಚು ಸೂಕ್ತ.

(ಗಮನಿಸಿ: ಸಣ್ಣ ಹೂಡಿಕೆದಾರರನ್ನು ಒಟ್ಟಾಗಿ ಗಮನದಲ್ಲಿಟ್ಟುಕೊಂಡು ಈ ಲೆಕ್ಕಾಚಾರ ನೀಡಲಾಗಿದೆ. ಹೂಡಿಕೆಗೆ ಮುನ್ನ ಹಣಕಾಸು ತಜ್ಞರ ಸಲಹೆ ಪಡೆಯಿರಿ.)

(ಲೇಖಕಿ ಚಾರ್ಟರ್ಡ್ ಅಕೌಂಟೆಂಟ್)

ಷೇರುಪೇಟೆ: ಕುಸಿತ ಕಂಡ ಸೂಚ್ಯಂಕಗಳು

ಜೂನ್ 13ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಕುಸಿತ ಕಂಡಿವೆ. 81118 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.3ರಷ್ಟು ಇಳಿಕೆ ಕಂಡಿದೆ. 24718 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.13ರಷ್ಟು ಇಳಿಕೆ ಕಂಡಿದೆ. ಇಸ್ರೇಲ್–ಇರಾನ್ ಕದನ ಕಚ್ಚಾ ತೈಲ ಬೆಲೆ ಹೆಚ್ಚಳ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಒಪ್ಪಂದ ಮಾತುಕತೆಯಲ್ಲಿ ಅನಿಶ್ಚಿತತೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳ ಮಾರಾಟದ ಒತ್ತಡ ಸೇರಿದಂತೆ ಹಲವು ಅಂಶಗಳು ಮಾರುಕಟ್ಟೆ ಮೇಲೆ ಪರಿಣಾಮ ಬೀರಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 3ರಷ್ಟು ಕುಸಿತ ಕಂಡಿದ್ದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 2.3 ಎಫ್ಎಂಸಿಜಿ ಶೇ 2 ಬ್ಯಾಂಕ್ ಶೇ 2 ಮತ್ತು ಲೋಹ ಶೇ 1.5ರಷ್ಟು ಕುಸಿದಿವೆ. ಆದರೆ ನಿಫ್ಟಿ ಮಾಹಿತಿ ತಂತ್ರಜ್ಞಾನ ಶೇ 3 ಮಾಧ್ಯಮ ಮತ್ತು ಫಾರ್ಮಾ ಶೇ 1ಕ್ಕಿಂತ ಹೆಚ್ಚು ಗಳಿಸಿಕೊಂಡಿವೆ. ಇಳಿಕೆ–ಏರಿಕೆ: ನಿಫ್ಟಿಯಲ್ಲಿ ಎಟರ್ನಲ್ ಲಿಮಿಟೆಡ್ ಶೇ 4.89 ಅದಾನಿ ಪೋರ್ಟ್ಸ್ ಶೇ 4.49 ಟೈಟನ್ ಕಂಪನಿ ಶೇ 3.86 ಟಾಟಾ ಸ್ಟೀಲ್ ಶೇ 3.37 ಟಾಟಾ ಕನ್ಸ್ಯೂಮರ್ ಶೇ 3.31 ಟ್ರೆಂಟ್ ಶೇ 3.24 ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 3.19 ಪವರ್ ಗ್ರಿಡ್ ಕಾರ್ಪೊರೇಷನ್ ಶೇ 3.18 ಎಚ್ಡಿಎಫ್ಸಿ ಬ್ಯಾಂಕ್ ಶೇ 2.99 ಶ್ರೀರಾಮ್ ಫೈನಾನ್ಸ್ ಶೇ 2.93 ಹಿಂದೂಸ್ಥಾನ್ ಯುನಿಲಿವರ್ ಶೇ 2.92 ಐಸಿಐಸಿಐ ಬ್ಯಾಂಕ್ ಶೇ 2.8ರಷ್ಟು ಕುಸಿತ ಕಂಡಿವೆ. ಟೆಕ್ ಮಹೀಂದ್ರ ಶೇ 5.67 ಒಎನ್ಜಿಸಿ ಶೇ 4.73 ವಿಪ್ರೊ ಶೇ 4.67 ಎಚ್ಸಿಎಲ್ ಟೆಕ್ನಾಲಜೀಸ್ ಶೇ 3.62 ಗ್ರಾಸಿಮ್ ಇಂಡಸ್ಟ್ರೀಸ್ ಶೇ 3.59 ಡಾ. ರೆಡ್ಡೀಸ್ ಲ್ಯಾಬ್ಸ್ ಶೇ 3.1 ಇನ್ಫೊಸಿಸ್ ಶೇ 2.4 ಟಿಸಿಎಸ್ ಶೇ 1.81 ಕೋಟಕ್ ಮಹೀಂದ್ರ ಬ್ಯಾಂಕ್ ಶೇ 1.72 ಹೀರೊ ಮೋಟೊಕಾರ್ಪ್ ಶೇ 1.43 ಬಜಾಜ್ ಫಿನ್ಸರ್ವ್ ಶೇ 1.08 ಭಾರತ್ ಎಲೆಕ್ಟ್ರಾನಿಕ್ಸ್ ಶೇ 0.92ರಷ್ಟು ಗಳಿಸಿಕೊಂಡಿವೆ. ಮುನ್ನೋಟ: ಜೂನ್ 16ರಂದು ಭಾರತದ ಮೇ ತಿಂಗಳ ಆಮದು ರಫ್ತಿನ ಅಂಕಿ-ಅಂಶ ಮತ್ತು ಬ್ಯಾಲೆನ್ಸ್ ಆಫ್ ಟ್ರೇಡ್ ಮಾಹಿತಿ ಪ್ರಕಟವಾಗಲಿದೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶಿಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.