ನವದೆಹಲಿ: ಭಾರ್ತಿ ಏರ್ಟೆಲ್ ಕಂಪನಿಯು 5ಜಿ ಸೇವೆಗಳನ್ನು ಈ ತಿಂಗಳಿನಿಂದಲೇ ಆರಂಭಿಸಲಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಗೋಪಾಲ್ ವಿಟ್ಠಲ್ ಹೇಳಿದ್ದಾರೆ.

ಕಂಪನಿಯು 2024ರ ಮಾರ್ಚ್ಗೆ ಮೊದಲು ಎಲ್ಲ ನಗರಗಳು ಹಾಗೂ ಪ್ರಮುಖ ಗ್ರಾಮೀಣ ಪ್ರದೇಶಗಳಲ್ಲಿ 5ಜಿ ಸೇವೆಗಳು ಲಭ್ಯವಾಗುವಂತೆ ಮಾಡಲಿದೆ ಎಂದಿದ್ದಾರೆ.

ದೇಶದಲ್ಲಿ ಮೊಬೈಲ್ ಸೇವಾ ಶುಲ್ಕವು ತೀರಾ ಕಡಿಮೆ ಇದೆ, ಇದು ಹೆಚ್ಚಾಗಬೇಕು ಎಂದು ಕೂಡ ಅವರು ಹೇಳಿದ್ದಾರೆ. ‘ದೇಶದ ಐದು ಸಾವಿರ ನಗರಗಳಲ್ಲಿ ನೆಟ್ವರ್ಕ್ ಆರಂಭಿಸಲು ವಿಸ್ತೃತ ಯೋಜನೆಯು ಸಿದ್ಧವಿದೆ’ ಎಂದು ಅವರು ಹೇಳಿದ್ದಾರೆ.

ಏರ್ಟೆಲ್ ಬಳಿ ಈಗಾಗಲೇ ಇರುವ 900 ಮೆಗಾಹರ್ಟ್ಸ್ ತರಂಗಾಂತರಕ್ಕೆ ಹೋಲಿಸಿದರೆ 700 ಮೆಗಾಹರ್ಟ್ಸ್ ತರಂಗಾಂತರ ಬಳಕೆಯಿಂದ ಹೆಚ್ಚುವರಿ ವ್ಯಾಪ್ತಿಯಲ್ಲಿ ಸೇವೆ ನೀಡಲು ಸಾಧ್ಯವಾಗುವುದಿಲ್ಲ ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.