ಸೋಮವಾರ, ಏಪ್ರಿಲ್ 12, 2021
31 °C

ಲಾರ್ಜ್‌ಕ್ಯಾಪ್‌ ಫಂಡ್‌: 2020ರಲ್ಲಿ ತಗ್ಗಿದ ಗಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: 2020ರಲ್ಲಿ ಭಾರತದಲ್ಲಿನ ಶೇಕಡ 80ರಷ್ಟು ಲಾರ್ಜ್‌ಕ್ಯಾಪ್‌ ಮ್ಯೂಚುವಲ್‌ ಫಂಡ್‌ಗಳು ಬೆಂಚ್‌ಮಾರ್ಕ್‌ ಸೂಚ್ಯಂಕಗಳಿಗೆ ಹೋಲಿಸಿದರೆ ಕಡಿಮೆ ಲಾಭ ತಂದುಕೊಟ್ಟಿವೆ ಎಂದು ಎಸ್‌ಆ್ಯಂಡ್‌ಪಿ ಇಂಡಿಸಿಸ್‌ ವರ್ಸಸ್‌ ಆ್ಯಕ್ಟಿವ್‌ (ಎಸ್‌ಪಿಐವಿಎ) ಹೇಳಿದೆ.

ಈಕ್ವಿಟಿ ಲಿಂಕ್ಡ್‌ ಸೇವಿಂಗ್ಸ್‌ ಯೋಜನೆಗಳು (ಇಎಲ್‌ಎಸ್‌ಎಸ್‌), ಮಿಡ್‌ ಮತ್ತು ಸ್ಮಾಲ್ ಕ್ಯಾಪ್‌ ಫಂಡ್‌ಗಳ ಗಳಿಕೆಯು ಕ್ರಮವಾಗಿ ಶೇ 65 ಮತ್ತು ಶೇ 67ರಷ್ಟು ಇದ್ದು, ಲಾರ್ಜ್‌ಕ್ಯಾಪ್‌ಗಳ ಗಳಿಕೆಗಿಂತ ಸ್ವಲ್ಪ ಉತ್ತಮವಾಗಿದೆ ಎಂದು ಹೇಳಿದೆ.

2020ರ ಏಪ್ರಿಲ್‌ನಲ್ಲಿ ಮಾರುಕಟ್ಟೆಯು ಕಂಡಿದ್ದ ಕುಸಿತದ ನಂತರದ ಚೇತರಿಕೆಯನ್ನು ಪರಿಗಣಿಸಿದರೆ ಫಂಡ್‌ಗಳ ಗಳಿಕೆಯು ಕಳಪೆ ಮಟ್ಟದ್ದಾಗಿದೆ ಎಂದು ಎಸ್‌ಆ್ಯಂಡ್‌ಪಿ ಡೋ ಜೋನ್ಸ್‌ ಇಂಡಿಸಿಸ್‌ನ ಸಹಾಯಕ ನಿರ್ದೇಶಕ ಆಕಾಶ್‌ ಜೈನ್‌ ಹೇಳಿದ್ದಾರೆ.

2020ರ ದ್ವಿತೀಯಾರ್ಧವು ಭಾರತದ ಈಕ್ವಿಟಿ ಆ್ಯಕ್ಟಿವ್ ಫಂಡ್‌ಗಳಿಗೆ ಸವಾಲಿನ ಅವಧಿಯಾಗಿತ್ತು. ಎಲ್ಲ ಲಾರ್ಜ್‌ಕ್ಯಾಪ್ ಫಂಡ್‌ಗಳು, ಇಎಲ್‌ಎಸ್ಎಸ್ ಫಂಡ್‌ಗಳಲ್ಲಿ ಶೇ 80ರಷ್ಟು ಹಾಗೂ ಮಿಡ್/ಸ್ಮಾಲ್ ಕ್ಯಾಪ್ ಫಂಡ್‌ಗಳಲ್ಲಿ 53ರಷ್ಟು ಫಂಡ್‌ಗಳು ಬೆಂಚ್‌ಮಾರ್ಕ್‌ ಸೂಚ್ಯಂಕಗಳಿಗೆ ಹೋಲಿಸಿದರೆ ಕಡಿಮೆ ಗಳಿಕೆ ತಂದುಕೊಟ್ಟಿವೆ ಎಂದು ತಿಳಿಸಿದ್ದಾರೆ.

2020ರ ಎರಡನೇ ತ್ರೈಮಾಸಿಕದ ಆರಂಭದಲ್ಲಿ ಪ್ರಬಲವಾದ ಚೇತರಿಕೆ ಶುರುವಾಗಿ 2020ರ ದ್ವಿತೀಯಾರ್ಧದವರೆಗೂ ಮುಂದುವರಿಯಿತು. ಎಸ್‌ಆ್ಯಂಡ್‌ಪಿ ಬಿಎಸ್‌ಇ 100 ಸೂಚ್ಯಂಕವು ಶೇ 36.48ರಷ್ಟು ಗಳಿಕೆಯೊಂದಿಗೆ ಆರು ತಿಂಗಳ ಅವಧಿಯನ್ನು ಮುಕ್ತಾಯಗೊಳಿಸಿತು ಎಂದಿದ್ದಾರೆ.

ಈಕ್ವಿಟಿ ಎಂಎಫ್‌: ಹೂಡಿಕೆ ಹೆಚ್ಚಳ
ನವದೆಹಲಿ (ಪಿಟಿಐ):
ಮಾರ್ಚ್‌ ತಿಂಗಳಿನಲ್ಲಿ ಹೂಡಿಕೆದಾರರು ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಿರುವ ಮೊತ್ತವು, ಅವರು ಹಿಂಪಡೆದಿರುವ ಮೊತ್ತಕ್ಕಿಂತ ಹೆಚ್ಚಿದೆ.

2020ರ ಜುಲೈನಿಂದ 2021ರ ಮಾರ್ಚ್‌ವರೆಗಿನ ಅವಧಿಯಲ್ಲಿ ಬಂಡವಾಳದ ಒಳಹರಿವು ಹೆಚ್ಚಿರುವುದು ಇದೇ ಮೊದಲು.

ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಗೋಲ್ಡ್‌ ಇಟಿಎಫ್‌) ಮಾರ್ಚ್‌ನಲ್ಲಿ ₹ 662 ಕೋಟಿ ಹೂಡಿಕೆ ಆಗಿದೆ. ಫೆಬ್ರುವರಿಯಲ್ಲಿ ₹ 491 ಕೋಟಿ ಹೂಡಿಕೆ ಆಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು