ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಈಚೆಗೆ ನಡೆದ ಸಭೆಯಲ್ಲಿ, ಹಣದುಬ್ಬರ ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಸಮಿತಿಯು ಏಪ್ರಿಲ್ 6ರಿಂದ 8ರವರೆಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದಲ್ಲಿ ಸಭೆ ಸೇರಿತ್ತು. ಸಭೆಯು ರೆಪೊ ದರ ಹೆಚ್ಚಿಸದಿರುವ ಒಕ್ಕೊರಲ ತೀರ್ಮಾನ ಕೈಗೊಂಡಿತ್ತು. ಸಭೆಯಲ್ಲಿ ಚರ್ಚೆಯಾದ ವಿಷಯಗಳನ್ನು ಆರ್‌ಬಿಐ ಶುಕ್ರವಾರ ಬಹಿರಂಗಪಡಿಸಿದೆ.

ಸಭೆಯಲ್ಲಿ ಪಾಲ್ಗೊಂಡಿದ್ದ ಆರ್‌ಬಿಐ ಡೆಪ್ಯುಟಿ ಗವರ್ನರ್ ದೇವವ್ರತ ಪಾತ್ರಾ ಅವರು, ‘ಜಾಗತೀಕರಣಕ್ಕೆ ವಿಮುಖವಾಗಿ ಸಾಗುತ್ತಿರುವ ಜಗತ್ತಿನಲ್ಲಿ ಒಂದು ಸಂಗತಿ ಮಾತ್ರ ಜಗತ್ತಿನ ಎಲ್ಲೆಡೆ ವ್ಯಾಪಕವಾಗಿ ಕಾಣಿಸುತ್ತಿದೆ. ಅದು ಹಣದುಬ್ಬರ ಹೆಚ್ಚಳಕ್ಕೆ ಸಂಬಂಧಿಸಿದ ಎಚ್ಚರಿಕೆಯ ಗಂಟೆ’ ಎಂದು ಸಭೆಯಲ್ಲಿ ಹೇಳಿದ್ದರು.

ಅಭಿವೃದ್ಧಿ ಹೊಂದಿದ ದೇಶಗಳ ಪೈಕಿ ಶೇ 60ರಷ್ಟು ದೇಶಗಳಲ್ಲಿ ಹಣದುಬ್ಬರ ಪ್ರಮಾಣವು ಶೇ 5ಕ್ಕಿಂತ ಹೆಚ್ಚಿದೆ. 1980ರ ದಶಕದ ನಂತರದಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸಿರಲಿಲ್ಲ. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪೈಕಿ ಶೇ 50ಕ್ಕಿಂತ ಹೆಚ್ಚು ದೇಶಗಳಲ್ಲಿ ಹಣದುಬ್ಬರ ಪ್ರಮಾಣವು ಶೇ 7ಕ್ಕಿಂತ ಜಾಸ್ತಿ ಇದೆ. ಬೆಲೆಯ ಏರಿಕೆಯು ಸಮಾಜದ ಸಹನೆಯ ಮಟ್ಟವನ್ನು ಪರೀಕ್ಷಿಸುತ್ತಿದೆ ಎಂದು ಪಾತ್ರಾ ಅವರು ಸಭೆಯಲ್ಲಿ ಹೇಳಿದ್ದರು.

ಎಂಪಿಸಿ ಸದಸ್ಯೆಯಾಗಿರುವ ಅಶೀಮಾ ಗೋಯಲ್ ಅವರು, ‘ಇಂಧನ ಮೇಲಿನ ತೆರಿಗೆಯನ್ನು ತಗ್ಗಿಸಲು ಅವಕಾಶ ಇದೆ. ಎಕ್ಸೈಸ್ ಸುಂಕವನ್ನು 2019ರ ಮಟ್ಟಕ್ಕೆ ತಗ್ಗಿಸಬಹುದು’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.