ಭಾನುವಾರ, ಮೇ 22, 2022
22 °C

ಒಂದು ತಿಂಗಳು ಕಳೆದರೂ ಬಗೆಹರಿಯದ ಹೊಸ ಐಟಿ ಪೋರ್ಟಲ್‌ ಸಮಸ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ನೂತನವಾಗಿ ಅಳವಡಿಸಲಾಗಿರುವ ಆದಾಯ ತೆರಿಗೆ ಪೋರ್ಟಲ್‌ನಲ್ಲಿ ತಿಂಗಳ ನಂತರವೂ ತಾಂತ್ರಿಕ ತೊಂದರೆಗಳು ಮುಂದುವರಿದಿದ್ದು, ಇ–‍ಪ್ರೊಸೀಡಿಂಗ್‌, ಡಿಜಿಟಲ್‌ ಸಿಗ್ನೇಚರ್‌ ಸರ್ಟಿಫಿಕೇಟ್‌ನಂತಹ ಪ್ರಮುಖ ಸೌಲಭ್ಯಗಳು ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ಲೆಕ್ಕಪರಿಶೋಧಕರು ಆರೋಪಿಸಿದ್ದಾರೆ.

ಪೋರ್ಟಲ್‌ಗೆ ಲಾಗಿನ್‌ ಆಗುವಲ್ಲಿ ಸಮಸ್ನೆ ಎದುರಾಗುತ್ತಿದೆ ಎಂದು ಕೆಲವು ಸಾಗರೋತ್ತರ ಕಂಪನಿಗಳು ದೂರಿವೆ.

'www.incometax.gov.in’  ಪೋರ್ಟಲ್‌ ಅನ್ನು ಜೂನ್‌ 7ರಂದು ಆರಂಭಿಸಲಾಗಿತ್ತು. ಇದಾದ ಬಳಿಕ ಸತತ ಎರಡು ವಾರಗಳ ಕಾಲ ತಾಂತ್ರಿಕ ಸಮಸ್ಯೆ ಮುಂದುವರಿದಿತ್ತು. ಜೂನ್‌ 22ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪೋರ್ಟಲ್‌ ಅಭಿವೃದ್ಧಿಪಡಿಸಿರುವ ಇನ್ಫೊಸಿಸ್‌ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದರು.‌

ಆದಾಯ ತೆರಿಗೆ ರಿಟರ್ನ್ಸ್‌ ಪ್ರಕ್ರಿಯೆಯನ್ನು 63 ದಿನಗಳಿಂದ ಒಂದು ದಿನಕ್ಕೆ ಇಳಿಸುವುದು ಹಾಗೂ ತೆರಿಗೆ ಪಾವತಿದಾರರಿಗೆ ತ್ವರಿತವಾಗಿ ಹಣ ವಾಪಸ್ ಮಾಡಿಸುವ ಉದ್ದೇಶದೊಂದಿಗೆ ಈ ಹೊಸ ಪೋರ್ಟಲ್‌ ಅಭಿವೃದ್ಧಿಪಡಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು