ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೊಡಾಫೋನ್‌ ಐಡಿಯಾ: ಆರಂಭಿಕ ಹೂಡಿಕೆದಾರರಿಂದ ₹5,400 ಕೋಟಿ ಸಂಗ್ರಹ

Published 17 ಏಪ್ರಿಲ್ 2024, 14:37 IST
Last Updated 17 ಏಪ್ರಿಲ್ 2024, 14:37 IST
ಅಕ್ಷರ ಗಾತ್ರ

ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವೊಡಾಫೋನ್‌ ಐಡಿಯಾ ಕಂಪನಿಯು ಷೇರು ಮಾರಾಟ ಪ್ರಕ್ರಿಯೆಗೂ (ಎಫ್‌ಪಿಒ) ಮುನ್ನವೇ, ಆರಂಭಿಕ ಹೂಡಿಕೆದಾರರಿಂದ (ಆ್ಯಂಕರ್ ಇನ್‌ವೆಸ್ಟರ್) ₹5,400 ಕೋಟಿ ಬಂಡವಾಳ ಸಂಗ್ರಹಿಸಿದೆ.

ಆರಂಭಿಕ ಹೂಡಿಕೆದಾರರಿಂದ ಒನ್‌97 ಕಮ್ಯುನಿಕೇಷನ್ಸ್‌ ₹8,235 ಕೋಟಿ ಹಾಗೂ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ₹5,627 ಕೋಟಿ ಬಂಡವಾಳ ಸಂಗ್ರಹಿಸಿತ್ತು. ಈಗ ವೊಡಾಫೋನ್‌ ಐಡಿಯಾ ಸಂಗ್ರಹಿಸಿರುವುದು ಮೂರನೇ ಅತಿದೊಡ್ಡ ಮೊತ್ತವಾಗಿದೆ.

ವೊಡಾಫೋನ್‌ ಐಡಿಯಾವು ಎಫ್‌ಪಿಒ ಮೂಲಕ ₹18 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ನಿರ್ಧರಿಸಿದೆ. ಏಪ್ರಿಲ್‌ 18ರಂದು ಎಫ್‌ಪಿಒ ಆರಂಭವಾಗಲಿದ್ದು, ಪ್ರತಿ ಷೇರಿಗೆ ₹10ರಿಂದ ₹11 ಬೆಲೆ ನಿಗದಿಪಡಿಸಿದೆ. 

490.9 ಕೋಟಿ ಷೇರುಗಳನ್ನು 74 ನಿಧಿಗಳಿಗೆ ಪ್ರತಿ ಷೇರಿನ ₹11ರಂತೆ ಮಾರಾಟ ಮಾಡುವ ಮೂಲಕ ಈ ಬಂಡವಾಳ ಸಂಗ್ರಹಿಸಲಾಗಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ದೇಶೀಯ ಮ್ಯೂಚುವಲ್‌ ಫಂಡ್‌ಗಳಿಗೆ 79.52 ಕೋಟಿ ಷೇರುಗಳನ್ನು (ಶೇ 16.2ರಷ್ಟು) ಹಂಚಿಕೆ ಮಾಡಲಾಗಿದೆ. ಮೋತಿಲಾಲ್‌ ಓಸ್ವಾಲ್ ಮ್ಯೂಚುವಲ್‌ ಫಂಡ್‌, ಎಚ್‌ಡಿಎಫ್‌ಸಿ ಮ್ಯೂಚುವಲ್‌ ಫಂಡ್‌, ಎಸ್‌ಬಿಐ ಜನರಲ್ ಇನ್ಶೂರೆನ್ಸ್‌ ಹಾಗೂ ಕ್ವಾಂಟ್‌ ಮ್ಯೂಚುವಲ್‌ ಫಂಡ್‌ಗೆ ಷೇರುಗಳು ಹಂಚಿಕೆಯಾಗಿವೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT